ನಿಮ್ಮ ಅಡುಗೆ ಮನೆಯ ಈ ವಸ್ತು ಮಾತ್ರ ಯಾರಿಗೂ ಕೊಡಬೇಡಿ, ಅದೃಷ್ಟ ಲಕ್ಷ್ಮಿ ಮನೆ ಬಿಡುವಳು
ಎಂಥ ಪರಿಸ್ಥಿತಿಯಲ್ಲಿಯೂ ಸಹ ನೀವು ನಿಮ್ಮ ಮನೆಯಲ್ಲಿರುವ ಈ ಐದು ವಸ್ತುಗಳನ್ನು ಬೇರೆಯವರಿಗೆ ನೀಡಬಾರದು. ಒಂದು ವೇಳೆ ನೀವು ನೀಡಿದೆ ಆದರೆ ನಿಮಗೆ ಕಷ್ಟಗಳು ದಾರಿದ್ರ್ಯ ಗಳು ಕಟ್ಟಿಟ್ಟ ಬುತ್ತಿ. ಯಾವ ಪರಿಸ್ಥಿತಿಯಲ್ಲಿಯೂ ಸಹ ಎಂತ ಕಷ್ಟವಿದ್ದರೂ ನಿಮ್ಮ ಮನೆಯಿಂದ 5 ವಸ್ತುಗಳನ್ನು ನೀವು ದಾನದ ರೂಪದಲ್ಲಾಗಲೀ ಅಥವಾ ಕೊಡುಗೆಯ ರೂಪದಲ್ಲಾಗಲಿ ನೀಡಲೇಬಾರದು. 5 ವಸ್ತುಗಳನ್ನು ನೀವು ಬೇರೆಯವರಿಗೆ ನೀಡಿದರೆ ನಿಮಗೆ ದೋಷಗಳು ದರಿದ್ರಗಳು ಉಂಟಾಗಿ ನಿಮ್ಮ ಮನೆಯಲ್ಲಿರುವ ಅದೃಷ್ಟವು ಬೇರೆಯವರ ಮನೆಗೆ ಹೋಗುತ್ತದೆ.
ಯಾಕೆಂದರೆ ನಮ್ಮ ಹಿರಿಯರು ಗಳು ಹೇಳುವಂತೆ 5 ವಸ್ತುಗಳಲ್ಲಿ ಶ್ರೀ ಲಕ್ಷ್ಮಿ ದೇವಿಯ ಸ್ವರೂಪವು ಇರುತ್ತದೆ ಹಾಗಾಗಿ ಈ ಐದು ವಸ್ತುಗಳನ್ನು ನೀವು ದಾನ ಮಾಡಬಾರದು. ಮಾಡಿದರೆ ಇದರಿಂದ ನೀವು ಆರ್ಥಿಕವಾಗಿ ಸಾಕಷ್ಟು ನಷ್ಟವನ್ನು ಅನುಭವಿಸಬೇಕಾಗುತ್ತದೆ ಅಷ್ಟೇ ಅಲ್ಲದೆ ಇತರ ಕಷ್ಟಗಳು ಸಹ ನಿಮಗೆ ಬೆಂಬಿಡದೆ ಕಾಡುತ್ತಿರುತ್ತವೆ ಹಾಗಾದರೆ ಯಾವ 5 ವಸ್ತುಗಳನ್ನು ನೀವು ನಿಮ್ಮ ಮನೆಯಿಂದ ಬೇರೆಯವರಿಗೆ ಕೊಡಬಾರದು ಎಂದು ನೋಡೋಣ.
ಮೊದಲನೆಯದಾಗಿ ಚಿನ್ನದ ಆಭರಣಗಳು ಹೌದು ನೀವು ನಿಮ್ಮ ಮನೆಯಲ್ಲಿ ಇರುವಂತಹ ಮತ್ತು ಧರಿಸಿದಂತಹ ಆಭರಣಗಳನ್ನು ಎಂದಿಗೂ ಸಹ ಕೊಡಬಾರದು.
