ದರ್ಶನ್ ಪವಿತ್ರ ಅಂದರ್; ಒಮ್ಮೆಲೆ ಸಿಡಿಮಿಡಿಗೊಂಡ ವಿಜಯಲಕ್ಷ್ಮಿ ನಿರ್ಧಾರ ಏ ನು ಗೊ ತ್ತಾ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಚಿತ್ರದುರ್ಗ ಜಿಲ್ಲಾ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಘುಗೆ ಕೂಡ ಸಿನಿಮಾ ಶೈಲಿಯ ಹಿನ್ನೆಲೆ ಇದೆ.ಕೋಳಿ ಬುರುಜನಹಟ್ಟಿ ಮೂಲದ ರಘು 15 ವರ್ಷಗಳಿಂದ ನಟ ದರ್ಶನ್‌ನ ಅಪ್ಪಟ ಅಭಿಮಾನಿಯಾಗಿದ್ದು, ವೃತ್ತಿಯಲ್ಲಿ ಟ್ಯಾಕ್ಸಿ ಚಾಲಕನಾಗಿದ್ದ ಎಂದು ಸ್ಥಳೀಯರು ಹೇಳುತ್ತಾರೆ.
ದರ್ಶನ್‌ರನ್ನು ಆಗಾಗ ಭೇಟಿಯಾಗುತ್ತಿದ್ದ. ಚಿತ್ರದುರ್ಗದ ಮಾರ್ಗ ಮಧ್ಯದಲ್ಲಿ ದರ್ಶನ್ ಪ್ರಯಾಣಿಸುವಾಗ ಹೋಗಿ ಭೇಟಿಯಾಗುತ್ತಿದ್ದ. ದರ್ಶನ್‌ರ ಯಾವುದೇ ಚಿತ್ರ ಬಿಡುಗಡೆಯಾದರೂ ಚಿತ್ರಮಂದಿರದ ಆವರಣದಲ್ಲಿ ಮುಂಚೂಣಿಯಲ್ಲಿದ್ದು, ಕಟೌಟ್‌ಗಳನ್ನು ಕಟ್ಟಿಸುತ್ತಿದ್ದ.
13 ವರ್ಷಗಳ ಹಿಂದೆ ತಮಟ ಕಲ್ಲುಗ್ರಾಮದ ಎನ್.ಸಹನಾರನ್ನು ಪ್ರೀತಿಸಿ, ವಿವಾಹವಾಗಿದ್ದ. ಇಂಚರಾ ಎನ್ನುವ ಪುತ್ರಿ ಇದ್ದು, ಆಕೆಯ ಮೂರನೇ ವರ್ಷದ ಜನ್ಮ ದಿನಕ್ಕೆ ಬುಲ್ ಬುಲ್ ಸಿನಿಮಾದ ಶೂಟಿಂಗ್ ಸ್ಪಾಟ್‌ಗೆ ಹೋಗಿ ದರ್ಶನ್ ರಿಂದ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡು ಬಂದಿದ್ದ. ತಮ್ಮ ಪ್ರೇಮ ವಿವಾಹವನ್ನು ಎರಡೂ ಮನೆಯವರು ಒಪ್ಪದ ಕಾರಣ ತಮಟ ಕಲ್ಲು ರಸ್ತೆಯಲ್ಲಿ ಪ್ರತ್ಯೇಕವಾಗಿ ಮನೆ ಮಾಡಿಕೊಂಡು ವಾಸಿಸುತ್ತಿದ್ದರು.
ರೇಣುಕಾಸ್ವಾಮಿ ನಾಪತ್ತೆಯಾದ ಶನಿವಾರದ ದಿನ ಬೆಳಗಿನ ಜಾವ ರಘು ಸಹಾ ಮನೆ ಬಿಟ್ಟಿದ್ದ. ಇದಕ್ಕೂ ಮೂರ್ನಾಲ್ಕು ದಿನ ಮೊದಲೇ ದರ್ಶನ್ ಆಪ್ತರು ಸಂಪರ್ಕಿಸಿ ಚಿತ್ರದುರ್ಗ ಮೂಲದ ವ್ಯಕ್ತಿಯೊಬ್ಬ ಕಿರುಕುಳ ನೀಡುತ್ತಿದ್ದು, ಪತ್ತೆ ಹಚ್ಚಲು ಹೇಳಿದ್ದಾರೆ. ರಘು ಫೇಕ್ ಐಡಿಯೊಂದನ್ನು ಕ್ರಿಯೇಟ್ ಮಾಡಿಸಿ ಹೆಣ್ಣು ಮಕ್ಕಳ ರೀತಿ ಮಾತನಾಡಿ ರೇಣುಕಾಸ್ವಾಮಿಯನ್ನು ಶನಿವಾರ ಚಳ್ಳಕೆರೆ ಗೇಟ್‌ಗೆ ಕರೆಸಿಕೊಂಡು ದರ್ಶನ್‌ರನ್ನು ಭೇಟಿ ಮಾಡಿಸುವುದಾಗಿ ಹೇಳಿ, ದರ್ಶನ್ ಸಹಚರರ ಜತೆ ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂದು ಹೇಳಲಾಗಿದೆ.
ರೇಣುಕಾ ಸ್ವಾಮಿ ಹಾಗೂ ದರ್ಶನ್ ಪತ್ನಿ ಪವಿತ್ರ ಗೌಡ ಸಂಪರ್ಕ ಹೇಗೆ ಎಂಬುದು ಮಾತ್ರ ಇಲ್ಲಿ ತಿಳಿದಿಲ್ಲ. ರೇಣುಕಾ ಸ್ವಾಮಿ ಮನೆ ಸಮೀಪ ಇದ್ದ ಹಿಂದೂ ಪರಿವಾರ ಕಾರ್ಯಕರ್ತರ ಪ್ರಕಾರ, ಆತ ಯಾವುದೇ ನಿರ್ದಿಷ್ಟ ಸಿನಿಮಾ ನಟನ ಹುಚ್ಚು ಅಭಿಮಾನ ಇಟ್ಟುಕೊಳ್ಳುವಂಥ ವ್ಯಕ್ತಿತ್ವವೇ ಆಗಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಸಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡಿ ನಟನ ಕೆಂಗಣ್ಣಿಗೆ ಗುರಿಯಾಗಿ ಶಿವನ ಪಾದ ಸೇರಿದ್ದಂತೂ ಸತ್ಯ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.