ಧ್ರುವ ಸರ್ಜಾ ಅವರ ಮುದ್ದಾದ ಮಗುವನ್ನು ನೋಡಿದ ಮೇಘನಾ ರಾಜ್ ತಾಯಿ ಹೇಳಿದ್ದೇನು ಗೊತ್ತಾ

 | 
ರಪ

ಶ್ರೀಕೃಷ್ಣ ಜನ್ಮಾಷ್ಠಮಿಯಂದೇ ಕನಕಪುರ ರಸ್ತೆಯಲ್ಲಿರುವ ಧ್ರುವ ಸರ್ಜಾ ಅವರ ಫಾರ್ಮ್ ಹೌಸ್‌ನಲ್ಲಿ ಪತ್ನಿ ಪ್ರೇರಣಾ ಶಂಕರ್ ಅವರಿಗೆ ಸೀಮಂತ ಕಾರ್ಯಕ್ರಮ ಮಾಡಲಾಗಿತ್ತು. ಈಗ ಅವರ ಮನೆಗೆ ಪುಟ್ಟ ಕೃಷ್ಣ ಆಗಮಿಸಿದ್ದಾನೆ. ಹೌದು, ಧ್ರುವ ಸರ್ಜಾ ಪತ್ನಿ ಪ್ರೇರಣಾ ಶಂಕರ್ ಅವರು ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಧ್ರುವ ಸರ್ಜಾ, "ಮಗು ಜನಿಸಿದೆ. ನಾರ್ಮಲ್ ಡೆಲಿವರಿ' ಎಂದು ಬರೆದುಕೊಂಡಿದ್ದಾರೆ. ಮೂಲಗಳ ಪ್ರಕಾರ ಧ್ರುವ ಸರ್ಜಾ ಅವರು ಈಗ ಗಂಡು ಮಗುವಿನ ತಂದೆ ಆಗಿದ್ದಾರೆ. ಈಗಾಗಲೇ ಧ್ರುವ ಸರ್ಜಾ ಅವರಿಗೆ ಹೆಣ್ಣು ಮಗು ಇದ್ದು, ಅವಳಿಗೆ ಇನ್ನೂ ನಾಮಕರಣ ಶಾಸ್ತ್ರ ಮಾಡಲಾಗಿಲ್ಲ. 

ಕೆಲ ತಿಂಗಳುಗಳಿಂದ ಈ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಮಗಳ ಮುದ್ದಾದ ಫೋಟೋವನ್ನು ಹಂಚಿಕೊಳ್ಳುತ್ತಿದ್ದರು. ಇನ್ನು ಚಿರು ಮಗ ರಾಯನ್ ಸರ್ಜಾ ಮಗುವನ್ನು ನೋಡಿ ಖುಷಿಯಿಂದ ಕುಣಿದಾಡಿದ್ದಾನೆ. ನಮ್ಮನೆಗೆ ಪಾಪು ಬಂತು ಎಂದು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾನೆ. 

ಮೇಘನಾ ರಾಜ್ ಜೊತೆ ಆಸ್ಪತ್ರೆಗೆ ಆಗಮಿಸಿದ್ದ ರಾಯನ್ ಮೊದಲು ಮಗುವನ್ನು ನೋಡಲು ಮುಂದೆ ಬರಲಿಲ್ಲ ಕೊನೆಗೆ ಧೈರ್ಯವಾಗಿ ನೋಡಿ ಸಂತೋಷಪಟ್ಟಿದ್ದಾನೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.