'ಪ್ರತಾಪ್ ಮೈಮೇಲೆ ಬಿದ್ದ ಕಾಲೇಜ್ ಹುಡುಗಿಯರು' ನಾಚಿ ನೀರಾದ ಡ್ರೋನ್

 | 
Ghu

ಬಿಗ್‌ಬಾಸ್‌ ಕನ್ನಡ ಸೀಜನ್‌ 10ರ ರನ್ನರ್‌ ಅಪ್‌ ಡ್ರೋನ್‌ ಪ್ರತಾಪ್ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು, ಪ್ರತಾಪ್‌ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ. ಅಲ್ಲದೇ ಡ್ರೋನ್‌ ಪ್ರತಾಪ್ ಕಾರ್ಯ ಮೆಚ್ಚಿ ಮನಸಾರೆ ಹರಸಿ ನೀವು ಚೆನ್ನಾಗಿರಬೇಕು ಎಂದು ಹಾರೈಸಿದ್ದಾರೆ.

ಬಿಗ್​ಬಾಸ್ ಕನ್ನಡ ಸೀಜನ್‌ 10ರ ಗ್ರಾಂಡ್‌ ಫಿನಾಲೆ ದಿನ ​ ವೇದಿಕೆ ಮೇಲೆ ಮಾತನಾಡಿದ್ದ ಪ್ರತಾಪ್ ಈ ಬಿಗ್‌ಬಾಸ್‌ನಲ್ಲಿ ಗೆದ್ದ ಹಣದಲ್ಲಿ ಒಂದು ರೂಪಾಯಿ ಕೂಡ ನನಗೆ ಬೇಡ, ಗೆದ್ದರೆ ಬರುವ ಹಣ ಮತ್ತು ನೀಡುವ ವಸ್ತುಗಳನ್ನು ಅಗತ್ಯ ಇರುವವರಿಗೆ ನೀಡುವ ಭರವಸೆ ನೀಡಿದ್ದರು. ಬಿಗ್​ಬಾಸ್ ನಂತಹ ಬೃಹತ್‌ ವೇದಿಕೆಯಲ್ಲಿ ಕೊಟ್ಟ ಮಾತಿನಂತೆ ಡ್ರೋನ್‌ ಪ್ರತಾಪ್‌ ನಡೆದುಕೊಂಡಿದ್ದಾರೆ.

ಈ ಬಾರಿಯ ಬಿಗ್‌ಬಾಸ್‌ನಲ್ಲಿ ಪ್ರತಾಪ್ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದ್ದರು. ಈ ವೇಳೆ ಅವರಿಗೆ 10 ಲಕ್ಷ ಬಹುಮಾನದ ಮೊತ್ತ ಹಾಗೂ ಒಂದು ಎಲೆಕ್ಟ್ರಿಕ್ ಬೈಕ್ ಉಡುಗೊರೆಯಾಗಿ ನೀಡಲಾಗಿತ್ತು. ಅದರಲ್ಲಿ ಎಲೆಕ್ಟ್ರಿಕ್ ಬೈಕ್ ಅನ್ನು ಪ್ರತಾಪ್ ಅಗತ್ಯವಿರುವ ಯುವಕನೊಬ್ಬನಿಗೆ ದಾನ ಮಾಡಿದ್ದಾರೆ. ಪ್ರತಾಪ್ ಬೈಕ್‌ ಯುವಕನಿಗೆ ನೀಡಿರುವ ಫೋಟೋ ವೈರಲ್‌ ಆಗುತ್ತಿದ್ದು, ಈ ಬಗ್ಗೆ ಸ್ವತಃ ಡ್ರೋನ್‌ ಪ್ರತಾಪ್ ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲ ಇತ್ತೀಚಿಗೆ ಹಲವರು ಜನ ಸೇರಿದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದರು. ಕಾರಿನಿಂದ ಇಳಿದು ಬರಿಗಾಲಿನಲ್ಲಿ ಜನರ ಮದ್ಯೆ ನಡೆದಿದ್ದಾರೆ. 

ಇದನ್ನೂ ನೋಡಿದ ಹುಡುಗಿಯರು ಪ್ರತಾಪ್ ಸರಳತೆಗೆ ಮಾರು ಹೋಗಿದ್ದಾರೆ. ಅಲ್ಲದೇ ತಮ್ಮ ಅಕೌಂಟ್ ಅಲ್ಲಿ ಪೊಸ್ಟ್ ಮಾಡಿದ್ದಾರೆ. ಇನ್ನು ಈ ಪೋಸ್ಟ್‌ಗೆ ಅಭಿಮಾನಿಗಳು ಮೆಚ್ಚುಗೆಯ ಪೂರವನ್ನೇ ಹರಿಸಿದ್ದು, ನಿಮಗೆ ವೋಟ್‌ ಹಾಕಿದ್ದಕ್ಕೂ ಸಾರ್ಥಕವಾಯ್ತು, ಪ್ರತಾಪ್ ಅವರೆ ನಿಮ್ಮ ಈ ಗುಣನೇ ಇಷ್ಟ ಆಗಿದ್ದು, ಏಷ್ಟು ಒಳ್ಳೆ ಮನಸ್ಸು ಪ್ರತಾಪ್ ಎಂದು ಹಾಡಿ ಹೊಗಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.