ಸುಳ್ಳು ಸುದ್ದಿ ಹಬ್ಬಿಸಬೇಡಿ, ಕನ್ನಡಿಗರ ಮುಂದೆ ಮೊದಲ ಬಾರಿಗೆ ಕಣ್ಣೀರು ಹಾಕಿದ ವರುಣ್ ಆರಾಧ್ಯ
Sep 13, 2024, 20:02 IST
|
ವರುಣ್ ಆರಾಧ್ಯ ವಿರುದ್ಧ ಮಾಜಿ ಪ್ರೇಯಸಿ ವರ್ಷಾ ಕಾವೇರಿ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದು, ಎಫ್‌ಐಆರ್ ದಾಖಲಾಗಿದೆ ಎಂದು ಬುಧವಾರ ಮಾಧ್ಯಮಗಳಲ್ಲಿ ವರದಿಯಾಗಿತ್ತು. ವರುಣ್ ಖಾಸಗಿ ಫೋಟೊ, ವಿಡಿಯೋಗಳನ್ನು ಇಟ್ಟುಕೊಂಡು ನನಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ವರ್ಷಾ ಕಾವೇರಿ ದೂರು ಕೊಟ್ಟಿರುವುದಾಗಿ ಹೇಳಲಾಗಿತ್ತು.
ಆದರೆ ರಾತ್ರಿ ಇನ್‌ಸ್ಟಾಗ್ರಾಂನಲ್ಲಿ ಇದೆಲ್ಲಾ ಸುಳ್ಳು ಎಂದು ವರ್ಷಾ ಕಾವೇರಿ ಹೇಳಿಕೊಂಡಿದ್ದರು.ಇನ್‌ಸ್ಟಾಗ್ರಾಂ ಸ್ಟೋರಿ ಹಂಚಿಕೊಂಡಿದ್ದ ವರ್ಷಾ ಕಾವೇರಿ, ಮಾಧ್ಯಮಗಳಲ್ಲಿ ಬರುತ್ತಿರುವುದು ಸುಳ್ಳು ಸುದ್ದಿಯಾಗಿದೆ. ಇನ್‌ಸ್ಟಾಗ್ರಾಂ ಪ್ರೊಫೈಲ್ ಸಾಮಾಜಿಕ ಮಾಧ್ಯಮಗಳಿಂದ ರೀಲ್ಸ್‌ಗಳನ್ನು ತೆಗೆದುಹಾಕಿರುವುದಕ್ಕೆ ಹೀಗೆ ಹೇಳಲಾಗಿದೆ. ದಯವಿಟ್ಟು ಸುಳ್ಳು ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.
ಪ್ರಸಾರವಾಗುತ್ತಿರುವ ಸುದ್ದಿಗಳನ್ನು ಆಧರಿಸಿ ಕಾಮೆಂಟ್ ಮಾಡುತ್ತಿರುವ ಮತ್ತು ಪ್ರಶ್ನೆ ಮಾಡುತ್ತಿರುವವರು ಮೂರು ದಿನ ಕಾಯಿರಿ ಎಲ್ಲದಕ್ಕೂ ಸ್ಪಷ್ಟನೆ ಕೊಡುತ್ತೇನೆ ಎಂದು ಮತ್ತೊಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಮೂರು ದಿನಗಳಲ್ಲಿ ಎಲ್ಲಾ ಪ್ರಶ್ನೆಗಳಿಗೆ ತಾವೇ ಮಾಧ್ಯಮಗಳ ಬಂದು ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಉತ್ತರ ಕೊಡುವ ಸಾಧ್ಯತೆ ಇದೆ.
ವರುಣ್ ಆರಾಧ್ಯ ಬೃಂದಾವನ ಎನ್ನುವ ಧಾರವಾಹಿಯಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿದ್ದಾರೆ. ವರುಣ್ ಆರಾಧ್ಯ ಸೀರಿಯಲ್‌ನಲ್ಲಿ ನಟಿಸುವ ಮುನ್ನವೇ ವರ್ಷಾ ಜೋತಿ ಪ್ರೀತಿಯಲ್ಲಿದ್ದರು. ವರ್ಷಾ ಮತ್ತು ವರುಣ್ 4 ವರ್ಷದ ಹಿಂದೆ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದು ಬಳಿಕ ಈ ಜೋಡಿ ಪ್ರೀತಿಸಿದ್ದರು. ಆದರೆ ವರ್ಷಾ ಜೊತೆ ಪ್ರೀತಿಯಲ್ಲಿದ್ದಾಗಲೇ ವರುಣ್ ಆರಾಧ್ಯ ಬೇರೊಂದು ಹುಡುಗಿ ಜೊತೆ ಸಂಬಂಧ ಇಟ್ಟುಕೊಂಡಿದ್ದ ಎನ್ನುವ ಕಾರಣಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಬಳಿಕ ಈ ಜೋಡಿ ಬೇರೆ ಬೇರೆಯಾಗಿತ್ತು.
ಇದೀಗ ವರ್ಷಾ ಕಾವೇರಿ ಮಾಜಿ ಗೆಳೆಯನ ವಿರುದ್ಧ ದೂರು ನೀಡಿದ್ದಾರೆ, ತಮ್ಮ ಖಾಸಗಿ ಫೋಟೊ ವಿಡಿಯೋ ಇಟ್ಟುಕೊಂಡು ಬೆದರಿಕೆ ಹಾಕುತ್ತಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇದೀಗ ವರ್ಷಾ ಕಾವೇರಿ ಇದಕ್ಕೆ ಸ್ಪಷ್ಟನೆ ನೀಡಿದ್ದು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸುಳ್ಳು ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.