ಡಾ| ರಾಜ್ ಕುಮಾರ್ ಮನೆಯಲ್ಲಿ ಮದುವೆ ಸಂಭ್ರಮ; ಸಿಹಿಸುದ್ದಿ ಕೊಟ್ಟ ಅಶ್ವಿನಿ ಪುನೀತ್ ರಾಜ್‍ಕುಮಾರ್

 | 
Ud

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಫೇವರಿಟ್ ಕಸಿನ್ ರಾಜೇಶ್ವರಿ. ಡಾ ರಾಜ್‌ಕುಮಾರ್ ಅವರ ತಂಗಿ ಮಗಳು ರಾಜೇಶ್ವರಿ. ಪುನೀತ್ ರಾಜ್‌ಕುಮಾರ್ ಅವರ ಸೋದರತ್ತೆ ಮಗಳಾದ ರಾಜೇಶ್ವರಿ ಇದೀಗ ಮಗನ ಮದುವೆ ನೆರವೇರಿಸಿದ ಖುಷಿಯಲ್ಲಿದ್ದಾರೆ.ರಾಜೇಶ್ವರಿ - ಸಂಪತ್ ಕುಮಾರ್ ದಂಪತಿಯ ಪುತ್ರ ಪ್ರಶಾಂತ್ ಅವರ ಮದುವೆ ಅದ್ಧೂರಿಯಾಗಿ ಜರುಗಿದೆ. 

ಮಾಳವಿಕಾ ಎಂಬುವರ ಜೊತೆಗೆ ಪ್ರಶಾಂತ್ ವಿವಾಹ ಭರ್ಜರಿಯಾಗಿ ನಡೆದಿದೆ. ಈ ಮದುವೆಗೆ ಇಡೀ ಅಣ್ಣಾವ್ರ ಕುಟುಂಬ ಸಾಕ್ಷಿಯಾಗಿತ್ತು. ರಾಜೇಶ್ವರಿ ಅವರ ಮಗನ ಮದುವೆಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ಮಕ್ಕಳಾದ ದ್ರಿತಿ ಹಾಗೂ ವಂದಿತಾ ಮಿಂಚಿದರು. ನೋವನ್ನು ಮರೆತು ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ  ಸಂತೋಷದಿಂದ ಭಾಗಿ ಆಗಿದ್ದಾರೆ.

ಅಷ್ಟಕ್ಕೂ ಪುನೀತ್ ರಾಜ್‌ಕುಮಾರ್ ಅವರ ಅಚ್ಚುಮೆಚ್ಚಿನ ಕಸಿನ್ ರಾಜೇಶ್ವರಿ. ಹೌದು ರಾಜ್ ಕುಮಾರ್ ತಂಗಿಯ ಮಗಳು. ದೊಡ್ಮನೆಯದೆ ಕುಡಿ. ಹಾಗಾಗಿ ತಮ್ಮ ಪುತ್ರ ಪ್ರಶಾಂತ್ ಮದುವೆಯನ್ನ ರಾಜೇಶ್ವರಿ - ಸಂಪತ್ ಕುಮಾರ್ ದಂಪತಿ ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಸಾವಿರಾರು ಜನ ಈ ಮದುವೆಯಲ್ಲಿ ಪಾಲ್ಗೊಂಡಿದ್ದರು.

ಪ್ರಶಾಂತ್ ಅರಿಶಿನ ಶಾಸ್ತ್ರಕ್ಕೂ ಕೂಡ ಇಡಿ ದೊಡ್ಮನೆಯ ಕುಟುಂಬವೇ ಬಂದಿತ್ತು. ಅದ್ದುರಿಯಾಗಿ ಪ್ರಶಾಂತ್ ಮಾಳವಿಕಾ ಅವರನ್ನು ಮದುವೆಯಾಗಿ ದೊಡ್ಮನೆ ಹುಡುಗರೆಂದರೆ ಹೀಗೆ ಇರಬೇಕು ಎನಿಸಿಕೊಂಡಿದ್ದಾರೆ. ಇದೀಗ ಅರಿಶಿನ ಶಾಸ್ತ್ರಕ್ಕಾಗಿ ಸೇರಿದ ಇಡೀ ಫ್ಯಾಮಿಲಿಯ ಫೋಟೋಗಳನ್ನ ದ್ರಿತಿ, ವಂದಿತಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.