ಜೈಲಲ್ಲಿದ್ರು ಬುದ್ಧಿ ಕಲಿಯದ ದಾಸ, ಮೀಡಿಯಾ ಮುಂದೆ ಅಸಭ್ಯ ವತ೯ನೆ
Sep 13, 2024, 13:39 IST
|

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳು ಒಂದೊಂದು ಜೈಲಿನಲ್ಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಮೇಲ್ನೋಟಕ್ಕೆ ಸೈಲೆಂಟ್ ಆಗಿದ್ದರೂ ಒಳಗೆ ಕೊತ ಕೊತ ಕುದಿಯುತ್ತಿದ್ದಾರೆ.
ಬಳ್ಳಾರಿ ಜೈಲಿಗೆ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ ತೂಗುದೀಪ್ ಹಾಗೂ ವಕೀಲರ ಭೇಟಿಯಾಗಲು ಆಗಮಿಸಿದ್ದಾರೆ. ಈ ವೇಳೆ ಆರೋಪಿ ದರ್ಶನ್‌ನನ್ನು ಪೊಲೀಸರು ಸಂದರ್ಶಕರ ಕೊಠಡಿಗೆ ಕರೆ ತಂದಿದ್ದಾರೆ. ಈ ವೇಳೆ ವರದಿ ಮಾಡುತ್ತಿದ್ದ ಮಾಧ್ಯಮವನ್ನು ನೋಡಿ ಮಧ್ಯದ ಬೆರಳು ತೋರಿಸಿದ್ದಾರೆ. ಈ ಮೂಲಕ ಮಾಧ್ಯಮದ ವಿರುದ್ದ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಜೈಲಿನ ಹೊರಭಾಗದಲ್ಲಿ ವರದಿ ಮಾಡುತ್ತಿದ್ದ ಮಾಧ್ಯಮ ನೋಡುತ್ತಿದ್ದಂತೆ ದರ್ಶನ್ ಮತ್ತಷ್ಟು ಆಕ್ರೋಶಭರಿತರಾಗಿದ್ದಾರೆ. ಆದರೆ ಪೊಲೀಸರ ನಡುವಿನಲ್ಲಿದ್ದ ಕಾರಣ ಮಧ್ಯದ ಬೆಳರನ್ನು ತೋರಿಸುತ್ತಾ ಸಾಗಿದ್ದಾರೆ. ಇಷ್ಟೇ ಅಲ್ಲ ಒಳಗೊಳಗೆ ಮುಗುಳುನಗುತ್ತಾ ಸಾಗಿದ್ದಾರೆ. ದರ್ಶನ್ ನಡೆ ಇದೀಗ ಭಾರಿ ಚರ್ಚೆಯಾಗುತ್ತಿದೆ. ಒಟ್ಟಿನಲ್ಲಿ ದಾಸನ ದುರಹಂಕಾರ ಈಗಲೂ ಕಡಿಮೆಯಾಗಿಲ್ಲ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023