ಕಣ್ಣೀರು ಹಾಕುತ್ತಲೇ ರಾಘು ಮಗನಿಗೆ ಅಶ್ವಿನಿ ಪುನೀತ್ ಹೇಳಿದ್ದೇನು ಗೊತ್ತಾ, ನಿಜಕ್ಕೂ ಕರುಳು ಚುರ್ ಅನ್ನುತ್ತೆ

 | 
Nx

 ಹೃದಯಾಘಾತದಿಂದ ನಿಧನರಾದ ಸ್ಪಂದನಾ ವಿಜಯ ರಾಘವೇಂದ್ರ ಅವರ ಪಾರ್ಥಿವ ಶರೀರ ಆಗಸ್ಟ್‌ ಮೊನ್ನೆ ರಾತ್ರಿ ನಗರಕ್ಕೆ ತಲುಪಿದ್ದು, ಮಲ್ಲೇಶ್ವರಂನ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈಗಾಗಲೇ ಹಲವಾರು ಗಣ್ಯರು ಸ್ಪಂದನಾ ಅಂತಿಮ ದರ್ಶನಕ್ಕೆ ಹಾಜರಾಗಿದ್ದಾರೆ. ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಮಕ್ಕಳು ದೃತಿ, ವಂದಿತಾ ನಿಧನಕ್ಕೆ ಕಣ್ಣೀರಿಟ್ಟಿದ್ದಾರೆ.

ಬಿಕ್ಕಿ ಬಿಕ್ಕಿ ಅಳುತ್ತಿರುವ ಅಶ್ವಿನಿ ಮತ್ತು ಅಪ್ಪು ಮಕ್ಕಳಿಗೆ ಶ್ರೀಮುರಳಿ ಸಂತೈಸಿದ್ದಾರೆ. ಸದ್ಯ ಮಲ್ಲೇಶ್ವರಂನಲ್ಲಿರುವ ಅವರ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಹಾಗೂ ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಪಡೆದು, ವಿಜಯ ರಾಘವೇಂದ್ರ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಹಾಗೂ ನಟ ಶರಣ್ ಆಗಮಿಸಿ ಚಿನ್ನಾರಿ ಮುತ್ತನಿಗೆ ಸಾಂತ್ವನ ಹೇಳಿದರು.

ಸ್ಪಂದನಾ-ವಿಜಯ್ ರಾಘವೇಂದ್ರ ದಂಪತಿಗೆ ಶೌರ್ಯ ಹೆಸರಿನ ಮಗ ಇದ್ದಾನೆ. ಸ್ಪಂದನಾ ಪಾರ್ಥಿವ ಶರೀರದ ಎದುರು ಕುಳಿತು ಶೌರ್ಯ ಕಣ್ಣೀರು ಹಾಕುತ್ತಿದ್ದಾನೆ. ಆತನನ್ನು ಸಮಾಧಾನ ಮಾಡಲು ವಿಜಯ್ ಹಾಗೂ ಶ್ರೀಮುರಳಿ ಪ್ರಯತ್ನಿಸಿದ್ದಾರೆ. ಆದರೆ, ಶೌರ್ಯನ ಕಣ್ಣೀರು ನಿಲ್ಲುತ್ತಿಲ್ಲ.

ಇನ್ನು ಹೆಂಡತಿಯನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದ 
ವಿಜಯ್ ರಾಘವೇಂದ್ರ ಅವರಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕಂದಾ ಸ್ಪಂದನಾ ಎಲ್ಲಿ ಕೂಡ ಹೋಗಿಲ್ಲ ಎಂದು ಸಮಾಧಾನ ಮಾಡಿದ್ದಾರೆ.ಅವರ ಮೇಲೆ ಮಾತಿಗೆ ವಿಜಯ್ ರಾಘವೇಂದ್ರ ಮರು ಮಾತಾಡದೇ ಕಣ್ಣೀರಿಟ್ಟಿದ್ದಾರೆ.
ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.