ಭೂಮಿಯ ತಾಪಮಾನಕ್ಕೂ ಚಂದ್ರನಿಗೂ ಅದೆಷ್ಟು ವ್ಯತ್ಯಾಸ ಇದೆ ಗೊತ್ತಾ, ವಿಕ್ರಮ್ ಬಿಚ್ಚಿಟ್ಟ ಸತ್ಯ
ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3ರ ಕುರಿತಾದ ನೂತನ ವಿಡಿಯೋ ಒಂದನ್ನು ಶನಿವಾರ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹಂಚಿಕೊಂಡಿದ್ದು, ಅದರದಲ್ಲಿ ಚಂದ್ರನ ಮೇಲ್ಮೈನಲ್ಲಿ ಲ್ಯಾಂಡರ್ ಇಳಿದಿರುವ ಜಾಗ ಶಿವಶಕ್ತಿಯ ಸುತ್ತಾ ಪ್ರಜ್ಞಾನ್ ರೋವರ್ ತಿರುಗುವುದನ್ನು ಸೆರೆ ಹಿಡಿಯಲಾಗಿದೆ.
ಇಸ್ರೋದ ಎಕ್ಸ್ ಅಂದರೆ ಹಳೆಯ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ರೋವರ್ ಯಶಸ್ವಿಯಾಗಿ ಚಂದ್ರನ ರಹಸ್ಯಗಳನ್ನು ಅನ್ವೇಷಿಸುತ್ತಿರುವುದು ಕಂಡು ಬಂದಿದೆ. ಶಶಿಯ ಅಂಗಳಕ್ಕೆ ಎಂಟ್ರಿಕೊಟ್ಟಿರೋ ಭಾರತದ ವಿಕ್ರಮ ಆವಿಷ್ಕಾರಗಳ ಪರಾಕ್ರಮ ಮೆರೆಯಲ್ಲು ಅಣಿಯಾಗಿದ್ದಾನೆ. ವಿಕ್ರಮನ ಒಡಲಲ್ಲಿ ಅವಿತಿದ್ದ ಪ್ರಗ್ಯಾನ್ ರೋವರ್ ಹಿಮಕರನ ಮಡಿಲು ಸೇರಿದೆ. 14 ದಿನಗಳ ಸತ್ಯಾನ್ವೇಶಣೆಗೆ ಸೋಮನ ಮೇಲೆ ಪ್ರಗ್ಯಾನ್ ಪರ್ಯಟನೆ ಆರಂಭಿಸಿದೆ.
ಗುರುವಾರ ಶಶಿಯ ಶಿಖರವೇರಿದ ವಿಕ್ರಮನಿಂದ ಬೇರ್ಪಟ್ಟ ಪ್ರಗ್ಯಾನ್ ರೋವರ್ನ ವಿಡಿಯೋವನ್ನ ಇಸ್ರೋ ಬಿಡುಗಡೆಗೊಳಿಸಿದೆ. ಭಾರತದ ತ್ರಿವರ್ಣ ಧ್ವಜದ ಗುರುತು ಹೊತ್ತು ಚಂದ್ರನಂಗಳ ಸ್ಪರ್ಶಿಸಿದ ಪ್ರಗ್ಯಾನ್ ದೃಶ್ಯಾವಳಿ ಮೈನವಿರೇಳಿಸುವಂತಿದೆ. ಸೋಮನ ಮೇಲ್ಮೈ ಮೇಲೆ ಸಂಚಲನ ಆರಂಭಿಸಿರೋ ಪ್ರಗ್ಯಾನ್ ರೋವರ್ ಕಾರ್ಯಪ್ರವೃತ್ತವಾಗಿದೆ. ಚಂದ್ರನ ಸ್ಪರ್ಶಿಸಿದ ಪ್ರಗ್ಯಾನ್ ರೋವರ್ ಭಾರತದ ಲಾಂಛನ ಮತ್ತು ಇಸ್ರೋದ ಲೋಗೋವನ್ನ ಶಶಿಗೆ ಹಚ್ಚೆ ಹಾಕಿದೆ.
ಹಿಮಕರನ ಮೇಲೆ ಸಂಚಾರ ಆರಂಭಿಸಿರೋ ಪ್ರಗ್ಯಾನ್ ರೋವರ್, ಮುಂದಿನ 14 ದಿನ ತನ್ನ ಸಂಶೋಧನಾ ಕಾರ್ಯಗಳನ್ನ ನಡೆಸಲಿದೆ. ಆದರೆ ಇದು ಅಷ್ಟು ಸುಲಭದ ಮಾತಲ್ಲ, ಯಾಕಂದ್ರೆ ವಿಕ್ರಮ್ ಲ್ಯಾಂಡರ್ನಿಂದ ಕೇವಲ 1 ಸೆಂಟಿಮೀಟರ್ ದೂರವಷ್ಟೇ ಪ್ರಗ್ಯಾನ್ ಸಂಚಾರ ನಡೆಸುತ್ತೆ. ಒಂದು ವೇಳೆ ರೋವರ್ ಮತ್ತಷ್ಟು ದೂರ ಸಂಚರಿಸಿದ್ರೆ ಸಂಪರ್ಕ ಕಳೆದುಕೊಳ್ಳುವ ಆತಂಕವೂ ಇದೆ. ಹೀಗಾಗಿ ಸೂಕ್ಷ್ಮಾತಿ ಸೂಕ್ಷ್ಮವಾಗಿ ರೋವರ್ ಕಾರ್ಯ ನಿರ್ವಹಿಸುವಂತೆ ಇಸ್ರೋ ಹಿಡಿತ ಸಾಧಿಸಬೇಕಿದೆ.
ಅಲ್ಲದೇ ಭೂಮಿಯ ವಾತಾವರಣದ ಪರಿಸ್ಥಿತಿ ಚಂದ್ರನ ಮೇಲ್ಮೈ ಮೇಲೆ ಇಲ್ಲ. ಹೀಗಾಗಿ ಮುಂದಿನ 14 ದಿನಗಳ ಸಂಶೋಧನೆ ಇಸ್ರೋ ಪಾಲಿಗೆ ದೊಡ್ಡ ಸಾವಲೇ ಆಗಿದೆ ಅಂತ ಇಸ್ರೋ ಅಧ್ಯಕ್ಷ ಸೋಮನಾಥ್ ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.