ಇನ್ನು ಎರಡನೆಯದಾಗಿ ಪೊರಕೆ. ಮನೆಯಲ್ಲಿ ಸಾಮಾನ್ಯವಾಗಿ ಹಿರಿಯರು ಹೇಳುವಂತೆ ಪೊರಕೆಯನ್ನು ಕಾಲಿನಿಂದ ಒದೆಯುವುದಾಗಲಿ ತಳ್ಳುವುದಾಗಲಿ ಮಾಡಬಾರದು ಒಂದುವೇಳೆ ತಿಳಿಯದೆ ಅದನ್ನು ಕಾಲಿನಿಂದ ಸೋಕಿದರೂ ಸಹ ಪೊರಕೆಯನ್ನು ನಮಸ್ಕರಿಸುವಂತೆ ಹಿರಿಯರು ಹೇಳುತ್ತಾರೆ ಇದರ ಹಿನ್ನೆಲೆ ಅರ್ಥ ಪೊರಕೆಯಲ್ಲಿ ಲಕ್ಷ್ಮೀದೇವಿಯು ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ.
ಆದ್ದರಿಂದ ಶ್ರೀ ಲಕ್ಷ್ಮಿ ಸ್ವರೂಪವಾದ ಪೊರಕೆಯನ್ನು ಎಂದಿಗೂ ಸಹ ನೀವು ಬೇರೆಯವರಿಗೆ ನೀಡಬಾರದು ನೀವೇನಾದರೂ ಪೊರಕೆಯನ್ನು ನೀಡಿದರೆ ನಿಮ್ಮ ಮನೆಯಲ್ಲಿರುವ ಲಕ್ಷ್ಮಿಯು ಹೊರಟುಹೋಗುತ್ತಾಳೆ ಎಂದು ಹೇಳಲಾಗುತ್ತದೆ ಅಷ್ಟೇ ಅಲ್ಲದೆ ನಿಮ್ಮ ಮನೆಯಲ್ಲಿರುವ ಸುಖ ಶಾಂತಿ ನೆಮ್ಮದಿ ಹಾಳಾಗಿ ಕಿರಿಕಿರಿ ಉಂಟಾಗುತ್ತದೆ. ಇನ್ನು ಮೂರನೆಯದಾಗಿ ಗಮನಿಸಬೇಕಾದ ಗಂಭೀರವಾದ ಅಂಶವೆಂದರೆ. ಈ ತಪ್ಪುಗಳನ್ನು ಹಲವಾರು ಜನರು ಪ್ರತಿದಿನ ಮಾಡುತ್ತಲೇ ಇರುತ್ತಾರೆ ಎಂದು ಸಹ ಈ ತಪ್ಪುಗಳನ್ನು ಮಾಡಬಾರದು ಅದು ಯಾವುದೆಂದರೆ.
ಸಂಜೆಯ ಸಮಯದಲ್ಲಿ ಅಂದರೆ ಸೂರ್ಯ ಮುಳುಗಿದ ನಂತರ ಸಮಯದಲ್ಲಿ ಇಂದಿಗೂ ಸಹ ಮನೆಯಿಂದ ಹಾಲು ಮೊಸರು ತೆಂಗಿನಕಾಯಿ ಇತ್ಯಾದಿ ಪದಾರ್ಥಗಳನ್ನು ಕೊಡಬಾರದು ಎಂದು ಹೇಳಲಾಗುತ್ತದೆ. ಯಾಕೆಂದರೆ ವಸ್ತುಗಳಲ್ಲಿಯೂ ಲಕ್ಷ್ಮೀದೇವಿಯು ನೆಲೆಸಿರುತ್ತಾಳೆ ಎಂಬ ಮಾತಿದೆ. ಈಗಲೂ ಸಹ ತಿಳಿದವರು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸೂರ್ಯ ಮುಳುಗಿದ ನಂತರ ಯಾವ ವಸ್ತುಗಳನ್ನು ಮನೆಯಿಂದ ಹೊರಗೆ ಬೇರೆಯವರಿಗೆ ನೀಡುವುದಿಲ್ಲ ಒಂದು ವೇಳೆ ನೀಡಿದೆ ಆದರೆ ನಿಮಗೆ ದೋಷಗಳು ಉಂಟಾಗಿ ನೀವು ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಇದರಿಂದಾಗಿ ನೀವು ಮುಸ್ಸಂಜೆಯ ನಂತರ ಈ ವಸ್ತುಗಳನ್ನು ಮನೆಯಿಂದ ಹೊರಗೆ ತಂದು ಬೇರೆಯವರಿಗೆ ನೀಡಬೇಡಿ.
