ಚಂದನ್ ಶೆಟ್ಟಿ ನಿವೇದಿತಾ ಡಿವೋರ್ಸ್ ಗೆ ಸಿಕ್ತು ನಿಜವಾದ ಕಾರ ಣ;

 | 
Js

ಕನ್ನಡದ ನಟ, ಗಾಯಕ​​ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್ಗೆ ಮುಂದಾಗಿದ್ದಾರೆ. ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಈ ಕ್ಯೂಟ್ ಕಪಲ್ ದಿಢೀರ್ ಅಂತ ಬ್ರೇಕ್ ಹಾಕಿದ್ದಾರೆ. ಈ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದಾರೆ. ಚಂದನ್ ಶೆಟ್ಟಿ, ನಿವೇದಿತಾ ಗೌಡ ವಿಚ್ಛೇದನ ಮಂಜೂರು ಮಾಡಿ ಬೆಂಗಳೂರು ಕೌಟುಂಬಿಕ ನ್ಯಾಯಾಲಯ ಆದೇಶ ಹೊರಡಿಸಿದೆ.

ಇದೀಗ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ಬಗ್ಗೆ ಸ್ಯಾಂಡಲ್​​ವುಡ್​ ನಟಿ ರಾಗಿಣಿ ದ್ವಿವೇದಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಟಿ ರಾಗಿಣಿ, ಅವರ ವೈಯಕ್ತಿಕ ವಿಚಾರಕ್ಕೆ ನಾನು ಕಾಮೆಂಟ್ ಮಾಡಲ್ಲ. ಬದುಕು ತುಂಬಾ ಸುಲಭವಲ್ಲ. ಜೀವನದಲ್ಲಿ ಏರಿಳಿತಗಳು ಇರುತ್ತವೆ. ನಾವೇನು ಕಾಂಟ್ರುಬ್ಯೂಟ್ ಮಾಡದೇ ಹೋದರೆ ನಾವು ಕಾಮೆಂಟ್ ಮಾಡೋಕೆ ಹೋಗಬಾರದು ಎಂದು ಖಾಸಗಿ ವಾಹಿನಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು, ಬಿಗ್​ಬಾಸ್​ ಮೂಲಕ ಖ್ಯಾತಿ ಪಡೆದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸಖತ್​ ಫೇಮಸ್​ ಆಗಿದ್ದರು. ಇದಾದ ಬಳಿಕ 2019ರಲ್ಲಿ ಮೈಸೂರು ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿ ಸಖತ್​ ಸುದ್ದಿಯಲ್ಲಿದ್ದರು. ನಂತರ ಎರಡು ಕುಟುಂಬದ ಒಪ್ಪಿಗೆ ಪಡೆದು 2020ರಲ್ಲಿ ಚಂದನ್ ಮತ್ತು ನಿವೇದಿತಾ ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಇದೀಗ ಮದುವೆಯಾದ ನಾಲ್ಕೇ ವರ್ಷಕ್ಕೆ ಜೋಡಿ ದೂರವಾಗೋ ಮೂಲಕ ಶಾಕ್ ನೀಡಿದ್ದಾರೆ.

ಇನ್ನು ಈ ಕುರಿತು ನಿವೇದಿತಾ ಮಾತನಾಡಿ, ಮದುವೆ ನಮ್ಮ ವೃತ್ತಿ ಜೀವನಕ್ಕೆ ಅಡ್ಡಿಯಾಗಿಲ್ಲ. ವದಂತಿಗಳು ನಮಗಷ್ಟೇ ಅಲ್ಲದೆ ನಮ್ಮ ಕುಟುಂಬಕ್ಕೂ ನೋವು ತಂದಿವೆ. ಯಾರ ಜೊತೆಗಾದರೂ ಪೋಸ್ಟ್‌ ಹಾಕಿದ ತಕ್ಷಣ ವ್ಯೂವ್ಸ್‌ಗಳಿಗಾಗಿ ಸಂಬಂಧ ಕಲ್ಪಿಸುತ್ತಾರೆ. ಇದು ಮನಸ್ಸಿಗೆ ನೋವಾಗುತ್ತದೆ. ನಾನೂ ಹಾಗೂ ಚಂದನ್‌ ಒಳ್ಳೆಯ ಗೆಳೆಯರು. ನಮ್ಮ ನಮ್ಮ ವೃತ್ತಿಯಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ಇರುತ್ತೇವೆ. ವಿಚ್ಛೇದನ ನಿರ್ಧಾರದ ಬಗ್ಗೆ ಯಾವುದೇ ವಿಷಾದ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.