ದಶ೯ನ್ ಗೂ ಮಗ ಇದ್ದಾನೆ ಭವಿಷ್ಯದಲ್ಲಿ ಕಾದು ನೋಡಿ, ರೇಣುಕಾ ಸ್ವಾಮಿ ತಂದೆ ತಾಯಿ ಭಾವುಕ

 | 
ಕ್
 ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಪಟ್ಟಣಗೆರೆಯಲ್ಲಿರುವ ಶೆಡ್​ಗೆ ಕರೆದುಕೊಂಡು ಹೋಗಲಾಗಿತ್ತು. ಇದೆಲ್ಲ ಪ್ಲ್ಯಾನ್ ಮಾಡಿದ್ದು ದರ್ಶನ್ ಎನ್ನುವ ಆರೋಪ ಇದೆ. ದರ್ಶನ್ ಹಾಗೂ ಗ್ಯಾಂಗ್ ಮೇಲೆ ಈಗ ಕೊಲೆ ಆರೋಪ ಬಂದಿದೆ. ರೇಣುಕಾ ಸ್ವಾಮಿಗೆ ಸಾಕಷ್ಟು ಟಾರ್ಚರ್ ನೀಡಲಾಗಿತ್ತು. ಈ ಟಾರ್ಚರ್​ನಿಂದಲೇ ಅವರು ಮೃತಪಟ್ಟಿದ್ದರು. ಈಗ ಅವರು ಕೈ ಮುಗಿದು ಅಂಗಲಾಚುತ್ತಿರುವ ಫೋಟೋ ನೋಡಿ ಅನೇಕರಿಗೆ ದುಃಖ ಆಗಿದೆ.
ರೇಣುಕಾ ಸ್ವಾಮಿ ಅವರು ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು. ಈ ಕಾರಣಕ್ಕೆ ದರ್ಶನ್ ಸಿಟ್ಟಾಗಿದ್ದರು. ಉಗುರಲ್ಲಿ ಹೋಗೋದಕ್ಕೆ ಕೊಡಲಿ ತೆಗೆದುಕೊಂಡರು ಎಂಬಂತೆ, ದರ್ಶನ್ ಅವರು ಈ ವಿಚಾರವನ್ನು ಕಾನೂನಾತ್ಮಕವಾಗಿಯೂ ಬಗೆಹರಿಸಬಹುದಿತ್ತು. ಆದರೆ, ಅವರು ಆ ರೀತಿ ಮಾಡಿಲ್ಲ. ಇದರಿಂದ ಅವರಿಗೆ ಸಂಕಷ್ಟ ಆಗಿದೆ.
ಇನ್ನೂ ಇತ್ತ ದರ್ಶನ್ ಮತ್ತು ಅವನ ಸಹಚರರ ವಿಕೃತ ಮನಸ್ಥಿತಿಗೆ ಕೊನೆಯುಸಿರೆಳೆದ ರೇಣುಕಾಸ್ವಾಮಿ ಅವರ ಮನೆಯಲ್ಲಿ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಕಣ್ಮುಂದೆ ಬಾಳಿ ಬದುಕಬೇಕಿದ್ದ ಮಗನನ್ನ ಅನ್ಯಾಯವಾಗಿ ಕೊಂದವರ ವಿರುದ್ಧ ರೋಷಾಗ್ನಿ ಉಕ್ಕಿ ಹರಿದಿದೆ. ರೇಣುಕಾ ಸ್ವಾಮಿ ತಂದೆ-ತಾಯಿ ಮತ್ತು ಪತ್ನಿಯ ಆರ್ತನಾದ ಎಲ್ಲರ ಕಣ್ಣಂಚನ್ನು ಒದ್ದೆ ಮಾಡಿದೆ.
ದರ್ಶನ್ ಗು ಮಗನಿದ್ದಾನೆ. ಭವಿಷ್ಯದಲ್ಲಿ ಅವನಿಗೂ ಅರಿವಾಗುತ್ತದೆ ನೋವು ಎಂದರೆ ಏನು ಎಂದು ರೇಣುಕಾ ಸ್ವಾಮಿ ತಂದೆ ಕಣ್ಣೀರು ಹಾಕಿದ್ದಾರೆ.ಆಫೀಸ್​ಗೆ ಹೋದವನನ್ನ ಗೊತ್ತಿಲ್ಲದಾಗೆ ಕರ್ಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಮಗನನ್ನ ಯಾವ ಸ್ಥಿತಿಗೆ ತಂದಿದ್ದಾರೆ ಅದೇ ಸ್ಥಿತಿಗೆ ದರ್ಶನ್​​ನನ್ನ ತರಬೇಕು ಎಂದು ಹೇಳಿದ್ದಾರೆ. ಅಸಂಖ್ಯಾತ.. ಅಗಣಿತ.. ಅಭಿಮಾನಿಗಳಿಂದ ಆರಾಧ್ಯದೈವ ಎಂದು ಕರೆಯಲ್ಪಡುವ ದರ್ಶನ್‌ಗೆ ಹಿಡಿ ಶಾಪ ಹಾಕಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.