ಸಾಕು ಗುರು ಈ ಮಜಾಟಾಕೀಸ್ ಜೀವನ, ಎಲ್ಲದಕ್ಕೂ ಸ್ಪಷ್ಟತೆ ಕೊಟ್ಟ ಸೃಜನ್ ಲೋಕೇಶ್

 | 
ರಾ
ಸೃಜನ್ ಲೋಕೇಶ್ ಅಭಿಮಾನಿಗಳಿಗೆ ಮಜಾ ಟಾಕೀಸ್ ಮುಗಿದಿದ್ದು ಬೇಸರ ಮೂಡಿಸಿತ್ತು. ಮಜಾ ಟಾಕೀಸ್‌ ಮುಕ್ತಾಯದ ಬಗ್ಗೆ ಸೃಜನ್ ಲೋಕೇಶ್‌ ಅವರು ಕಲರ್ಸ್ ಕನ್ನಡ ಪೇಜ್‌ನಲ್ಲಿ ಲೈವ್ಗೆ ಬಂದು ಬೇಸರ ಕೂಡ ಹೊರ ಹಾಕಿದ್ದರು. ಅದರ ಜೊತೆಗೆ ಗುಡ್ ನ್ಯೂಸ್ ಕೂಡ ಕೊಟ್ಟಿದ್ದಾರೆ. ಅದೇನಪ್ಪ ಅಂದರೆ ಅವರ ಜಿಎಸ್‌ಟಿ ಸಿನಿಮಾ ತೆರೆಗೆ ಬರ್ತಿದೆ.
ಹೌದು ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದ ಬಳಿಕ ಕಲರ್ಸ್ ಕನ್ನಡದಲ್ಲಿ ವೀಕೆಂಡ್​ನಲ್ಲಿ ಎರಡು ಹೊಸ ಶೋ ಆರಂಭವಾಯಿತು. ಒಂದು ಬಾಯ್ಸ್ vs ಗರ್ಲ್ಸ್ ಮತ್ತೊಂದು ಸೃಜನ್ ಲೋಕೇಶ್ ನೇತೃತ್ವದ ಮಜಾ ಟಾಕೀಸ್ ಬಾಯ್ಸ್ vs ಗರ್ಲ್ಸ್ ಶೋಗೆ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕಿರಲಿಲ್ಲ, ಟಿಆರ್​ಪಿ ಕೂಡ ಬರುತ್ತಿರಲಿಲ್ಲ. ಹೀಗಾಗಿ ಇತ್ತೀಚೆಗಷ್ಟೆ ಈ ಶೋನ ಮುಗಿಸಲಾಯಿತು. ಬಳಿಕ ಕಳೆದ ವಾರ ದಿಢೀರ್ ಆಗಿ ಮಜಾ ಟಾಕೀಸ್ ಕೂಡ ಕೊನೆಗೊಂಡಿದೆ. ಯಾವುದೇ ಸೂಚನೆ ನೀಡದೆ ಮಜಾ ಟಾಕೀಸ್ ಫಿನಾಲೆ ವೀಕ್ ಎಂಬ ಪ್ರೊಮೋ ಹಂಚಿಕೊಂಡು ಕಲರ್ಸ್ ಕನ್ನಡ ಮಜಾ ಟಾಕೀಸನ್ ಅನ್ನು ಮುಗಿಸಿದೆ.
ಕೇವಲ 32 ಎಪಿಸೋಡ್​ಗೆ ಮಜಾ ಟಾಕೀಸ್ ಎಂಡ್ ಆಗಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತು. ವಿಶೇಷ ಈ ಬಾರಿಯ ಮಜಾ ಟಾಕೀಸ್ ಬರೀ ಹೊಸಬರಿಂದಲೇ ಕೂಡಿತ್ತು. ಕುರಿ ಪ್ರತಾಪ್ ಮತ್ತು ಸೃಜನ್ ಲೊಕೇಶ್ ಬಿಟ್ಟರೆ ಮತ್ಯಾರು ಹಳಬರು ಇರಲಿಲ್ಲ. ಮುತ್ತುಮಣಿ ಕ್ಯಾರೆಕ್ಟನ್ ಮಾಡುತ್ತಿದ್ದ ತರಂಗ ವಿಶ್ವ ಕೂಡ ಅರ್ಧಕ್ಕೆ ಶೋನಿಂದ ಹೊರಬಂದಿದ್ದರು.
ಉಳಿದಂತೆ ತುಕಾಲಿ ಸಂತೋಷ್, ಬಿಗ್ ಬಾಸ್ ಪ್ರಿಯಾಂಕಾ, ವಿನೋದ್ ಗೊಬ್ಬರಗಾಲ ಸೇರಿದಂತೆ ಹೊಸಬರೇ ಮಜಾ ಮನೇಲಿದ್ದರು. ಅಲ್ಲದೆ ಇಂದ್ರಜಿತ್ ಲಂಕೇಶ್ ಇಜಿಲ-ಸೃಜನ್ ಕಾಂಬಿನೇಷನ್ ಕೂಡ ಇರಲಿಲ್ಲ. ಇವರ ಜಾಗಕ್ಕೆ ಯೋಗರಾಜ್ ಭಟ್ ಬಂದಿದ್ದರು.
ಮಜಾ ಟಾಕೀಸ್‌ ಮುಕ್ತಾಯದ ಬಗ್ಗೆ ಸೃಜನ್ ಲೋಕೇಶ್‌ ಅವರು ಕಲರ್ಸ್ ಕನ್ನಡ ಪೇಜ್‌ನಲ್ಲಿ ಲೈವ್​ಗೆ ಬಂದು ಬೇಸರ ಕೂಡ ಹೊರ ಹಾಕಿದ್ದರು. ಅದರ ಜೊತೆಗೆ ಗುಡ್ ನ್ಯೂಸ್ ಕೂಡ ಕೊಟ್ಟಿದ್ದಾರೆ. ಅದೇನಪ್ಪ ಅಂದರೆ ಅವರ ಜಿಎಸ್‌ಟಿ ಸಿನಿಮಾ ತೆರೆಗೆ ಬರ್ತಿದೆ. ಪ್ರೀತಿಯ ಕನ್ನಡಿಗರಿಗೆ ನಾನು ತಲೆಬಾಗಿ ಧನ್ಯವಾದಗಳನ್ನು ಹೇಳುತ್ತೇನೆ. ನೀವಿಲ್ಲದೇ ನಾವು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಈ ಮಜಾ ಟಾಕೀಸ್ ಅನ್ನು ಮುಕ್ತಾಯ ಮಾಡುತ್ತಿದ್ದೇವೆ. 
ಮುಂದಿನ ದಿನಗಳಲ್ಲಿ ನಾವು ಬೇರೆ ಒಳ್ಳೊಳ್ಳೆಯ ಕಾರ್ಯಕ್ರಮಗಳೊಂದಿಗೆ ಬರುತ್ತಿದ್ದೇವೆ. ಇದರ ಜೊತೆಗೆ ನನ್ನ ಸಿನಿಮಾ ಜಿಎಸ್‌ಟಿ ಬರ್ತಿದೆ. ಘೋಸ್ಟ್ ಇನ್ ಟ್ರಬಲ್ ಅಂತ ಅದರ ಪೂರ್ತಿ ಹೆಸರು. ಕೆಲವೇ ವಾರಗಳಲ್ಲೇ ಅದನ್ನು ಥಿಯೇಟರ್‌ನಲ್ಲಿ ರಿಲೀಸ್ ಮಾಡ್ತಾ ಇದ್ದೇವೆ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.