ತಂದೆ ಮಗಳ ಸಂಬಂಧಕ್ಕೆ ಬಣ್ಣ ಕಟ್ಟಬೇಡಿ, ಹೊಸ ಸುದ್ದಿಯೊಂದಿಗೆ ಮತ್ತೆ ಎಂಟ್ರಿ ಕೊಟ್ಟ ಬಿಟಿವಿ ದಿವ್ಯಾ ವಸಂತ
Sep 22, 2024, 10:25 IST
|
ಕಳೆದ ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ಮಸಾಜ್ ಪಾರ್ಲರ್ ಒಂದರಿಂದ ಹಣ ವಸೂಲಿ ಮಾಡಿದ್ದಾರೆಂಬ ಆರೋಪ ಹೊತ್ತಿದ್ದ ಸುದ್ದಿ ವಾಹಿನಿ ನಿರೂಪಕಿ ದಿವ್ಯಾ ವಸಂತ ಅವರೊಂದಿಗೆ ಆತ್ಮೀಯವಾಗಿ ಕಾಣಿಸಿಕೊಂಡಿದ್ದ ವ್ಯಕ್ತಿಯೊಂದಿಗೆ ತರಹೇವಾರಿ ಸಂಬಂಧ ಕಲ್ಪಿಸಲಾಗಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಲು ವಿಡಿಯೋ ಒಂದನ್ನು ಪೋಸ್ಟ್ ಮಾಡಿಕೊಂಡಿರುವ ದಿವ್ಯಾ ವಸಂತ , ಆವರು ನನ್ನನ್ನು ದತ್ತು ತೆಗೆದುಕೊಂಡ ವೆಂಕಟೇಶಪ್ಪ ಎಂದು ಹೇಳಿಕೊಂಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ನಾನೊಬ್ಬ ಪ್ರಮುಖವಾದ ವ್ಯಕ್ತಿಯನ್ನು ನಿಮಗೆ ಪರಿಚಯ ಮಾಡಿಕೊಡ್ತೀನಿ. ಒನ್ ಅಂಡ್ ಓನ್ಲಿ ನಮ್ಮ ವೆಂಕಟೇಶ್ ಅಪ್ಪ. ನಾನು ಮೀಡಿಯಾದಲ್ಲಿ ವೃತ್ತಿ ಜೀವನ ಆರಂಭ ಮಾಡಿದ್ದು, ವೆಂಕಟೇಶಪ್ಪ ಅವರ ಕಡೆಯಿಂದ. ಅವರು ಒಂದು ಚಾನೆಲ್‌ನಲ್ಲಿ ಮೆಟ್ರೋ ಚೀಫ್ ಆಗಿ ಕೆಲಸ ಮಾಡಿಕೊಂಡಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅದಕ್ಕಾಗಿ ನನ್ನನ್ನು ದತ್ತು ತೆಗೆದುಕೊಂಡಿದ್ದಾರೆ. ನಾನು ಅವರ ದತ್ತು ಪತ್ರಿ.. ಈ ಬಗ್ಗೆ ನೀನು ಹೇಳಪ್ಪ.. ಎಂದು ನಗೆ ಬೀರುತ್ತಾಳೆ.
