ಸದನದಲ್ಲಿ ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ರೋಷಾವೇಶ, ಕುಮಾರಣ್ಣನಿಗೆ ಭಾರೀ ಮುಖಭಂಗ

 | 
ರಿ

 ವಿಧಾನಸಭಾ ಕಲಾಪದಲ್ಲಿ ಗುರುವಾರ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಮಾಡಿದ ಕೆಲವು ಗಂಭೀರ ಆರೋಪಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಚೆಲುವರಾಯ ಸ್ವಾಮಿ ಸೇರಿ ಕಾಂಗ್ರೆಸ್ ಶಾಸಕರು ಕೆರಳಿ ತೀವ್ರ ವಾಕ್ಸಮರ ನಡೆಸಿದ್ದಾರೆ.
ನಿಮಗೂ ಕೇರ್‌ ಮಾಡಲ್ಲ, ಯಾರಪ್ಪಂಗೂ ಕೇರ್‌ ಮಾಡಲ್ಲ, ಏಯ್‌ ಹೋಗ್ರಿ. ನಿಮ್ಮನ್ನ ನೋಡಿ ಹೆದ್ರಲ್ಲ’... ಹೀಗೆಂದು ಕೋಪದಿಂದ ಮುಖ ಕೆಂಪು ಮಾಡಿಕೊಂಡು ಗುಡುಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ.


‘ದೇವೇಗೌಡರ ಕುಟುಂಬದ ಬಗ್ಗೆ ಚೆನ್ನಾಗಿ ಉತ್ತರ ಕೊಟ್ಟಿದ್ದೀರಿ ಎಂದು ಸಿಎಂ ಶೇಕ್‌ ಹ್ಯಾಂಡ್‌ ಮಾಡಿದರು. ವ್ಯಂಗ್ಯವಾದ ನಗು ಬೇರೆ. ಇದೆನ್ನೆಲ್ಲಾ ಗಮನಿಸುತ್ತಿದ್ದೇನೆ. ನೀವು ದೇವೇಗೌಡರ ಕುತ್ತಿಗೆ ಕೊಯ್ದವರು, ಬಿಜೆಪಿ ‘ಬಿ’ ಟೀಮ್‌ ಎಂದಿರಿ’ ಎಂದು ಸಿಟ್ಟಿನಿಂದ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದು ಜೆಡಿಎಸ್‌ ಶಾಸಕಾಂಗ ಪಕ್ಷ ನಾಯಕ ಎಚ್‌.ಡಿ.ಕುಮಾರಸ್ವಾಮಿ.


ಮಂಡ್ಯ ಜಿಲ್ಲೆಯ ಕೆಎಸ್‌ಆರ್‌ಟಿಸಿ ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣದ ಕುರಿತ ಚರ್ಚೆಯ ವೇಳೆ ಕುಮಾರಸ್ವಾಮಿ ಮತ್ತು ಸಚಿವ ಎನ್‌.ಚಲುವರಾಯಸ್ವಾಮಿ ಮಧ್ಯೆ ಹೊತ್ತಿಕೊಂಡ ಜಗಳ ಪರಸ್ಪರ ಏಕವಚನಕ್ಕೆ ತಿರುಗಿತು. ಆ ಬಳಿಕ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಏರಿದ ಧ್ವನಿಯಲ್ಲಿ ಅಬ್ಬರಿಸಿದರು. 


ಚಲುವರಾಯಸ್ವಾಮಿ ವಾಗ್ದಾಳಿಯ ಬಳಿಕ ಮುಖ್ಯಮಂತ್ರಿಯವರ ಮುಖವನ್ನು ಗಮನಿಸಿದ ಕುಮಾರಸ್ವಾಮಿ, ‘ಶೇಕ್‌ ಹ್ಯಾಂಡ್‌...ಹುಸಿ ನಗೆ ಬೇರೆ, ಇದಕ್ಕೆಲ್ಲ ಕೇರ್‌ ಮಾಡೊಲ್ಲ. ನಮ್ಮಲ್ಲಿದ್ದವರನ್ನು ಎಳೆದುಕೊಂಡು ಆಟ ಆಡುತ್ತಿದ್ದೀರಾ, ನಮಗೂ ಆಟ ಆಡಲು ಬರುತ್ತದೆ’ ಎಂದು ಸಿಟ್ಟಿನಿಂದ ಮಾತಿನ ಚಾಟಿ ಬೀಸಿದರು.


ಇದರಿಂದ ಕೆರಳಿದ ಸಿದ್ದರಾಮಯ್ಯ ಕುಮಾರಸ್ವಾಮಿಯತ್ತ ಕೈ ತೋರಿಸುತ್ತಾ ‘ಏಯ್ ನಿಮಗೆ ಹೆದರಲ್ಲ, ನಾನೂ ಕೇರ್‌ ಮಾಡಲ್ಲ. ನಿಮ್ಮನ್ನು ನೋಡಿ ಹೆದರುವುದೂ ಇಲ್ಲ’ ಎಂದು ಹೇಳಿದರು. ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಶಾಸಕರು ಅದರಲ್ಲೂ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದವರು ಕೂಡ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.


ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.