ಡ್ರೋನ್ ಪ್ರತಾಪ್ ಬಗ್ಗೆ ಸ್ವಂತ ಊರಿನವರು ಹೇಳಿದ್ದೇನು ಗೊತ್ತಾ, ನೀವು ಅಂದುಕೊಂಡಂಗಲ್ಲ ಈ ಪ್ರತಾಪ್

 | 
Hg

ಕನ್ನಡ ಕಿರುತೆರೆಯಲ್ಲೇ ಅತಿ ದೊಡ್ಡ ರಿಯಾಲಿಟಿ ಶೋ ಅಂದರೆ ಅದು ಬಿಗ್​ಬಾಸ್​. ಬಿಗ್​ಬಾಸ್​ ಸೀಸನ್ 10ರ ಮೇಲೆ ಈಗ ಇಡೀ ಕರುನಾಡೇ ಕಣ್ಣಿಟ್ಟಿದೆ. ಎಲ್ಲರ ಕಾಯುವಿಕೆಯಂತೆ ಈ ಬಾರಿ ಡ್ರೋನ್ ಪ್ರತಾಪ್ ಬಿಗ್​ಬಾಸ್​ ಸೀಸನ್ 10ಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಡ್ರೋನ್ ಪ್ರತಾಪ್ ಅನ್ನುವುದಕ್ಕೂ ಮುಂಚೆ ಇವರ ಹೆಸರು ಪ್ರತಾಪ್ ಅಂತಷ್ಟೇ ಇತ್ತು. 

ಆದರೆ ಅದೊಂದು ದಿನ ಡ್ರೋನ್ ಕಂಡಿದ್ದು ಇಡೀ ದೇಶವೇ ತನ್ನ ಕಡೆ ನೋಡೋ ರೀತಿ ಮಾಡಿಕೊಂಡಿದ್ದರು ಪ್ರತಾಪ್. ಅತಿ ಚಿಕ್ಕ ವಯಸ್ಸಿನಲ್ಲಿ ಯಾರ ಸಹಾಯವು ಇಲ್ಲದೆ ಬಡತನದಲ್ಲೂ ಈ ರೀತಿಯ ಸಾಧನೆ ಮಾಡಿದ್ದೇನೆ  ಎಂದು ಹೇಳಿಕೊಂಡ ಪ್ರತಾಪ್​ಗೆ ಇಡೀ ಕರ್ನಾಟಕವೇ ಸಾಥ್ ಕೊಟ್ಟಿತ್ತು. ಈ ಎಲ್ಲಾ ಸಾಧನೆಯ ನಂತರ ಪ್ರತಾಪ್ ಹೆಸರು ತಾನಾಗೆ ಡ್ರೋನ್ ಪ್ರತಾಪ್ ಅಂತ ಬದಲಾಗಿ ಹೋಯ್ತು. 

ನಂತರದಲ್ಲಿ ಎಲ್ಲರ ಮನೆಯಲ್ಲೂ ಈ ಹುಡುಗನದ್ದೇ ಮಾತು.  ಅತೀ ಚಿಕ್ಕ ವಯಸ್ಸಲ್ಲೇ ಎಲ್ಲಾ ಶಾಲಾ ಕಾಲೇಜುಗಳಿಗೆ ವಿಐಪಿ, ಚೀಫ್ ಗೆಸ್ಟ್ ಆಗಿ ಹೋಗಿ ಎಲ್ಲಾ ವಿದ್ಯಾರ್ಥಿಗಳಿಗೂ ಹುರಿದುಂಬಿಸ್ತಾ ಇದ್ದರು ಡ್ರೋನ್ ಪ್ರತಾಪ್. ಆದರೆ ಅದೊಂದು ದಿನ ಡ್ರೋನ್ ಪ್ರತಾಪ್​​​ನ ಪಾಲಿಗೆ ಕೆಟ್ಟ ದಿನವೇ ಆಗಿತ್ತು ಅಂದ್ರೆ ಸುಳ್ಳಲ್ಲ. ಯಾಕಂದ್ರೆ ಈತ ಡ್ರೋನ್ ಕಂಡೇ ಇಡಿದಿಲ್ಲ. ಇವರ ಮಾತು, ಸಾಧನೆ ಎಲ್ಲವು ಸುಳ್ಳು ಅಂತ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡೋಕೆ ಶುರುವಾಗಿ ಬಿಡ್ತು.