ಇನ್ನು ನಾಲ್ಕನೆಯ ಅಂಶವೆಂದರೆ ಹಣಕಾಸು. ಹಣಕಾಸನ್ನು ಲಕ್ಷ್ಮಿಯ ಸ್ವರೂಪವೆಂದು ಪೂಜಿಸಲಾಗುತ್ತದೆ. ಈ ಹಣವನ್ನು ಎಂದಿಗೂ ಸಹ ನಿಮ್ಮ ಮನೆಯಲ್ಲಿ ಕೂಡಿಟಂತಹ ಸ್ಥಳಗಳಿಂದ ಎಂಬದಿಗೂ ಸಹ ಮಂಗಳವಾರ ಮತ್ತು ಶುಕ್ರವಾರ ದಿನ ಹೊರಗೆ ತೆಗೆಯಬಾರದು ಅಷ್ಟೇ ಅಲ್ಲದೆ ಮುಸ್ಸಂಜೆಯ ವೇಳೆಯಲ್ಲೂ ಮನೆಯಲ್ಲಿರುವ ಕೂಡಿಟ್ಟ ಹಣವನ್ನು ತೆಗೆಯಬಾರದು ಒಂದು ವೇಳೆ ತೆಗೆದರುಸಹ ಅದನ್ನು ಹೊರಗಿನವರಿಗೆ ನೀಡಬಾರದು.
ಇದರ ಜೊತೆಗೆ ಇನ್ನೊಂದು ಮುಖ್ಯವಾದ ಮಾಹಿತಿಯೆಂದರೆ ಹಣವನ್ನು ಸಾಲದ ರೂಪದಲ್ಲಿ ಬೇರೆಯವರಿಗೆ ಏಕಾದಶಿಯ ದಿನ ನೆನಪಿರಲಿ ಏಕಾದಶಿಯ ದಿನ ಸಾಲವನ್ನು ನೀಡಬಾರದು ನೀವೇನಾದರೂ ಏಕಾದಶಿಯಲ್ಲಿ ಬೇರೆಯವರಿಗೆ ಹಣ ನೀಡಿದರೆ ಅದು ಎಂದಿಗೂ ಸಹ ನಿಮಗೆ ಹಿಂತಿರುಗಿ ಸಿಗುವುದಿಲ್ಲ ಅಷ್ಟೇ ಅಲ್ಲದೆ ಇದರಿಂದ ನಿಮಗೆ ಬಡತನವು ಸಹ ಬರಬಹುದು. ಇನ್ನು ಕಡೆಯದಾಗಿ ಎಲ್ಲರೂ ಮಾಡುವಂತಹ ಈ ತಪ್ಪನ್ನು ಮಾಡಬಾರದು ಅದು ಅಡಿಗೆಮನೆಯಲ್ಲಿ ಬಳಸುವಂತಹ ಪಾತ್ರೆಗಳು.
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಈ ತಪ್ಪುಗಳನ್ನು ನಡೆದಿರುತ್ತದೆ ಅಡುಗೆಗೆ ಬಳಸಿದಂತಹ ಪಾತ್ರೆಗಳನ್ನು ಬೇರೆಯವರಿಗೆ ನೀಡುತ್ತಾರೆ ಇದು ತಪ್ಪು ಹೀಗೆ ತಮ್ಮ ಅಡುಗೆಮನೆಯಿಂದ ಪಾತ್ರೆಗಳನ್ನು ಬೇರೆಯವರಿಗೆ ನೀಡಿದರೆ ಅಲ್ಲಿ ಲಕ್ಷ್ಮಿ ಕೃಪೆಯು ಕಡಿಮೆಯಾಗುತ್ತದೆ.
ಇನ್ನು ಉಪ್ಪು ಮೊಸರು ಹಾಗೂ ಚಾಕು ಕೂಡ ಯಾರಿಗೂ ನೀಡಬಾರದು ಎನ್ನುತ್ತದೆ ನಮ್ಮ ಸಂಪ್ರದಾಯಗಳು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.