ಉಪ್ಪಿ ಹೇಳಿದ ಹೊಲೆಗೇರಿ ಪದಕ್ಕೆ ಮೇಘನಾ ರಾಜ್ ತಂದೆ ಹೇಳಿದ್ದೇನು ಗೊತ್ತಾ

 | 
Hd

ಆಕ್ಷೇಪಾರ್ಹ ಪದ ಬಳಕೆ ಮಾಡಿ ಇಕ್ಕಟ್ಟಿಗೆ ಸಿಲುಕಿರುವ ನಟ ಉಪೇಂದ್ರ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪೊಲೀಸ್​ ಕೇಸ್, ಎಫ್​ಐಆರ್​, ನೋಟಿಸ್​, ಪ್ರೊಟೆಸ್ಟ್​ ಬಳಿಕ ರಿಯಲ್ ಸ್ಟಾರ್​ಗೆ ಹೊಸ ತಲೆನೋವು ಶುರುವಾಗಿದೆ. ಉಪೇಂದ್ರ ಅವರನ್ನು ಅವರನ್ನು ಸಿನಿಮಾ ರಂಗದಿಂದ 5 ವರ್ಷ ಬ್ಯಾನ್ ಮಾಡಬೇಕು ಎಂದು ಕರ್ನಾಟಕ ರಣಧೀರ ಪಡೆಯ ಕಾರ್ಯಕರ್ತರು ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

ಭೈರಪ್ಪ ಹರೀಶ್ ಕುಮಾರ್ ನೇತೃತ್ವದಲ್ಲಿ ವಾಣಿಜ್ಯ ಮಂಡಳಿಗೆ ಆಗಮಿಸಿದ್ದ ಕಾರ್ಯಕರ್ತರು ಉಪೇಂದ್ರ ಅವರನ್ನು ಬ್ಯಾನ್ ಮಾಡುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ ಮಾತಾಡಿದ ಭೈರಪ್ಪ ಹರೀಶ್ ಕುಮಾರ್, ಜಾತಿ ನಿಂದನೆ ಮಾಡುವ ಇವರೆಲ್ಲಾ ಸಿನಿಮಾಗಳಲ್ಲಿ ಮಾತ್ರ ನಾಯಕರು. ನಿಜವಾದ ನಾಯಕ ಓಡಿ ಹೋಗೋದಿಲ್ಲ. ಇಂತವರನ್ನು ಬ್ಯಾನ್ ಮಾಡಬೇಕು ಎಂದು ಭೈರಪ್ಪ ಹರೀಶ್ ಕುಮಾರ್ ​ಹೇಳಿದ್ದಾರೆ.

ದೂರು ಸ್ವೀಕರಿಸಿದ ಹಿರಿಯ ನಟ ಹಾಗೂ ಕರ್ನಾಟಕ ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಸುಂದರ್ ರಾಜ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಟ ಉಪೇಂದ್ರ ಅವರು ಬೇಕಂತ ಮಾತನಾಡಿದ್ದು ಎಂದು ನನಗೆ ಅನಿಸುವುದಿಲ್ಲ. ಸಮಾಜಮುಖಿಯಾಗಿ ಯೋಚನೆ ಮಾಡಬೇಕು. ಫಿಲ್ಮ್ ಚೇಂಬರ್ ಗೆ ಬ್ಯಾನ್ ಮಾಡೋ ಹಕ್ಕಿಲ್ಲ. ನಾವು ಸಂಧಾನ ಮಾಡ್ತೇವೆ, ಸಂಹಾರ ಮಾಡಲ್ಲ ಎಂದಿದ್ದಾರೆ.

ವಾಣಿಜ್ಯ ಮಂಡಳಿ ಕಾರ್ಯದರ್ಶಿಯಾಗಿ ಬ್ಯಾನ್ ಮಾಡಬೇಕೆಂಬ ಮನವಿ ಸ್ವೀಕರಿಸಿದ್ದೇನೆ. ಬ್ಯಾನ್ ಮಾಡಲು ಕೋರ್ಟ್ ಅನುಮತಿ ಕೊಡಲ್ಲ. ಉಪೇಂದ್ರ ಅವರನ್ನು ಕರೆಸಿ ಮಾತನಾಡುತ್ತೇವೆ ಸುಂದರ್ ರಾಜ್ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.