ಧನುಷ್ ಮಾಡುವ ಕೆಲಸಕ್ಕೆ ಅರ್ಥನೇ ಇಲ್ಲ; ಮದುವೆ ನಂತರವೂ ಧನುಷ್ ಬಗ್ಗೆ ಮೌನ ಮುರಿದ ನಯನತಾರ
Nov 17, 2024, 20:45 IST
|

ಹೌದು, ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ಇಳಯ ಸೂಪರ್ ಸ್ಟಾರ್ ಧನುಷ್ ಈ ಇಬ್ಬರದ್ದು ಸೂಪರ್ ಹಿಟ್ ಜೋಡಿ. ಆದ್ರೀಗ ಇಬ್ಬರು ಹಾವು ಮುಂಗುಸಿಯಂತೆ ಕಿತ್ತಾಡ್ತಿದ್ದಾರೆ. ಧನುಷ್ ವಿರುದ್ಧ ಬಹಿರಂಗವಾಗಿಯೇ ಪತ್ರ ಬರೆಯೋ ಮೂಲಕ ನಯನ ಅವರ ಅಸಮಾಧಾನ ಸ್ಫೋಟಗೊಂಡಿದೆ. ಇಬ್ಬರ ನಡುವಿನ ಈ ಕಚ್ಚಾಟಕ್ಕೆ ಕಾರಣವಾಗಿದೆ ಈ ಟ್ರೇಲರ್.
ಈ ಟ್ರೇಲರ್ನಲ್ಲಿರೋ ಇದೇ ದೃಶ್ಯ ಈಗ ನಯನತಾರಾ ಮತ್ತು ಧನುಷ್ ನಡುವಿನ ಬಹಿರಂಗ ಕಿತ್ತಾಟಕ್ಕೆ ಕಾರಣವಾಗಿದೆ. ಅಷ್ಟಕ್ಕೂ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ನಯನತಾರಾ ಬಿಯಾಂಡ್ ಫೈರಿಟೇಲ್ ಡಾಕ್ಯುಮೆಂಟರಿಗೆ ಧನುಷ್ ನಿರ್ಮಾಣದ ನಾನುಂ ರೌಡಿ ದಾನ ಸಿನಿಮಾ ದೃಶ್ಯದ ತುಣುಕನ್ನ ಬಳಿಸಿಕೊಳ್ಳಲಾಗಿತ್ತು. ಇದರಲ್ಲಿ ನಯನತಾರಾ ಅಭಿನಯವೂ ಇದೆ. ಈ ಕ್ಲಿಪ್ಗೆ ಬಳಸಿಕೊಂಡಿದ್ದಕ್ಕಾಗಿ ನಟ ಧನುಷ್ 10 ಕೋಟಿ ಪರಿಹಾರ ಕೊಡುವಂತೆ ನಯನತಾರಾಗೆ ಲೀಗಲ್ ನೋಟಿಸ್ ಕಳಿಸಿದ್ದಾರೆ.
ಇದ್ರಿಂದ ಸಿಟ್ಟಿಗೆದ್ದ ನಯನತಾರಾ ಬಹಿರಂಗ ಪತ್ರ ಬರೆಯೋ ಮೂಲಕ ಧನುಷ್ ವಿರುದ್ಧ ಸಿಡಿದೆದ್ದಿದ್ದಾರೆ.ಮೂರು ಪುಟಗಳಲ್ಲಿ ಪತ್ರ ಬರೆದಿರೋ ನಯನತಾರಾ, ಧನುಷ್ಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಒಟ್ಟಿನಲ್ಲಿ, 3 ಸೆಂಕೆಡ್ ವಿಡಿಯೋ 10 ಕೋಟಿಯ ಲೀಗಲ್ ನೋಟಿಸ್ ಬಂದಿದ್ದು, ನಟಿ ಕೋರ್ಟ್ನಲ್ಲಿ ಎದುರಿಸುತ್ತೇವೆ ಎಂದು ಸಂದೇಶ ನೀಡಿದ್ದಾರೆ.
ಆದ್ರೆ, ಒಟ್ಟಿಗೆ ನಟಿಸಿದ್ದ ಸೂಪರ್ ಜೋಡಿ 3 ಸೆಕೆಂಡ್ ವಿಡಿಯೋಗಾಗಿ ಹೀಗೆ ಕಿತ್ತಾಡ್ತಿರೋದು ಎಷ್ಟು ಸರಿ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,15 May 2025