ಚೆನ್ನಾಗಿಯೇ ಇದ್ದ ಶ್ರೀಮುರಳಿ ಗೆ ಏನಾಗಿದೆ ಗೊತ್ತಾ, ಸ್ಪಂದನಾ ಕಾಯ೯ಕ್ಕೆ ಕುಂಟುತ್ತಾ ಬಂದ ಮುರುಳಿ

 | 
Hd

ನಿನ್ನೆ ಮಲ್ಲೇಶ್ವರಂ ಅಲ್ಲಿ ನೆಡೆದ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ 11ನೇ ದಿನದ ಪುಣ್ಯಸ್ಮರಣೆಯಲ್ಲಿ ಶ್ರೀಮುರಳಿ ಭಾಗಿಯಾಗಿದ್ದಾರೆ. ಸಹೋದರ ವಿಜಯ- ಪುತ್ರ ಶೌರ್ಯ ಆಗಮನದ ಬಳಿಕ ಮುರಳಿ ಕೂಡ ಭಾಗವಹಿಸಿದ್ದು, ಮತ್ತೆ ಕಾಲು ನೋವಿನ ಸ್ಥಿತಿಯಲ್ಲಿಯೇ ಎಂಟ್ರಿ ಕೊಟ್ಟಿದ್ದಾರೆ. ಮತ್ತೆ ನಟನಿಗೆ ಏನಾಯ್ತು ಅಂತಾ ಅಭಿಮಾನಿಗಳು ಆತಂಕಗೊಂಡಿದ್ದಾರೆ.

ಉತ್ತರಕ್ರಿಯೆ ಇಂದು ಬೆಳಿಗ್ಗೆ ಸ್ವಗೃಹದಲ್ಲಿ ಶಾಂತಿ ಹೋಮ ನೆರವೇರಿದೆ. ಸ್ಪಂದನಾ 11ನೇ ದಿನದ ಪುಣ್ಯಸ್ಮರಣೆಯಲ್ಲಿ ಶಿವಣ್ಣ ಕುಟುಂಬಸ್ಥರು ಭಾಗಿಯಾಗಿದ್ದಾರೆ. ಮಗನ ಕೈ ಹಿಡಿದು ವಿಜಯ ಎಂಟ್ರಿ ಕೊಟ್ಟರೆ, ಅತ್ತಿಗೆ ಸ್ಪಂದನಾ ಪುಣ್ಯಸ್ಮರಣೆಯಲ್ಲಿ ಕುಂಟುತ್ತಾಲೇ ಶ್ರೀಮುರಳಿ ಎಂಟ್ರಿ ಕೊಟ್ಟಿದ್ದಾರೆ. ಕಾಲಿನ ನೋವಿನಿಂದಲೇ ನಿಧಾನಕ್ಕೆ ಹೆಜ್ಜೆ ಇಡುತ್ತಾ ಬಂದಿದ್ದಾರೆ. ಕೆಲ ದಿನಗಳ ಹಿಂದೆ ಬಘೀರ ಸಿನಿಮಾದ ಶೂಟಿಂಗ್‌ನಲ್ಲಿ ಶ್ರೀಮುರಳಿಗೆ ಪೆಟ್ಟಾಗಿತ್ತು. 

ಬಳಿಕ ಚೇತರಿಸಿಕೊಂಡಿದ್ದರು. ಸ್ಪಂದನಾ ಅಂತ್ಯಕ್ರಿಯೆ ಸಂದರ್ಭದಲ್ಲಿ ಚೆನ್ನಾಗಿದ್ರಲ್ಲಾ ಈಗ ಶ್ರೀಮುರಳಿಗೆ ಏನಾಯ್ತು ಎಂದು ಫ್ಯಾನ್ಸ್ ಆತಂಕಗೊಂಡಿದ್ದಾರೆ.
ಶಾಂತಿ ಹೋಮ ನೆರವೇರಿದ ಬಳಿಕ ಮಧ್ಯಾಹ್ನ 1 ಗಂಟೆಯಿಂದ ನಂತರ ಕೋದಂಡರಾಮಪುರದ ಯಂಗ್‌ಸ್ಟರ್ಸ್ ಕಬಡ್ಡಿ ಆಟದ ಮೈದಾನದಲ್ಲಿ ಭೋಜನ ಆರಂಭವಾಗಿದೆ. ಮನೆಮಗಳು ಸ್ಪಂದನಾ ಆತ್ಮಕ್ಕೆ ಚಿರಶಾಂತಿ ಕೋರಲು ಸರ್ವರಿಗೂ ಭಾಗಿಯಾಗುವಂತೆ ಬಿ.ಕೆ ಶಿವರಾಂ ಮತ್ತು ಎಸ್.ಎ ಚಿನ್ನೆಗೌಡರು ಮತ್ತು ಕುಟುಂಬಸ್ಥರು ಸರ್ವರಿಗೂ ಆಹ್ವಾನ ನೀಡಿದ್ದರು. 

ಈ ಹಿಂದೆ ಬಘೀರ ಸಿನಿಮಾ ಶೂಟಿಂಗ್ ವೇಳೆಯಲ್ಲಿ ಅವಘಡ ಸಂಭವಿಸಿ ಕಾಲಿಗೆ ಪೆಟ್ಟಾಗಿತ್ತು. ಇದೀಗ ಬಹಳಷ್ಟು ಓಡಾಡಿ ಆರೋಗ್ಯ ಕೂಡ ಏರುಪೇರು ಆದ ಕಾರಣ ಕಾಲಿನ ನೋವು ಮತ್ತೆ ಕಾಣಿಸಿಕೊಂಡಿದೆ ಎನ್ನಲಾಗ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.