ಮಾರ್ಟಿನ್ ಸಿನಿಮಾದ ಹೀರೋಯಿನ್ ಯಾರು ಗೊತ್ತಾ, ಈಕೆ ಚಂದುಳ್ಳಿ ಚೆಲುವೆ ಎಂದ ಧುರ್ವ ಸರ್ಜಾ

ಬೆಂಕಿಯಂತ ಹುಡುಗನಿಗೆ ಬೆಣ್ಣೆಯಂತ ಹುಡುಗಿ..ಮಾರ್ಟಿನ್ ಚಿತ್ರದ ಬೆಡಗಿ ಇವರೇನೇ
ಆ ನಟ ಮಾಡಿದ್ದೆ ನಾಲ್ಕು ಸಿನಿಮಾ ಆದ್ರೂ ಆ ನಟ ಕನ್ನಡ ಚಿತ್ರರಂಗದಲ್ಲಿ ಗೆಲ್ಲೋ ಕುದುರೆ. ಅಷ್ಟಕ್ಕೂ ವರ್ಷಕ್ಕೊಂದು ಸಿನಿಮಾ ಮಾಡಿದ್ರು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಏಕೈಕ ಹೀರೊ ಅಂದ್ರೆ ಅದು ನಟ ಧ್ರುವ ಸರ್ಜಾ .ಹೌದು ಸಿನಿಮಾಗಳ ಆಯ್ಕೆಯಲ್ಲಿ ನಟ ಧ್ರುವ ಸರ್ಜಾ ತುಂಬ ಚ್ಯೂಸಿ. ‘ಪೊಗರು’ ಸಿನಿಮಾದ ಗೆಲುವಿನ ಬಳಿಕ ಅವರು ‘ಮಾರ್ಟಿನ್’ ಸಿನಿಮಾ ಒಪ್ಪಿಕೊಂಡರು. ಸದ್ಯ ಆ ಚಿತ್ರಕ್ಕೆ ಶೂಟಿಂಗ್ ಮುಗಿದಿದ್ದು ಇತ್ತೀಚಿಗೆ ಅದರ ಟ್ರೈಲರ್ ಬಿಡುಗಡೆಯಾಗಿತ್ತು.
ಅಷ್ಟಕ್ಕೂ ಈ ಚಿತ್ರಕ್ಕೆ ಧ್ರುವ ಸರ್ಜಾಗೆ ನಾಯಕಿಯಾಗಿ ನಟಿಸುವುದು ಯಾರು ಎಂಬ ಬಗ್ಗೆ ಚಿತ್ರತಂಡದಿಂದ ಈವರೆಗೆ ಮಾಹಿತಿ ಸಿಕ್ಕಿರಲಿಲ್ಲ. ಆ ಕುರಿತು ಇದೀಗ ‘ಮಾರ್ಟಿನ್’ ಬಳಗ ಬ್ರೇಕಿಂಗ್ ನ್ಯೂಸ್ ನೀಡಿದೆ. ಧ್ರುವ ಸರ್ಜಾಗೆ ಜೋಡಿಯಾಗಿಸಲು ಬಹುಭಾಷಾ ನಟಿ ವೈಭವಿ ಶಾಂಡಿಲ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ವೈಭವಿ ಅವರು ತುಂಬ ಫೇಮಸ್ ಆಗಿದ್ದಾರೆ. ಒಳ್ಳೊಳ್ಳೆಯ ಪ್ರಾಜೆಕ್ಟ್ಗಳು ಅವರ ಪಾಲಿಗೆ ಒಲಿದು ಬರುತ್ತಿವೆ. ಈಗ ಅವರು ‘ಮಾರ್ಟಿನ್’ ಚಿತ್ರಕ್ಕೆ ನಾಯಕಿ ಆಗಿ ಮಿಂಚಲಿದ್ದಾರೆ.
ಅಷ್ಟಕ್ಕೂ ವೈಭವಿ ಶಾಂಡಿಲ್ಯ ಮೊದಲು ನಟಿಸಿದ್ದು ಮರಾಠಿಯ ‘ಎಕ್ ಅಲ್ಬೇಲಾ’ ಸಿನಿಮಾದಲ್ಲಿ. ನಂತರ ಅವರಿಗೆ ತಮಿಳು ಮತ್ತು ತೆಲುಗು ಚಿತ್ರರಂಗದಿಂದ ಅವಕಾಶಗಳು ಬರಲಾರಂಭಿಸಿದವು. ‘ರಾಜ್ ವಿಷ್ಣು’ ಸಿನಿಮಾದಲ್ಲಿ ನಟಿಸುವ ಮೂಲಕ ಅವರು ಕನ್ನಡಕ್ಕೂ ಕಾಲಿಟ್ಟರು. ಅದಲ್ಲದೇ, ಬಹುನಿರೀಕ್ಷಿತ ‘ಗಾಳಿಪಟ 2’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಈಗ ಅವರಿಗೆ ‘ಮಾರ್ಟಿನ್’ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ.ಈಗಾಗಲೇ ಹಲವು ಕಾರಣಗಳಿಂದಾಗಿ ‘ಮಾರ್ಟಿನ್’ ಸಿನಿಮಾ ಹೈಪ್ ಸೃಷ್ಟಿ ಮಾಡಿದೆ. ಚಿತ್ರೀಕರಣ ಆರಂಭ ಆಗುವುದಕ್ಕೂ ಮುನ್ನವೇ ಫೋಟೋಶೂಟ್ ಮಾಡಿಸಲಾಗಿತ್ತು.
ಟೈಟಲ್ ಲಾಂಚ್ ವೇಳೆಗೆ ಧ್ರುವ ಅವರ ಫಸ್ಟ್ಲುಕ್ ಕೂಡ ಬಿಡುಗಡೆ ಆಗಿತ್ತು. ಮೋಷನ್ ಪೋಸ್ಟರ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದರು. ಈ ಚಿತ್ರಕ್ಕಾಗಿ ಧ್ರುವ ಸಾಕಷ್ಟು ವರ್ಕೌಟ್ ಮಾಡುತ್ತಿದ್ದಾರೆ. ಜಿಮ್ನಲ್ಲಿ ಕಸರತ್ತ ನಡೆಸುತ್ತಿರುವ ವಿಡಿಯೋವನ್ನು ಅವರು ಇತ್ತೀಚೆಗೆ ಶೇರ್ ಮಾಡಿಕೊಂಡಿದ್ದಾರೆ. ಮಾರ್ಟಿನ್’ ಚಿತ್ರಕ್ಕೆ ಎ.ಪಿ. ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ಧ್ರುನ ನಟನೆಯ ಮೊದಲ ಸಿನಿಮಾ ‘ಅದ್ದೂರಿ’ಗೆ ಆ್ಯಕ್ಷನ್-ಕಟ್ ಹೇಳಿದ್ದ ಅವರು ಈಗ ಮತ್ತೊಮ್ಮೆ ಧ್ರುವ ಜತೆ ಕೈ ಜೋಡಿಸಿದ್ದಾರೆ.
(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.