78 ವಷ೯ದ ಅಜ್ಜಿಗಾಗಿ ಓಡೋಡಿ ಬಂದ ಮೋದಿ ಮಾಡಿದ್ದೇನು ಗೊತ್ತಾ, ಅಲ್ಲಿದ್ದವರೆಲ್ಲಾ ಶಾಕ್

 | 
Hb

 ಚಪ್ಪಲಿ ಇಲ್ಲದ ಬರಿಗಾಲು, ಬುಡಕಟ್ಟು ವೇಷ ಭೂಷಣ.. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರ ಪತಿ, ಪ್ರಧಾನ ಮಂತ್ರಿ ಸೇರಿದಂತೆ ಗಣ್ಯಾತಿ ಗಣ್ಯರ ಎದುರು ಆಕೆ ನಡೆದು ಬರುತ್ತಿದ್ದರೆ, ಹಾಲಕ್ಕಿ ಸಮುದಾಯವೇ ಅಪರಾವತಾರ ಎತ್ತಿ ಬಂದಂತೆ ಕಾಣುತ್ತಿದ್ದರು..ಹೌದು..! ಆಕೆ ಹಾಲಕ್ಕಿ ಸಮುದಾಯದ ಮಹಿಳೆ ತುಳಸಿ ಗೌಡ.. ಉತ್ತರ ಕನ್ನಡ ಜಿಲ್ಲೆ ಅಂಕೋಲದವರು. ಕಳೆದ ವರ್ಷವೇ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದ ತುಳಸಿ ಗೌಡ ಅವರಿಗೆ  ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡುವಾಗ ಕಂಡ ದೃಶ್ಯ. 

ಹೌದು ಪರಿಸರವಾದಿ ತುಳಸಿ ಗೌಡ ಅವರು ಈವರೆಗೂ ಒಂದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು, ಬೃಹತ್ ಕಾಡನ್ನೇ ಬೆಳೆಸಿದ್ದಾರೆ. ಕಳೆದ 60 ವರ್ಷಗಳಿಂದ ಅವರು ಪರಿಸರ ಸಂರಕ್ಷಣೆಯ ಕಾರ್ಯ ಹಾಗೂ ಪರಿಸರ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.ಅಂಕೋಲ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡ ಅವರು ವೃಕ್ಷ ಮಾತೆ ಎಂದೇ ಜನಜನಿತ. ಹಾಲಕ್ಕಿ ಸಮುದಾಯದ ಈ ಮಹಿಳೆ, ಲಕ್ಷಾಂತರ ಮರಗಳನ್ನು ಸಾಕಿ ಬೆಳೆಸಿದ ಮಹಾ ತಾಯಿ..! ಅರಣ್ಯ ಇಲಾಖೆ ಜೊತೆಗೆ ಕೈ ಜೋಡಿಸಿ ಕೆಲಸ ಮಾಡುತ್ತಿರುವ ಇವರು, ಅರಣ್ಯ ಹಾಗೂ ವೃಕ್ಷಗಳ ಬಗ್ಗೆ ಸಂಪಾದಿಸಿರುವ ಜ್ಞಾನ ಅಪಾರ.ಬಾಲಕಿಯಾಗಿದ್ದ ಕಾಲದಿಂದ ಹಿಡಿದು ಇಂದಿನವರೆಗೂ ತುಳಸಿ ಗೌಡ ಅವರು ಮರ ಹಾಗೂ ಕಾಡಿನಲ್ಲೇ ಬೆಳೆದು ಬಂದವರು. ಮರಗಳ ಜೊತೆಯಲ್ಲೇ ನಿತ್ಯ ಒಡನಾಟ.. 

ಹೀಗಾಗಿ. ಇವರನ್ನು ‘ಅರಣ್ಯದ ಎನ್‌ಸೈಕ್ಲೋಪೀಡಿಯಾ’ ಎನ್ನುತ್ತಾರೆ..! ಗಿಡ, ಮರ, ಬಳ್ಳಿ, ಅವುಗಳ ಜಾತಿ, ಯಾವ ಮರ ಹೇಗೆ ಬೆಳೆಯುತ್ತೆ, ಯಾವ ಗಿಡಕ್ಕೆ ಎಷ್ಟು ನೀರು ಹಾಕಬೇಕು, ಯಾವಾಗ ನೀರುಣಿಸಬೇಕು ಹೀಗೆ ತುಳಸಿ ಗೌಡ ಅವರಿಗೆ ತಿಳಿಯದ ಸಂಗತಿಗಳೇ ಇಲ್ಲ.ಯಾವ ಜಾತಿಯ ಗಿಡವನ್ನು ಯಾವಾಗ ನೆಡಬೇಕು ಎಷ್ಟು ಪ್ರಮಾಣದಲ್ಲಿ ನೀರುಣಿಸಬೇಕು.. ಯಾವ ರೀತಿಯ ಗೊಬ್ಬರವನ್ನು ಯಾವ ಗಿಡಕ್ಕೆ ಹಾಕಬೇಕು.. 

ಯಾವ ಮರ ಯಾವ ಕಾಲದಲ್ಲಿ ಹಣ್ಣು ಹಾಗೂ ಹೂ ಬಿಡುತ್ತದೆ ಎಂಬುದೆಲ್ಲದರ ಮಾಹಿತಿಯೂ ತುಳಸಿ ಗೌಡ ಅವರಿಗೆ ಇದೆ. 300ಕ್ಕೂ ಹೆಚ್ಚು ಪ್ರಭೇದದ ಮರಗಳ ಮಾಹಿತಿ ತುಳಸಿ ಗೌಡ ಅವರ ನಾಲಗೆ ತುದಿಯಲ್ಲಿದೆ..! ಜೊತೆಯಲ್ಲೇ ಯಾರಾದರೂ ಮರ ಕಡಿಯಲು ಮುಂದಾದರೂ ಅವರು ಉಗ್ರ ಹೋರಾಟವನ್ನೇ ಮಾಡುತ್ತಾರಂತೆ.

(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.