ಅರಣ್ಯ ಅಧಿಕಾರಿಗಳ ಬಳಿ ನಕಲಿ ಎಂದಿದ್ದ ದರ್ಶನ್, ಆದರೆ ಖ್ಯಾತ ವಕೀಲರು ಹೇಳಿದ್ದೇನು ಗೊತ್ತಾ

 | 
ಪು

ರಾಜ್ಯದಲ್ಲಿ ಹುಲಿಯ ಅಬ್ಬರ ಜೋರಾಗಿದೆ. ಎಲ್ಲಿ ನೋಡಿದ್ರೂ ವ್ಯಾಘ್ರರಾಯ ಉಗುರಿನದ್ದೇ ಮಾತು. ಅವರ ಬಳಿ ಹುಲಿ ಉಗುರು ಇದ್ಯಂತೆ, ಇವರ ಬಳಿ ಇದ್ಯಂತೆ ಅಂತ ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೆ ಸ್ಯಾಂಡಲ್‌ವುಡ್‌ ನಟರ ಮನೆ ಶೋಧವೂ ನಡೆಯುತು. ಈ ಪೈಕಿ ನಟ ದರ್ಶನ್‌ ಮನೆಯಲ್ಲೂ ಸಹ ಅರಣ್ಯಾಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು.

ಹೌದು.. ಬಿಗ್‌ ಬಾಸ್‌ ಮನೆಯಿಂದ ಆರಂಭವಾದ ಹುಲಿ ಉಗುರಿನ ಪ್ರಕರಣ ಇದೀಗ ಸ್ಯಾಂಡಲ್‌ವುಡ್‌ ಅಂಗಳದಲ್ಲಿದೆ. ನಟ ದರ್ಶನ್‌, ಜಗ್ಗೇಶ್‌, ನಿಖಿಲ್‌ ಕುಮಾರಸ್ವಾಮಿ, ರಾಕ್‌ ಲೈನ್‌ ವೆಂಕಟೇಶ್‌ ಬಳಿ ಹುಲಿ ಉಗುರು ಇದೆ ಎಂದು ಹೇಳಲಾಗಿತ್ತು. ಇದರ ಬೆನ್ನಲ್ಲೆ ಅರಣ್ಯಾಧಿಕಾರಿಗಳೂ ಸಹ ತಂಡ ರಚಿಸಿ ಕಾರ್ಯಾಚಾರಣೆ ಕೈಗೊಂಡರು. 

ನಟ ಚಾಲೆಜಿಂಗ್‌ ಸ್ಟಾರ್‌ ದರ್ಶನ್‌ ಅವರ ಮನೆಯಲ್ಲೂ ಸಹ ಶೋಧಿಸಲಾಯಿತು ಮೂಲಗಳ ಪ್ರಕಾರ ದರ್ಶನ್ ಅವರ ಮನೆಯಲ್ಲಿ ಒಂದಲ್ಲ ಎರಡಲ್ಲ 8 ರಿಂದ 10 ಹುಲಿ ಉಗುರುಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ. ಉಗುರಿನ ಮಾದರಿಯ ಪೆಂಡೆಂಟ್​​ಗಳು ದೊರೆತಿವೆ. 
ಆದರೆ, ಯಾವುದೂ ಅಸಲಿ ಅಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. 

ಪ್ರಾಣಿ ಪ್ರಿಯರಾದ ಅವರು ಎಂದೆಂದಿಗೂ ಪ್ರಾಣಿಗಳ ಹಲ್ಲು ಉಗುರು ಚರ್ಮ ಬಳಸಲು ಇಷ್ಟ ಪಡುವುದಿಲ್ಲ ಎಂಬುದು ಸಾಬೀತಾಗಿದೆ. ದಚ್ಚು ಮನೆ ಸರ್ಚ್​ಗೆ ಬಂದ ವೇಳೆ ಅಧಿಕಾರಿಗಳಿಗೆ ಡಿಬಾಸ್‌ ಸಂಪೂರ್ಣ ಸಹಕಾರ ನೀಡಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳು ಬಂದ ತಕ್ಷಣ ಮನೆ ಬಾಗಿಲು ಓಪನ್ ಮಾಡಿ ಅವರನ್ನು ಸ್ವಾಗತಿಸಿದ್ದಾರೆ.

ಮೂಲಗಳ ಪ್ರಕಾರ ದರ್ಶನ್ ಮನೆಯಲ್ಲಿ 8 ರಿಂದ 10 ಹುಲಿ ಉಗುರಿನ ಮಾದರಿಯ ಪೆಂಡೆಂಟ್​​ಗಳು ಸಿಕ್ಕಿದ್ದು, ಅವು ಯಾವೂವು ಅಸಲಿ ಅಲ್ಲ ಎನ್ನಲಾಗ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.