ಕುಸ್ತಿ ಮಾಡಲು ಬಂದ ವಿನಯ್, ರೊಚ್ಚಿಗೆದ್ದ ತನಿಷ್ಹಾ ಹೇಳಿದ್ದೇನು ಗೊತ್ತಾ

 | 
Bgg

ಬಿಗ್ ಬಾಸ್’ ಮನೆಯಲ್ಲಿ ಹಳ್ಳಿ ಟಾಸ್ಕ್ ನೀಡಲಾಗುತ್ತಿದೆ. ಅಲ್ಲಿ ಸಾಕಷ್ಟು ಕಿತ್ತಾಟ ನಡೆಯುತ್ತಿದೆ. ಸಾಕಷ್ಟು ವಾಗ್ವಾದಗಳು ಕೂಡ ಆಗಿವೆ. ಈಗ ಬಿಗ್ ಬಾಸ್ ಕುಸ್ತಿ ಅಖಾಡವನ್ನೇ ಸಿದ್ಧಡಿಸಿದ್ದಾರೆ. ಇಲ್ಲಿಯೂ ಜಗಳ ಏರ್ಪಟ್ಟಿದೆ. ವಿನಯ್ ಗೌಡ ಹಾಗೂ ತನಿಷಾ ಕುಪ್ಪಂಡ  ಮಧ್ಯೆ ವಾಗ್ವಾದ ನಡೆದಿದೆ. ವಿನಯ್ ಹೋದಲ್ಲೆಲ್ಲ ಬರೀ ಜಗಳವೇ ಎನ್ನುವ ಅಭಿಪ್ರಾಯ ಅನೇಕರಿಂದ ವ್ಯಕ್ತವಾಗಿದೆ. 

ಅವರು ಬಳಕೆ ಮಾಡುವ ಶಬ್ದದ ಬಗ್ಗೆಯೂ ಅನೇಕರಿಗೆ ಅಸಮಾಧಾನ ಇದೆ. ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಅನೇಕರು ವ್ಯಕ್ತವಾಗಿದೆ. ಇನ್ನು ಈ ಮೊದಲು ಸಾಕಷ್ಟು ಬಾರಿ ವಿನಯ್ ಗೌಡ ಹಾಗು ತನಿಷಾ ಕುಪ್ಪಂಡ ಮಧ್ಯೆ ಮಾತಿನ ಚಕಮಕಿ ನಡೆದಿದೆ. ವಿನಯ್ ಗೌಡ ಅವರು ಇತ್ತೀಚೆಗೆ ಮೈಕಲ್ ಜೊತೆ ಏಕಕಾಲಕ್ಕೆ ಸ್ಮೋಕಿಂಗ್ ರೂಮ್ ಬಳಕೆ ಮಾಡಿದ್ದರು. 

ಅದರಿಂದ ಇಡೀ ಮನೆಯವರಿಗೆ ಶಿಕ್ಷೆ ಸಿಕ್ಕಿತ್ತು. ಆಗ ವಿನಯ್ ಅವರಿಗೆ ತನಿಷಾ ಥ್ಯಾಂಕ್ಯು ವಿನಯ್ ಎಂದು ಹೇಳಿದ್ದರು. ತಾನು ಉದ್ದೇಶಪೂರ್ವಕವಾಗಿ ಈ ತಪ್ಪು ಮಾಡಿಲ್ಲವಾದರೂ ತನಿಷಾ ವ್ಯಂಗ್ಯ ಮಾಡಿದ್ದಾಳೆ ಅಂತ ವಿನಯ್ ಕೂಗಾಡಿದ್ದರು. ಇನ್ನು ಟಾಸ್ಕ್ ವಿಚಾರ ಬಂದಾಗಲೂ ಕೂಡ ತನಿಷಾ ಅವರು ಸಾಕಷ್ಟು ಬಾರಿ ರೂಲ್ಸ್ ಹೀಗೆ ಇದೆ, ಹೀಗೆ ಆಗಬೇಕು ಅಂತ ಹೇಳಿದ್ದರು. 

ವಿನಯ್ ಅವರು ಉಗ್ರಂ ತಂಡದಲ್ಲಿದ್ದರೆ ತನಿಷಾ ಅವರು ಭಜರಂಗಿ ಟೀಂನಲ್ಲಿದ್ದಾರೆ. ತನಿಷಾ ಟೀಂ ಸೋತಿತು ಅಂತ ವಿನಯ್ ಅವರು ಕೆಲವರನ್ನು ಸಿಕ್ಕಾಪಟ್ಟೆ ರೇಗಿಸಿದ್ದರು, ಏನೇನೋ ಜೋಕ್ ಮಾಡಿದ್ದರು. ಇದು ತನಿಷಾಗೆ ಬೇಸರ ತಂದಿತ್ತು. ಅದರ ನೋವು ತನಿಷಾ ಮನಸ್ಸಿನಲ್ಲಿ ಹಾಗೆಯೇ ಉಳಿದಿತ್ತು.
ಏಯ್ ಏನೇ ಎಂದೆಲ್ಲ ಮಾತಾದಾಗ ಕೆಲ ವಿಷಯಗಳ ಕುರಿತು ಚರ್ಚೆ ವೇಳೆ ತನಿಷಾ ಅವರು ಸುಮ್ಮನೆ ಇರಲಿಲ್ಲ. 

ವಿನಯ್ ಬಳಿ ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದಾರೆ. ವಿನಯ್ ಅವರು ಮಾಡುವ ಜೋಕ್‌ಗಳು, ಕಾಮೆಂಟ್ ಮಾಡೋದು, ರೂಲ್ಸ್ ಮುರಿದಾಗಲೂ ಕೂಡ ತನಿಷಾ ದನಿ ಎತ್ತಿದ್ದರು. ಇದು ಅನೇಕ ವೀಕ್ಷಕರಿಗೆ ಇಷ್ಟವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಸಾಕಷ್ಟು ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.