ಈ ವೇಳೆ ಮಾತನಾಡಿದ ವೆಂಕಟೇಶಪ್ಪ, ನಮಸ್ಕಾರ ಎಲ್ಲರಿಗೂ.. ನನಗೆ ದಿವ್ಯಾ ವಸಂತ ಪರಿಚಯ ಆಗಿದ್ದು ಟಿವಿ 1 ಚಾನೆಲ್‌ನಲ್ಲಿ ಮೆಟ್ರೋ ಚೀಫ್ ಆಗಿ ಕೆಲಸ ಮಾಡುತ್ತಿದ್ದಾಗ. ಆಗ ರಿಪೋರ್ಟರ್ ಆಗಿ ಬಂದ ದಿವ್ಯಾ ಉತ್ತಮವಾಗಿ ಕೆಲಸ ಕಲಿಯುತ್ತಿದ್ದಳು. ತುಂಬಾ ಎಫರ್ಟ್ ಹಾಕಿ ಕೆಲಸ ಮಾಡುತ್ತಿದ್ದಳು. ಅವಳ ಶ್ರಮವೇ ಈಗ ಈ ಹಂತಕ್ಕೆ ಬೆಳೆಯಲು ಸಾಧ್ಯವಾಗಿದೆ. ಯಾರಾದರೂ ವೃತ್ತಿಯಲ್ಲಿ ಬೆಳೆಯಬೇಕು ಅಲ್ವಾ ಅದಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದ್ದೇನೆ. ನನಗೆ ಯಾರೂ ಹೆಣ್ಣು ಮಕ್ಕಳಿಲ್ಲ. ನಾನು ಇವಳನ್ನು ನನ್ನ ಮಗಳೆಂದೇ ಭಾವಿಸಿದ್ದೇನೆ.
ಏನೇ ಬೆಳೆದರೂ ಅದಕ್ಕೆ ನಾನೂ ಸಪೋರ್ಟ್ ಮಾಡುತ್ತೇನೆ. ಮಕ್ಕಳು ಬೆಳೆಯಬೇಕು ಅಲ್ವಾ.? ನಾವು ಸತ್ತಮೇಲೆ ಯಾರಾದರೂ ನಮ್ಮ ಹೆಸರೇಳಲು ಇರಬೇಕು ಎನ್ನುವ ಭಾವನೆ ನನ್ನದು ಎಂದು ಹೇಳಿಕೊಂಡಿದ್ದಾರೆ.ಇದಾದ ನಂತರ ಪುನಃ ಮಾತನಾಡಿದ ನಿರೂಪಕಿ ದಿವ್ಯಾ ವಸಂತ 'ದಯವಿಟ್ಟು ಯಾರೂ ತಂದೆ ಮಕ್ಕಳ ಸಂಬಂಧಕ್ಕೆ ಸಂಬಂಧಕ್ಕೆ ಬೇರೆ ಅರ್ಥವನ್ನು ಕೊಲ್ಪಿಸಬೇಡಿ. ನಿಮ್ಮೆಲ್ಲರಲ್ಲೂ ನಾನು ಮನವಿ ಮಾಡಿಕೊಳ್ಳುತ್ತೇನೆ.
ಇಷ್ಟಲ್ಲದೇ ಎಲ್ಲಿ ಆ ಮುದಿ ಅಳಿಮಯ್ಯ ಎಂದು ಬಹುತೇಕರು ಕಾಮೆಂಟ್ ಮಾಡುತ್ತಿದ್ದೀರಿ. ನಿಮಗೆ ಮನಸ್ಸಿಗೆ ಬಂದ ಹಾಗೆ ಕಾಮೆಂಟ್ ಮಾಡುತ್ತಿದ್ದೀರ. ಇದರಿಂದ ನಮಗೆ ತುಂಬಾ ನೋವಾಗುತ್ತಿದೆ. ಏನೂ ಇಲ್ಲದಿದ್ದರೂ, ಏನೋ ಸಂಬಂಧವಿದೆ ಎಂದು ತೋರಿಸುತ್ತಿದ್ದೀರಿ. ಕೇವಲ 2 ಸೆಕೆಂಡ್ ವಿಡಿಯೋವನ್ನು ಸ್ಲೋ ಮೋಷನ್‌ನಲ್ಲಿ 5 ಸೆಕೆಂಡ್ ಮಾಡಿ ರಾಸಲೀಲೆ ಎಂಬಂತೆ ತೋರಿಸುತ್ತಿದ್ದೀರಿ. ಅದರಲ್ಲಿ ಎಲ್ಲಿ ರಾಸಲೀಲೆ ಇದೆ ಎಂಬುದು ಆ ದೇವರು ಒಬ್ಬನಿಗೇ ಗೊತ್ತು ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.