ಸಾವಿಗೂ 15 ದಿನ ಮುನ್ನ, ರಾಧಿಕಾ ಕುಮಾರಸ್ವಾಮಿ ಬಳಿ ಅಪ್ಪು ಹೇಳಿದ್ದೇನು ಗೊತ್ತಾ

 | 
B k
 ಭೈರಾದೇವಿ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿರುವ ನಟಿ ರಾಧಿಕಾ ಕುಮಾರಸ್ವಾಮಿ, ಇತ್ತೀಚಿಗಷ್ಟೇ ವಿಶೇಷ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಗಾಡ್ ಫಾದರ್ ಇಲ್ಲದೆ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆದ ನಟಿ ರಾಧಿಕಾ ಕುಮಾರಸ್ವಾಮಿ, ಚಿತ್ರರಂಗದಲ್ಲಿ ನಿರ್ಮಾಪಕಿ ಆಗಿಯು ಹೆಸರು ಮಾಡಿದ್ದಾರೆ.ಶಿವರಾಜ್ಕುಮಾರ್ ಜೊತೆ ತವರಿಗೆ ಬಾ ತಂಗಿ, ಅಣ್ಣ-ತಂಗಿ ಸಿನಿಮಾ ಮಾಡಿದ ರಾಧಿಕಾ ಕುಮಾರಸ್ವಾಮಿ ಅವರಿಗೆ ಪುನೀತ್ ಜೊತೆ ಕೂಡ ನಟಿಸುವ ಆಸೆ ಇತ್ತು .
ಇನ್ನು ಈ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟಿ ರಾಧಿಕಾ ಕುಮಾರಸ್ವಾಮಿ, ಪುನೀತ್ ಅವರ ಜೊತೆ ಕೆಲಸ ಮಾಡುವ ಕನಸು ಇತ್ತು ಎಂದು ನಟಿ ಹೇಳಿಕೊಂಡಿದ್ದಾರೆ.ನಿರ್ಮಾಪಕಿ ಆಗಿ ಪುನೀತ್ ರಾಜ್ಕುಮಾರ್ ಜೊತೆ ಕೆಲಸ ಮಾಡುವ ಆಸೆ ಇತ್ತು ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ರು. ಹಲವು ದಿನಗಳಿಂದ ಅವರ ಡೇಟ್ಸ್ ಕೇಳುತ್ತಿದ್ದೆ ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ. ಅವ್ರು ಸಾವನ್ನಪ್ಪುವ ಕೆಲ ದಿನಗಳ ಹಿಂದೆ ಈ ವರ್ಷ ಖಂಡಿತಾ ನಿಮಗೆ ಡೇಟ್ ಕೊಡ್ತೀನಿ ಎಂದಿದ್ರು ಆದರೆ ಇನ್ನಿಲ್ಲವಾದರು ಎಂದು ಬೇಸರದಿಂದ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.
ಕನ್ನಡ ಚಿತ್ರರಂಗದಲ್ಲೂ ಕಾಸ್ಟಿಂಗ್ ಕೌಚ್ ಕುರಿತ ಚರ್ಚೆಗಳು ಮತ್ತೆ ಸದ್ದು ಮಾಡುವ ಸಾಧ್ಯತೆ ಇದೆ. ಕನ್ನಡ ಇಂಡಸ್ಟ್ರಿಯಲ್ಲೂ ಕಾಸ್ಟಿಂಗ್ ಕೌಚ್ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ನಟಿ ರಾಧಿಕಾ ಕುಮಾರಸ್ವಾಮಿ, ನಾನು ಸಣ್ಣ ವಯಸ್ಸಿನಲ್ಲೇ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟೇ. ಚಿತ್ರರಂಗಕ್ಕೆ ಬಂದಾಗ ನಾನು ತುಂಬಾ ಚಿಕ್ಕವಳಾಗಿದ್ದ ಹಿನ್ನೆಲೆ ನಿರ್ದೇಶಕ-ನಿರ್ಮಾಪಕರು ಕೂಡ ಮಗಳಂತೆ ಕಾಣ್ತಿದ್ರು. ತಂಗಿಯಂತೆ ನೋಡಿಕೊಳ್ತಿದ್ರು ಎಂದು ನಟಿ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.
ಯಾರೋ ಒಬ್ಬರು ಮಾಡುವ ತಪ್ಪಿಗೆ ಇಂಡಸ್ಟ್ರಿಯನ್ನೇ ಕೆಟ್ಟದ್ದು ಎನ್ನಲು ಆಗಲ್ಲ. ಇಲ್ಲಿ ಒಳ್ಳೆಯವರು ಕೂಡ ಇದ್ದಾರೆ ಎಂದು ನಟಿ ರಾಧಿಕಾ ಕುಮಾರಸ್ವಾಮಿ ಹೇಳಿದ್ರು. ಒಂದು ಸಿನಿಮಾ ಮಾಡಿದ್ರೆ 200 ಜನ ಕೆಲಸ ಮಾಡ್ತಾರೆ. ಕೆಲವರು ಹೆಣ್ಣು ಮಕ್ಕಳಿಗೆ ಇಂತಹ ಅನುಭ ಆಗಿರಬಹುದು ಎಂದಿದ್ದಾರೆ. ಇನ್ನು ರಾಧಿಕಾ ಕುಮಾರಸ್ವಾಮಿ ಭೈರಾದೇವಿ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದು, ಈ ಸಿನಿಮಾ ಪಾತ್ರ ನನಗೆ ಚಾಲೆಂಜಿಂಗ್ ಆಗಿತ್ತು ಎಂದಿದ್ದಾರೆ. ಅಘೋರಿ ಹಾಗೂ ದೇವಿ ಪಾತ್ರದಲ್ಲಿ ನನಗೆ ಅಘೋರಿ ಪಾತ್ರ ಕಷ್ಟ ಎನಿಸಿತು ಎಂದಿದ್ದಾರೆ. ಗಂಟೆಗಟ್ಟನೆ ಆ ರೀತಿ ಮೇಕಪ್ ಧರಿಸೋದು ಕೂಡ ನನಗೆ ಕಷ್ಟವಾಗಿತ್ತು ಎಂದಿದ್ದಾರೆ. ಭೈರಾದೇವಿ ಸಿನಿಮಾ ಮೂಲಕ ನಟಿ ಶೀಘ್ರದಲ್ಲೇ ತೆರೆಗೆ ಬರಲಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.