ನೂರಾರು ಸಿನಿಮಾದಲ್ಲಿ ನಟಿಸಿದ ಜಗ್ಗೇಶ್ ರವರಿಗೆ ಏನಾಯಿತು ಗೊತ್ತಾ, ಕಣ್ಣೀರಿಟ್ಟ ಕರುನಾಡ ಜನತೆ
ಸ್ಯಾಂಡಲ್‍ವುಡ್‍ನ ನವರಸ ನಾಯಕ ಜಗ್ಗೇಶ್ ಅವರಿಗೆ ಅಪಘಾತವಾಗಿದೆ. ಹೌದು ಇತ್ತೀಚಿಗೆ ತೆರೆಕಂಡ ರಾಘವೇಂದ್ರ ಸ್ಟ್ರೋರ್ಸ್ ಚಿತ್ರದಲ್ಲಿ ಬಹಳ ಚೆನ್ನಾಗಿ ಅಭಿನಯಿಸಿ ಎಲ್ಲರ ಮನಗೆದ್ದಿದ್ದ ಹಿರಿಯ ನಟ ಜಗ್ಗೇಶ್ ಅವರ ಕಾಲು ಮುರಿದಿದೆ. ಪಾದದ ಮೂಳೆ ಮುರಿದಿದೆ ಎಂದು ಸ್ವತಃ ಅವರೇ ಪೋಸ್ಟ್ ಹಾಕಿಕೊಂಡಿದ್ದಾರೆ.
ಕಾಲಿಗೆ ಪ್ಲ್ಯಾಸ್ಟರ್ ಮಾದರಿ ಬ್ಯಾಂಡೇಜ್ ಹಾಕಲಾಗಿರುವ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಜಗ್ಗೇಶ್ ಹಂಚಿಕೊಂಡಿದ್ದಾರೆ.
'ಸಣ್ಣ ಅಚಾತುರ್ಯ ನಡಿಗೆಯಿಂದ ಪಾದದ ಮೂಳೆ ಮುರಿತ, 6 ವಾರದ ದಿಘ್ಭಂಧನ ನಡಿಗೆಗೆ' ಎಂದು ಬರೆದುಕೊಂಡಿದ್ದಾರೆ. ಪಾದದ ಮೂಳೆ ಮುರಿದಿದೆ ಎಂದು ಜಗ್ಗೇಶ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. 6 ವಾರಗಳ ನಡೆಯಬಾರದು ಎಂದು ವೈದ್ಯರು ಹೇಳಿದ್ದಾರಂತೆ. ಅದಕ್ಕೆ ಜಗ್ಗೇಶ್ ಅವರು ಮನೆಯಲ್ಲಿ ರೆಸ್ಟ್ ಮಾಡ್ತಾ ಇದ್ದಾರೆ. ಜಗ್ಗೇಶ್ ಪೋಸ್ಟ್ ನೋಡಿದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ನೆಚ್ಚಿನ ನಟ ನೀವು.
ನೀವು ಬೇಗ ಗುಣಮುಖರಾಗಿ. ಆ ರಾಯರ ಆಶೀರ್ವಾದ ನಿಮ್ಮ ಮೇಲಿರಲಿ, ಏನಾಯ್ತು? ನಿಮಗೆ ಈ ರೀತಿ ಆಗಬಾರದಿತ್ತು ಎಂದೆಲ್ಲಾ ಫ್ಯಾನ್ಸ್ ಹೇಳಿದ್ದಾರೆ. ಇತ್ತೀಚೆಗೆ ಜಗ್ಗೇಶ್ ಅಮೆರಿಕಕ್ಕೆ ಹೋಗಿದ್ರಂತೆ. ಅಲ್ಲಿಂದ ವಾಪಸ್ ಬರುವಾಗ ವಿಮಾನ ಬೆಂಗಳೂರಿನಲ್ಲಿ ಭೂ ಮಾಡುವ ಮುನ್ನ ಜರ್ಕ್ ಹೊಡೆದಿದ್ದರಿಂದ ಜಗ್ಗೇಶ್ ಕಾಲಿಗೆ ಪೆಟ್ಟಾಗಿದೆ ಎನ್ನಲಾಗುತ್ತಿದೆ.
ರಾಘವೇಂದ್ರ ಸ್ಟೋರ್ಸ್ ಸಿನಿಮಾ ಬಳಿಕ ಜಗ್ಗೇಶ್ ಪತ್ನಿ ಜೊತೆ ಅಮೆರಿಕಾಕ್ಕೆ ಹೋಗಿ ಎಂಜಾಯ್ ಮಾಡಿಕೊಂಡು ಬಂದಿದ್ದಾರೆ. ಅಲ್ಲಿಂದ ಬಂದ ಮೇಲೆ ಈ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಜಗ್ಗೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕನಟ, ನಿರ್ಮಾಪಕ ಮತ್ತು ನಿರ್ದೇಶಕ. ಚಿತ್ರರಂಗ ಮಾತ್ರವಲ್ಲದೇ ರಾಜಕಾರಣದಲ್ಲೂ ಸಕ್ರಿಯವಾಗಿರುವ ಇವರು ವಿಧಾನ ಸಭೆ ಮತ್ತು ವಿಧಾನ ಪರಿಷತ್ ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ.
ನವಿರಾದ ಹಾಸ್ಯ, ವಿಶಿಷ್ಟ ಮ್ಯಾನರಿಸಂ ಮೂಲಕ ಪ್ರೇಕ್ಷಕರಿಗೆ ಕಚುಗುಳಿಯಿಡುವ ಜಗ್ಗೇಶ್ ಸುಮಾರು ಮೂರು ದಶಕಗಳಿಗೂ ಹೆಚ್ಚಿನ ಸಿನಿಜೀವನದಲ್ಲಿ 120 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ವೈದ್ಯರ ಸಲಹೆಯಂತೆ ಜಗ್ಗೇಶ್ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದು, ಆದಷ್ಟು ಬೇಗ ಜಗ್ಗೇಶ್ ಗುಣಮುಖರಾಗಲಿ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಾರೈಸುತ್ತಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.