ಕಬಾಬ್ ವ್ಯಾಪಾರಿಯನ್ನು ಕರೆತಂದು ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದ ಚೈತ್ರ, ಗೋವಿಂದನ ಕಿವಿಗೆ ಹೂವ ಇಟ್ಟು ಎಸ್ಕೇಪ್

 | 
ಕಿ

ಮಾಡೋದೆಲ್ಲ ಮಾಡಿ ಮೊಸಳೆ ಕಣ್ಣೀರು ಹಾಕಿದ್ದರಂತೆ ಎನ್ನುವಂತೆ ವಂಚನೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಚೈತ್ರಾ ಕುಂದಾಪುರ ಸೇರಿದಂತೆ ಆರು ಮಂದಿಯನ್ನು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಈ ಸಂದರ್ಭದಲ್ಲಿ ಚೈತ್ರಾ ಅವರು ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ್ದಾರೆ.

ಉಡುಪಿಯಲ್ಲಿ ಬಂಧನದ ಬಳಿಕ ಆರೋಪಿಗಳನ್ನು ಬೆಂಗಳೂರಿಗೆ ಕರೆತಂದ ಸಿಸಿಬಿ ಪೊಲೀಸರು ಅವರನ್ನು 1ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು. ಈ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಅವರು ಕೋರ್ಟ್‌ ಕಟಕಟೆಯಲ್ಲಿ ನಿಂತು, ಪೊಲೀಸರು ನನ್ನನ್ನು ಎಳೆದಾಡಿ ನೋವುಂಟು ಮಾಡಿದ್ದಾರೆ. 

ನನಗೆ ಯಾಕೆ ಬಂಧಿಸಿದ್ದೇವೆ, ಯಾರು ದೂರು ನೀಡಿದ್ದಾರೆ ಎಂದು ಸರಿಯಾದ ಮಾಹಿತಿ ನೀಡಿಲ್ಲ ಎಂದು ನ್ಯಾಯಾಧೀಶರ ಮುಂದೆ ಗಳ ಗಳನೇ ಕಣ್ಣೀರಿಟ್ಟಿದ್ದಾರೆ. ಪೊಲೀಸರು ನಮ್ಮ ಮನೆಯವರಿಗೆ ಹಾಗೂ ಕುಟುಂಬ ಸದಸ್ಯರಿಗೆ ಯಾವುದೇ ಮಾಹಿತಿ ನೀಡಿಲ್ಲ. ನಾನು ಪೊಲೀಸರಿಗೆ ಕುಟುಂಬ ಸದಸ್ಯರ ಪೋನ್ ನಂಬರ್ ಕೊಟ್ಟರೂ ಕಾಲ್ ಮಾಡಿಲ್ಲ ಎಂಬ ಇತ್ಯಾದಿ ದೂರುಗಳನ್ನು ಮಾಡದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ನ್ಯಾಯಾಧೀಶರು ಉಡುಪಿ ಪೊಲೀಸರನ್ನು ವಿಚಾರಿಸಿದ್ದಾರೆ. ಆರೋಪಿ ಹೇಳುವ ರೀತಿ ಯಾವುದೇ ತೊಂದರೆ ಕೊಟ್ಟಿಲ್ಲ ಎಂದು ಉಡುಪಿ ಠಾಣೆಯ ಎಸಿಪಿ ರೀನಾ ಸುವರ್ಣ ಹೇಳಿದ್ದಾರೆ. ಬಂಧನದ ಸಂದರ್ಭದಲ್ಲಿ ಎಲ್ಲಾ ವಿಡಿಯೋ ಮಾಡಲಾಗಿದೆ, ವೈದ್ಯಕೀಯ ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ನ್ಯಾಯಾಧೀಶರ ಗಮನಕ್ಕೆ ತಂದಿದ್ದಾರೆ ಎನ್ನಲಾಗ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.