ಕಾಲ ಕ್ರಮೇಣ ಸೋಷಿಯಲ್ ಮೀಡಿಯಾ ಹೊರ ಜಗತ್ತಿನಿಂದ ಸ್ವಲ್ಲ ದೂರವೇ ಉಳಿದಿದ್ದ ಪ್ರತಾಪ್ ಈಗ ಮತ್ತೆ ಕರುನಾಡ ಜನರ ಮುಂದೆ ಬಿಗ್​ಬಾಸ್​​ ಸೀಸನ್​ 10ರ ಮೂಲಕ ವಾಪಸ್ ಬಂದಿದ್ದಾರೆ. ಬಿಗ್​ಬಾಸ್​ಗೆ ಬಂದಿದ್ದೆ ಬಂದ್ದಿದ್ದು ಪ್ರತಾಪ್​ಗೆ ಎಲ್ಲವು ಶುಭನೇ ಆಗ್ತಿದೆ. ಒಳಗೆ ಕೆಲವು ಹಿಯಾಳಿಸುತ್ತಿದರು ಕೂಡ ಆಚೆ ಪ್ರತಾಪ್​ಗೆ ಕರುನಾಡ ವೀಕ್ಷಕರಿಂದ ಬಾರಿ ಬೆಂಬಲ ವ್ಯಕ್ತವಾಗುತ್ತಿದೆ. 

ಈ ಬಾರಿಯ ಬಿಗ್​ಬಾಸ್​​ನ ಎಲ್ಲರ ನೆಚ್ಚಿನ ಸ್ಪರ್ಧಿಯಾಗಿದ್ದಾರೆ ಪ್ರತಾಪ್. ಹೌದು ಪ್ರತಾಪ್​ನ ಮುಗ್ಧತೆ, ಸಿಪ್ಲಿಸಿಟಿ, ಆತ ಮಾತಾಡೋ ರೀತಿಗೆ ಎಲ್ಲರೂ ಮನಸೋತಿದ್ದಾರೆ. ಡ್ರೋನ್ ವಿಚಾರವಾಗಿ ಕರ್ನಾಟಕಕ್ಕೆ ಮೋಸ ಮಾಡಿದ್ದಕ್ಕೆ ಬೇಸರ ಪಟ್ಟಿಕೊಂಡಿದ್ದ ಕನ್ನಡಿಗರು. ಈಗ ತಪ್ಪು ಎಲ್ಲರು ಮಾಡುತ್ತಾರೆ. ಆದರೆ ಅದನ್ನು ತಿದ್ದಿ ನಡೆಯುವ ಮನುಜ ಗುಣ. ಪ್ರತಾಪ್ ಯಾರಿಗೂ ಮೋಸ ಮಾಡಿ ಏನ್ನನ್ನು ಕೊಳ್ಳೆ ಹೊಡೆದಿಲ್ಲ. ಬದಲಿಗೆ ಸಾಕಷ್ಟು ಜನರನ್ನ ಮೋಟಿವೇಟ್ ಮಾಡಿದ್ದಾರೆ. 

ಎಲ್ಲರಿಗೂ ಎರಡನೇ ಅವಕಾಶ ಜೀವನದಲ್ಲಿ ಬಹು ಮುಖ್ಯ ಆಗುತ್ತೆ. ಆ ಎರಡನೇ ಅವಕಾಶ ಪ್ರತಾಪ್​​ಗೆ ಬಿಗ್​ಬಾಸ್​ ಸ್ಟೇಜ್ ಕಲ್ಪಿಸಿಕೊಟ್ಟಿದೆ. ಇನ್ನೂ, ಇಡೀ ಕರ್ನಾಟಕ ಪ್ರತಾಪ್​ ಬೆಂಬಲಕ್ಕೆ ನಿಂತಿದ್ದು ಶುರುವಾದ ಒಂದೇ ವಾರದಲ್ಲಿ ಬಿಗ್​ಬಾಸ್​ ಸೀಸನ್​ 10 ಪ್ರತಾಪ್​ ಅವರೇ ಗೆಲ್ಲಬೇಕು ಅನ್ನೋ ನಿರ್ಧಾರಕ್ಕೆ ಜನ ಬಂದಿದ್ದಾರೆ. ಮಂಡ್ಯ ಮಳವಳ್ಳಿ ತಾಲ್ಲೂಕಿನ ಜನರಂತೂ ನಮ್ಮೂರ ಹುಡುಗ ಗೆಲ್ಲಲಿ ಎಂದು ಕೂಡ ಅವನ ಬೆಂಬಲಕ್ಕೆ ನಿಂತು ಓಟ್ ಮಾಡುತ್ತಿದ್ದಾರೆ . ಒಟ್ಟಿನಲ್ಲಿ ಡ್ರೋನ್ ಪ್ರತಾಪ ಲಕ್ ತಿರುಗಿದೆ ಎಂದೇ ಹೇಳಬಹುದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.