ಮದುವೆ ವಾರ್ಷಿಕೋತ್ಸವ ಆಚರಿಸಿದ ದರ್ಶನ್; ಗಂಡನ ದುಬಾರಿ ಗಿಫ್ಟ್ ನೋಡಿ ಪತ್ನಿ ಫಿದಾ

 | 
Hu

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ಇತ್ತೀಚೆಗಷ್ಟೇ ವಿದೇಶ ಪ್ರವಾಸ ಕೈಗೊಂಡಿದ್ದರು. ಇದೀಗ ಪತಿ ಡಿಬಾಸ್ ದರ್ಶನ್ ಜೊತೆಗೆ ವಿಜಯಲಕ್ಷ್ಮೀ ದುಬೈಗೆ ಹಾರಿದ್ದಾರೆ. ದುಬೈನಲ್ಲಿ ಗ್ರ್ಯಾಂಡ್ ಆಗಿ ವಿವಾಹ ವಾರ್ಷಿಕೋತ್ಸವವನ್ನ ಆಚರಿಸಿಕೊಂಡಿದ್ದಾರೆ ವಿಜಯಲಕ್ಷ್ಮೀ ಹಾಗೂ ದರ್ಶನ್.

2003ನೇ ಇಸವಿಯ ಮೇ19 ರಂದು ವಿಜಯಲಕ್ಷ್ಮೀ ಹಾಗೂ ದರ್ಶನ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ವಸಂತ್ ಮಹಲ್‌ನಲ್ಲಿ ದರ್ಶನ್ - ವಿಜಯಲಕ್ಷ್ಮೀ ವಿವಾಹ ಬಂಧನಕ್ಕೆ ಒಳಗಾದರು. 19-05-2003 ರಂದು ಬೆಳಗ್ಗೆ 9.10 ರಿಂದ 9.50 ರವರೆಗಿದ್ದ ಶುಭ ಮಿಥುನ ಲಗ್ನದಲ್ಲಿ ವಿಜಯಲಕ್ಷ್ಮೀ ಕೊರಳಿಗೆ ದರ್ಶನ್ ಮಾಂಗಲ್ಯಧಾರಣೆ ಮಾಡಿದ್ದರು.

ದರ್ಶನ್ ಹೀರೊ ಆಗಿ ಸಕ್ಸಸ್ ಆಗುತ್ತಿದ್ದಂತೆ ವಿಜಯಲಕ್ಷ್ಮೀ ಕೈ ಹಿಡಿದಿದ್ದರು. ಅಂದು ಚಿತ್ರರಂಗದ ಕೆಲವೇ ಆಪ್ತರು ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದರು. 'ಲಂಕೇಶ್ ಪತ್ರಿಕೆ' ಸಿನಿಮಾ ಬಿಡುಗಡೆ ಬೆನ್ನಲ್ಲೇ ದರ್ಶನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿಗೆ ವಿನೀಶ್ ಎನ್ನುವ ಒಬ್ಬ ಮಗನಿದ್ದಾನೆ. ವಿನೀಶ್ ಕೂಡ ತಂದೆಯ ಎರಡು ಸಿನಿಮಾಗಳಲ್ಲಿ ಮಿಂಚಿದ್ದಾನೆ.

ಇದೀಗ ದರ್ಶನ್ - ವಿಜಯಲಕ್ಷ್ಮೀ ತಮ್ಮ 21ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ದುಬೈನಲ್ಲಿ ಅದ್ಧೂರಿಯಾಗಿ ಮ್ಯಾರೇಜ್ ಆನಿವರ್ಸರಿ ಸೆಲೆಬ್ರೇಟ್ ಮಾಡಿದ್ದಾರೆ.ದುಬೈನಲ್ಲಿ ನಟ ದರ್ಶನ್‌ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. 'ಕಾಟೇರ' ಸಿನಿಮಾ ಪ್ರೀಮಿಯರ್ ಶೋಗೆ ಅಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ದುಬೈ ಕನ್ನಡಿಗರು 'ಕರುನಾಡ ಅಧಿಪತಿ' ಎನ್ನುವ ಬಿರುದು ಕೊಟ್ಟಿದ್ದರು. ಈ ಹಿಂದೆ ಕೂಡ ಹಲವು ಬಾರಿ ಚಾಲೆಂಜಿಂಗ್ ಸ್ಟಾರ್ ದುಬೈಗೆ ಹೋಗಿ ಬಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.