ಚಿಕ್ಕಣ್ಣ ಮೇಲೆ ಎಗರಿ ಬಿದ್ದ ದರ್ಶನ್, ವೇದಿಕೆ ಮೇಲೆ ಎಡವಟ್ಟು ಮಾಡಿಕೊಂಡ ಚಿಕ್ಕ ಣ್ಣ

 | 
N

ನಟ ದರ್ಶನ್ & ಚಿಕ್ಕಣ್ಣ ನಡುವೆ ಅತ್ಯಂತ ಆತ್ಮೀಯ ಸಂಬಂಧ ಇದೆ. ಈಗಾಗಲೇ ಹಲವು ವಿಡಿಯೋಗಳಲ್ಲಿ ಅಭಿಮಾನಿಗಳು ಇದನ್ನು ಕಣ್ತುಂಬಿಕೊಂಡಿದ್ದಾರೆ. ಇದೀಗ ನಟ ದರ್ಶನ್ ಅವರ ಬಗ್ಗೆ ಚಿಕ್ಕಣ್ಣ ಮುಕ್ತವಾಗಿ ಮಾತನಾಡಿದ್ದಾರೆ. ಚಿಕ್ಕಣ್ಣ ಆಡಿರುವ ಮಾತುಗಳು ಈಗ ಫುಲ್ ವೈರಲ್ ಆಗುತ್ತಿದ್ದು, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗು ಭಾರಿ ಖುಷಿ ಕೊಟ್ಟಿದೆ. ಅಷ್ಟಕ್ಕೂ ಚಿಕ್ಕಣ್ಣ ಈಗ ದರ್ಶನ್ ಅವರ ಬಗ್ಗೆ ಹೇಳಿದ್ದೇನು?

ಕನ್ನಡ ಸಿನಿ ರಂಗಕ್ಕೆ 2011ರಲ್ಲಿ ನಟ ಚಿಕ್ಕಣ್ಣ ಎಂಟ್ರಿ ಕೊಟ್ಟಿದ್ದರು ಕಿರಾತಕ ಸಿನಿಮಾ ಮೂಲಕ ಕನ್ನಡಿಗರ ಬಣ್ಣದ ಲೋಕಕ್ಕೆ ಬಂದಿದ್ದರು ಚಿಕ್ಕಣ್ಣ. ಇದಾದ ಬಳಿಕ ಚಿಕ್ಕಣ್ಣಗೆ, ಸಾಲು ಸಾಲು ಆಫರ್ಸ್ ಬಂದಿದ್ದವು. ಹೀಗೆ ನೋಡ ನೋಡುತ್ತಲೇ ದೊಡ್ಡದಾಗಿ, ಕನ್ನಡ ಸಿನಿಮಾ ರಂಗದಲ್ಲಿ ಬಿಡುವೇ ಇಲ್ಲದ ನಟನಾಗಿ ಬೆಳೆದು ನಿಂತಿದ್ದಾರೆ ಚಿಕ್ಕಣ್ಣ. ಈ ನಟ ಮೊದಲನೆ ಬಾರಿಗೆ ಹೀರೋ ಆಗಿ ನಟಿಸಿದ್ದು, 'ಉಪಾಧ್ಯಕ್ಷ' ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಸಮಯದಲ್ಲೇ ಕಾಟೇರ ದರ್ಶನ್ ಅವರ ಬಗ್ಗೆ ಚಿಕ್ಕಣ್ಣ ಮನಸ್ಸು ತುಂಬಿ ಮಾತನಾಡಿದ್ದಾರೆ.

ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಕಾಟೇರ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ದರ್ಶನ್‌ ಅವರಿಗೆ 'ಭೂಮಿ ಪುತ್ರ' ಬಿರುದು ಕೊಡಲಾಗಿದೆ. ರಾಜ್ಯ ರೈತ ಸಂಘ ಈ ಅಭಿನಂದನಾ ಸಮಾರಂಭ ಆಯೋಜಿಸಿತ್ತು. ಇದೇ ವೇದಿಕೆ ಮೇಲೆ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ನಟ ದರ್ಶನ್ ಅವರಿಗೆ ಭೂಮಿ ಪುತ್ರ ಬಿರುದು ನೀಡಿದ್ದರು. ಹೀಗೆ ಕಾಟೇರ ಸಿನಿಮಾ ಯಶಸ್ಸಿನ ಬೆನ್ನಲ್ಲೇ ದರ್ಶನ್ ಅವರ ಅಭಿಮಾನಿಗಳಿಗೆ ಡಬಲ್ ಖುಷಿಯು ಸಿಕ್ಕಂತಾಗಿದೆ. ಹೀಗಿದ್ದಾಗ ನಟ ಚಿಕ್ಕಣ್ಣ ಇದೇ ವೇದಿಕೆ ಮೇಲೆ ನಿಂತು ನಟ ದರ್ಶನ್ ಅವರ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.

ಹಲವು ವರ್ಷದಿಂದ ಚಿಕ್ಕಣ್ಣ & ದರ್ಶನ್ ಅವರು ಒಟ್ಟಾಗಿದ್ದಾರೆ. ಇದೀಗ ಕಾಟೇರ ಸಂಭ್ರಮ ಕಾರ್ಯಕ್ರಮದಲ್ಲಿ ನಟ ಚಿಕ್ಕಣ್ಣ ಅವರು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರಿತಾಗಿ ಮಾತನಾಡಿದ್ದಾರೆ. ಹಾಗೇ ಕಾಟೇರ ಸಿನಿಮಾ ಕೊಟ್ಟಿದ್ದಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಹೀಗೆ ಕನ್ನಡಿಗರ ಮನಸ್ಸು ಗೆದ್ದ ದರ್ಶನ್ ಅವರನ್ನು ಹಾಡಿ ಹೊಗಳಿದ್ದಾರೆ ನಟ ಚಿಕ್ಕಣ್ಣ. ಇದೀಗ ಚಿಕ್ಕಣ್ಣ ಅವರ ಹೇಳಿಕೆ ವೈರಲ್ ಆಗುತ್ತಿದೆ. ಸಿಕ್ಕಾಪಟ್ಟೆ ಹೋಗಳಬೇಡ ಸಾಕು ಎಂದು ದರ್ಶನ ಚಿಕ್ಕಣ್ಣನನ್ನು ಗದರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.