ಕನ್ನಡಿಗರ ಮೆಚ್ಚಿನ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೃದಯಕ್ಕೆ ಏನಾಗಿದೆ ಗೊತ್ತಾ

 | 
ರರಪ

 ಕೆಲ ದಿನಗಳ ಹಿಂದೆ ಹೃದಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರ ಬಗ್ಗೆ ಕೇಳಿರುತ್ತೀರಿ. ಅಲ್ಲದೇ ಕಳೆದ ಬಾರಿಯ ವಿಧಾನಸಭೆ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆ ವೇಳೆಯಲ್ಲಿ ಕುಮಾರಸ್ವಾಮಿ ಅವರು ಸಾವಿನ ಬಗ್ಗೆ ಮಾತನಾಡಿದ್ದು ಎಲ್ಲರಿಗೂ ತಿಳಿದಿರುವ ವಿಷಯ.ಚುನಾವಣೆಗೂ ಮುನ್ನ ಮಾತನಾಡಿದ್ದ ಕುಮಾರಸ್ವಾಮಿ ಅವರು ಎರಡು ಬಾರಿ ಚಿಕಿತ್ಸೆ ಪಡೆದಿದ್ದೇನೆ, ನಾನು ಇಸ್ರೇಲ್ ಗೆ ಹೋದಾಗಲೇ ಸಾಯಬೇಕಾಗಿತ್ತು, ಅದೃಷ್ಟದಲ್ಲಿ ಬದುಕಿ ಬಂದಿದ್ದೇನೆ. ಹೀಗಾಗಿ ತನಗೆ ಒಂದು ಅವಕಾಶವನ್ನು ಕೊಡಿ ಎಂದು ಕೇಳಿಕೊಂಡಿದ್ದರು.

ಆ ಸಂದರ್ಭದಲ್ಲಿ ದೇವೇಗೌಡರು ಕೂಡ ಕುಮಾರಸ್ವಾಮಿ ಅವರ ಆರೋಗ್ಯದ ವಿಚಾರವಾಗಿ ಟೆನ್ಶನ್ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ಬಹುಮತ ಬಾರದೇ ಇದ್ದರೂ ಕೂಡ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮತ್ತೊಮ್ಮೆ ಸಾವಿನ ಮಾತನಾಡಿ ತನಗೆ ಆರೋಗ್ಯ ಸರಿ ಇಲ್ಲದಿರುವ ಕಾರಣ ನನ್ನ ಬದಲು ನನ್ನ ಮಗ ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡುತ್ತಿದ್ದಾನೆ ಎಂದು ಹೇಳಿದ್ದರು.

2007ರಲ್ಲಿ ಕುಮಾರಸ್ವಾಮಿ ಅವರಿಗೆ ಓಪನ್ ಹಾರ್ಟ್ ಸರ್ಜರಿ ಮಾಡಲಾಗಿತ್ತು, ಓಪನ್ ಹಾರ್ಟ್ ಸರ್ಜರಿ ಮಾಡುವುದರಿಂದ ಆಗುವ ಸೈಡ್ ಎಫೆಕ್ಟ್ ಎಂದರೆ ಎದೆಯ ಗಾಯಕ್ಕೆ ಇನ್ಫೆಕ್ಷನ್ ಆಗಬಹುದು, ಹಾರ್ಟ್ ಅಟ್ಯಾಕ್ ಆಗಬಹುದು, ಸ್ಟ್ರೋಕ್ ಆಗಬಹುದು, ಹೃದಯ ಬಡಿತದಲ್ಲಿ ಏರುಪೇರು ಆಗಬಹುದು, ಶ್ವಾಸಕೋಶ ಮತ್ತು ಕಿಡ್ನಿ ಫೇಲ್ಯೂರ್ ಕೂಡ ಆಗಬಹುದು. ಇನ್ನು ಮತ್ತೆ 2017ರಲ್ಲಿ ಹೃದಯದ ಸಮಸ್ಯೆ ಎದುರಾಗಿತ್ತು.

ಎರಡನೇ ಬಾರಿ ಹೃದಯ ಕೈಕೊಟ್ಟಾಗಲು ಚುನಾವಣೆಗೆ ಆರು ತಿಂಗಳು ಬಾಕಿ ಉಳಿದಿತ್ತು. ಆ ಸಂದರ್ಭದಲ್ಲಿ ಹೃದಯದ ವಾಲ್ ಬದಲಾಯಿಸಲಾಗಿತ್ತು. ಈ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿಗಳನ್ನು ದೇಹದಲ್ಲಿ ಕಡಿಮೆ ಮಾಡಲಾಗಿರುತ್ತದೆ, ಆದ್ದರಿಂದ ಆ ಸಮಯದಲ್ಲಿ ಅತಿ ಹೆಚ್ಚು ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿರಬೇಕಾಗಿರುತ್ತದೆ. ಆದ್ದರಿಂದ ಆ ಸಂದರ್ಭದಲ್ಲಿ ಇನ್ಫೆಕ್ಷನ್ ಮಾಡಿಕೊಳ್ಳಬಾರದು, ಜಾಸ್ತಿ ಜನದಟ್ಟಣೆ ಇರುವ ಕಡೆ ಹೋಗಬಾರದು, ಪಟಾಕಿ ವಾಸನೆಯನ್ನು ಸೇವಿಸಬಾರದು.

ಈ ರೀತಿ ಎರಡೆರಡು ಬಾರಿ ಹಾರ್ಟ್ ಆಪರೇಷನ್ ಆದ ಮೇಲೆ ಕುಮಾರಸ್ವಾಮಿ ಅವರು ಇಷ್ಟಪಟ್ಟು ತಿನ್ನುತ್ತಿದ್ದ ಮಾಂಸಹಾರವನ್ನು ಈಗ ಬಿಟ್ಟಿದ್ದಾರೆ ಹಾಗೂ ಮಧ್ಯಪಾನವನ್ನು ಸಹ ಮಾಡುವಂತಿಲ್ಲ, ಕುಮಾರಸ್ವಾಮಿ ಆರೋಗ್ಯ ಸ್ಥಿರವಾಗಿ ಇರಬೇಕೆಂದರೆ ಮಾಂಸಹಾರ ಹಾಗೂ ಮಧ್ಯಪಾನದಿಂದ ದೂರವಿರಬೇಕು ಆದ್ದರಿಂದ ಕುಮಾರಸ್ವಾಮಿಯವರು ತಮಗಿಷ್ಟವಾದ ತಿನಿಸುಗಳಿಂದ ದೂರವಿದ್ದಾರೆ.
ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.