ಜೊತೆಯಾಗಿ ನಟಿಸಿದ ನಟನನ್ನೇ ಮದುವೆಯಾದ ಚಂದನ ಆನಂತ ಕೃಷ್ಣ
Nov 24, 2024, 11:33 IST
|
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಜಾನವಿ ಪಾತ್ರದಲ್ಲಿ ಮಿಂಚುತ್ತಿರುವ ಚಂದನಾ ಅನಂತಕೃಷ್ಣ ಮದುವೆ ಆಗುತ್ತಿದ್ದಾರೆ. ಚಂದನಾ ಅನಂತಕೃಷ್ಣ ಮತ್ತು ಪ್ರತ್ಯಕ್ಷ್ ಇದೇ ನವೆಂಬರ್ 28ರಂದು ಮದುವೆ ಆಗುತ್ತಿದ್ದಾರೆ. ಭಾವಿ ಪತಿ ಪ್ರತ್ಯಕ್ಷ್ ಜೊತೆಗಿನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮನೆಯಲ್ಲಿ ಈಗಾಗಲೇ ಮದುವೆ ಶಾಸ್ತ್ರ ಆರಂಭವಾಗಿದೆ.
ಕನ್ನಡ ಚಿತ್ರರಂಗದಲ್ಲಿ ಸಖತ್ ಹೆಸರು ಮಾಡಿದ್ದ ದಿವಂಗತ ನಟ ಉದಯ್ ಹುತ್ತಿನಗದ್ದೆ ಮತ್ತು ನಟಿ ಲಲಿತಾಂಜಲಿ ದಂಪತಿಯ ಪುತ್ರನೇ ಪ್ರತ್ಯಕ್ಷ್. ಅಗ್ನಿಪರ್ವ, ಶುಭ ವಿಲನ, ಜಯಭೇರಿ, ಉದ್ಭವ, ಅಮೃತ ಬಿಂದು, ಶಿವಯೋಗಿ ಅಕ್ಕಮಹಾದೇವಿ, ಉಂಡು ಹೋದ ಕೊಂಡು ಹೋದ ಸೇರಿದಂತೆ ಸೂಪರ್ ಹಿಟ್ ಸಿನಿಮಾಗಳಲ್ಲಿ ಉದಯ್ ನಟಿಸಿದ್ದರು. ನಟಿ ಲಲಿತಾಂಜಲಿ ಕಿನ್ನರಿ ಮತ್ತು ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ನಟಿಸಿದ್ದಾರೆ. ಹೀಗಾಗಿ ಚಂದನಾ ಕಲಾವಿದರ ಕುಟುಂಬವನ್ನು ಸೇರಿದ್ದಾರೆ.
ಕುಟುಂಬದ ಸಮ್ಮುಖದಲ್ಲಿ ಸ್ನೇಹಿತರು, ಸಂಬಂಧಿಕರು ಹಾಗೂ ಕಲಾವಿದರು ನಟಿ ಚಂದನಾ ಅವರ ಮದುವೆಗೆ ಸಾಕ್ಷಿಯಾಗಲಿದ್ದಾರೆ ಎನ್ನಲಾಗಿದೆ.ಚಂದನಾ ಅನಂತಕೃಷ್ಣ ಅವರು ಬಿಕಾಂ ಓದಿದ್ದಾರೆ. ರಾಜಾ ರಾಣಿ, ಮುದ್ದು ಮಣಿಗಳು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಫರ್ಧಿಯಾಗಿದ್ದರು. ಡ್ಯಾನ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದರು.
ಹಾಡು ಕರ್ನಾಟಕ ಎಂಬ ಕಾರ್ಯಕ್ರಮವನ್ನು ಚಂದನಾ ನಡೆಸಿಕೊಟ್ಟಿದ್ದರು. ಇನ್ನು ಚಂದನಾ ಅವರು ಅದ್ಭತವಾಗಿ ಹಾಡುತ್ತಾರೆ.ಚಂದನಾ ಅನಂತಕೃಷ್ಣ ಬರೀ ಕಿರುತರೆ ನಟಿ, ರಂಗಭೂಮಿ ಕಲಾವಿದೆ ಮಾತ್ರವಲ್ಲ ಗಾಯಕಿ ಹಾಗೂ ಭರತನಾಟ್ಯ ಕಲಾವಿದೆಯೂ ಹೌದು.
ಈ ಸೀರಿಯಲ್‌ಗೂ ಮುನ್ನ ಭರ್ಜರಿ ಬ್ಯಾಚುಲರ್ಸ್ ಶೋನಲ್ಲೂ ಚಂದನಾ ಕಾಣಿಸಿಕೊಂಡು, ಅರ್ಧಕ್ಕೆ ಹಿಂದೆ ಸರಿದಿದ್ದರು. ತೆಲುಗಿನ ವರುಧಿನಿ ಪರಿಣಯಂ ಮೂಲಕ ತೆಲುಗು ಕಿರುತೆರೆಗೂ ತೆರಳಿದರು. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.