ಕಂಡಕ್ಟರ್ ಆಗಿದ್ದ ರಜನಿಕಾಂತ್ ಕೋಟಿ ಕೋಟಿ ಹಣ ಮಾಡುವುದಕ್ಕೆ ಕಾರಣವಾಗಿದ್ದು ಏನು ಗೊತ್ತಾ, ಈ ಡಿಪ್ಪೋದಲ್ಲಿ ಅಂತಹದ್ದು ಏನಿದೆ

 | 
ಕಿ

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಸಿನಿಮಾ ರಿಲೀಸ್‌ಗೂ ಮೊದಲೇ ಉತ್ತರ ಭಾರತ ಪ್ರವಾಸ ಕೈಗೊಂಡಿದ್ದ ರಜನಿಕಾಂತ್ ಕಳೆದ ವಾರವಷ್ಟೇ ಚೆನ್ನೈಗೆ ವಾಪಸ್ ಆಗಿದ್ದರು. ಇದೀಗ ದಿಢೀರನೇ ಬೆಂಗಳೂರಿಗೆ ಬಂದಿದ್ದಾರೆ. ಜಯನಗರ ಬಿಎಂಟಿಸಿ ಡಿಪೋಗೆ ದಿಢೀರ್ ಭೇಟಿ ಕೊಟ್ಟಿದ್ದಾರೆ.

ರಜನಿಕಾಂತ್ ಆಗಿಂದಾಗ್ಗೆ ಬೆಂಗಳೂರಿಗೆ ಭೇಟಿ ನೀಡುತ್ತಿರುತ್ತಾರೆ. ಸಹೋದರ ಸತ್ಯ ನಾರಾಯಣ ಮನೆಗೆ ಬರುತ್ತಿರುತ್ತಾರೆ. ಜೊತೆಗೆ ಹಳೇ ಸ್ನೇಹಿತರನ್ನು ಭೇಟಿ ಮಾಡುತ್ತಿರುತ್ತಾರೆ. ಆದರೆ ಇದ್ದಕ್ಕಿದಂತೆ ಜಯನಗರ ಬಿಎಂಟಿಸಿ ಡಿಪೋಗೆ ತಲೈವಾ ಬಂದಿದ್ದು ಎಲ್ಲರಿಗೂ ಅಚ್ಚರಿ ತಂದಿದೆ.ಇನ್ನು ನಿನ್ನೆ ಬೆಳಿಗ್ಗೆ 11ರ ಸಮಯಕ್ಕೆ
ಬಸ್ ಡಿಪೋಗೆ ಬಂದ ತಲೈವಾ 15 ನಿಮಿಷಗಳ ಕಾಲ ಅಲ್ಲೇ ಇದ್ದರು. 

ಅಲ್ಲಿದ್ದ ಸಿಬ್ಬಂದಿಗಳ ಜೊತೆ ಮಾತನಾಡಿ ಡಿಪೋ ಒಳಗೆ ಸುತ್ತಾಡಿ ರಜನಿಕಾಂತ್ ತೆರಳಿದ್ದಾರೆ. ತಲೈವಾ ದಿಢೀರ್ ಭೇಟಿಯಿಂದ ಬಿಎಂಟಿಸಿ ಸಿಬ್ಬಂದಿ ಖುಷಿಯಾಗಿದ್ದಾರೆ. ತಲೈವಾ ಜೊತೆ ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಒಂದ್ಕಾಲದಲ್ಲಿ ಜಯನಗರ ಬಿಎಂಟಿಸಿ ಡಿಪೋದಲ್ಲಿ ಸೂಪರ್ ಸ್ಟಾರ್ ಕೆಲಸ ನಿರ್ವಹಿಸಿದ್ದರು. ಬಳಿಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ದಶಗಳ ಹಿಂದೆ ಇದೇ ಜಯನಗರ ಡಿಪೋದಲ್ಲೇ ಕೆಲಸ‌ ಮಾಡಿದ್ದರು. ಹಾಗಾಗಿ ತಾವು ಕೆಲಸ ನಿರ್ವಹಿಸಿದ್ದ ಡಿಪೋಗೆ ಭೇಟಿ ನೀಡಿ ರಜನಿಕಾಂತ್ ಸಂಭ್ರಮಿಸಿದ್ದಾರೆ. 

ಈ ವೇಳೆ ಸ್ನೇಹಿತ ರಾಜ್ ಬಹದ್ದೂರ್ ಸಹ ಶಿವಾಜಿರಾವ್ ಗಾಯಕ್‌ವಾಡ್ ಜೊತೆಗಿದ್ದರು. ರಜನಿಕಾಂತ್ ದಶಕಗಳ ಹಿಂದೆ ಮೆಜೆಸ್ಟಿಕ್ ಮತ್ತು ಶ್ರೀನಗರ ನಡುವೆ ಸಂಚರಿಸುತ್ತಿದ್ದ ಬಸ್ ಸಂಖ್ಯೆ 10ಎರ ಕಂಡೆಕ್ಟರ್ ಆಗಿದ್ದರು. ಆಗ ಸ್ನೇಹಿತ ರಾಜ್‌ ಬಹದ್ದೂರ್ ಆ ಬಸ್ ಚಾಲಕರಾಗಿದ್ದರು. ಜಯನಗರ ಬಸ್ ಡಿಪೋ- 4ಕ್ಕೆ ಭೇಟಿ ನೀಡಿದ್ದ ರಜನಿಕಾಂತ್ ಅಲ್ಲಿನ ಮೆಕಾನಿಕ್, ಚಾಲಕರು, ಸಿಬ್ಬಂದಿ ಜೊತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದರು. ಎಲ್ಲರ ಜೊತೆ ಕೆಲ ಹೊತ್ತು ಮಾತನಾಡಿದ್ದಾರೆ. ತಾವು ಕಂಡೆಕ್ಟರ್ ಆಗಿದ್ದ ದಿನಗಳನ್ನು ಮೆಲುಕು ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.