ತನಿಖೆ ವೇಳೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಹಾಲಶ್ರೀ, ಕನಾ೯ಟಕ ಗಡಗಡ

 | 
ರಪ

 ದಿನಕ್ಕೊಂದು ತಿರುವು ಪಡೆಯುತ್ತಿದೆ ಗೋವಿಂದ್ ಪೂಜಾರಿ ವಂಚನೆ ಪ್ರಕರಣ. ಹೌದು ಚೈತ್ರಾ & ಗ್ಯಾಂಗ್​ನಿಂದ ₹5 ಕೋಟಿ ಡೀಲ್ ಕೇಸ್ ತನಿಖೆ ಚುರುಕುಗೊಂಡಿದ್ದು ಹಾಲಶ್ರೀ ಬಂಧನ ಪ್ರಕರಣದಲ್ಲಿ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಹಿರೇಹಡಗಲಿ ಹಾಲಶ್ರೀ ಮಠದಲ್ಲೇ ಕಂತೆ, ಕಂತೆ ಹಣ ಪತ್ತೆಯಾಗಿದೆ. ಹಾಲಶ್ರೀ ವಾಸ ಮಾಡ್ತಿದ್ದ ಸ್ಥಳದಲ್ಲೇ 65 ಲಕ್ಷ ರೂಪಾಯಿಯ ಬ್ಯಾಗ್ ಪತ್ತೆಯಾಗಿದೆ.

ಕೇಸ್ ಬೆಳಕಿಗೆ ಬರ್ತಿದ್ದಂತೆ ಹಣ ಸಮೇತ ಸ್ವಾಮೀಜಿ ಮೈಸೂರಿಗೆ ಹೋಗಿದ್ದರು. ಇನ್ನು ಮೈಸೂರಿನತ್ತ ಹೋಗುವಾಗ ಸ್ವಾಮೀಜಿ ವಕೀಲರೊಬ್ಬರ ಮನೆಯಲ್ಲಿಡಲು ಪ್ರಯತ್ನಿಸಿದ್ದರು. ವಕೀಲರಿಗೂ ಗೊತ್ತಾಗದ ಹಾಗೆ ಚಾಲಕನ ಮೂಲಕ ವಕೀಲರ ಕಚೇರಿಗೆ ಹಣದ ಬ್ಯಾಕ್ ತಲುಪಿಸಿ ಸ್ವಾಮೀಜಿ ಕಳ್ಳಾಟ ಆಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಆದರೆ ಒಬ್ಬ ವ್ಯಕ್ತಿ ಬಳಿ ಸ್ವಾಮೀಜಿ ಹಣ ಕೊಟ್ಟು ಹೋಗಿದ್ದರಂತೆ. ಇನ್ನು ₹65 ಲಕ್ಷ ಹಣ ಪಡೆದ ವ್ಯಕ್ತಿ ಖಾಸಗಿ ಸ್ಥಳದಿಂದಲೇ ವಿಡಿಯೋ ಮಾಡಿದ್ದಾರೆ. ಇದರೊಂದಿಗೆ ಉದ್ಯಮದಿಂದ ಪಡೆದಿದ್ದ ಹಣವನ್ನು ವಕೀಲರೊಬ್ಬರ ಮನೆಯಲ್ಲಿ ಇಡಲು ಪ್ರಯತ್ನ ಮಾಡಿರುವುದು ಬೆಳಕಿಗೆ ಬಂದಿದೆ.

ಪೊಲೀಸರು ತಮ್ಮನ್ನು ಬಂಧಿಸಿದರೆ ಹಣ ಸೇಫ್ ಆಗಿರಲಿ ಎಂಬ ಕಾರಣಕ್ಕೆ ವಕೀಲರ ಆಫೀಸಿನಲ್ಲಿ ಹಣ ಇಡಲು ಪ್ರಯತ್ನ ಮಾಡಿದ್ದರು ಎನ್ನಲಾಗಿದೆ. ಈ ಬಗ್ಗೆ ಕುದ್ದು ವಕೀಲರಿಂದಲೇ ಸಿಸಿಬಿಗೆ ಪತ್ರ ಬರೆದು ಸ್ಪೋಟಕ ಮಾಹಿತಿ ರವಾನೆ ಮಾಡಿದ್ದಾರೆ.

ಮೈಸೂರಿನ ವಕೀಲ ಪ್ರಣವ್ ಅವರು ಸ್ಫೋಟಕ ಮಾಹಿತಿ ಹೊರ ಹಾಕಿದ್ದು, ಅಭಿನವ ಹಾಲಾಶ್ರೀ ನನಗೆ ಮತ್ತು ನಮ್ಮ ಕುಟುಂಬಕ್ಕೆ ಪರಿಚಯ ಇದ್ದರು. ಆಗಾಗ ನಮ್ಮ ಮನೆಗೂ ಬಂದು ಹೋಗುತ್ತಿದ್ದರು. ಒಮ್ಮೆ ಅವರ ಚಾಲಕ ರಾಜು ಎಂಬತ ಒಂದು ಲಗೇಜ್ ಬ್ಯಾಗನ್ನು ನಮ್ಮ ಮನೆಯಲ್ಲಿ ಇಟ್ಟು ಹೋಗಿದ್ದ. ಇದಾದ ಕೆಲವು ದಿನಗಳ ನಂತರ ಆತ ಕರೆ ಮಾಡಿ ಅಣ್ಣ ಆ ಬ್ಯಾಗ್ ನಲ್ಲಿ ಆ ಹಣ ಇದೆ. ಆ ಹಣವನ್ನು ವಕೀಲರಿಗೆ ಕೊಡಲು ಹಾಗೂ ಸ್ವಾಮೀಜಿ ಯಾರಿಗೆ ಹೇಳಿದ್ದಾರೋ ಅವರಿಗೆ ತಲುಪಿಸಲು ತಂದಿದ್ದೆ.

ಆದರೆ ಅವರು ಸಿಗದ ಕಾರಣ ಆ ಹಣವನ್ನು ಸ್ವಾಮೀಜಿ ಮಠಕ್ಕೆ ತಲುಪಿಸಲು ಹೇಳಿದ್ದಾರೆ. ದಯಮಾಡಿ ಆ ಬ್ಯಾಗನ್ನು ಹಿರೇಹಡಗಲಿ ಮಠದ ಪೂಜಾರಿ ಹಾಲಸ್ವಾಮಿ ಅವರಿಗೆ ಕಳಿಸಿಕೊಡಿ ಎಂದಿದ್ದರಂತೆ.ಒಟ್ಟಿನಲ್ಲಿ ಬಗೆದಷ್ಟು ಈ ಪ್ರಕರಣ ಬೆಚ್ಚಿಬೀಳುವಷ್ಟು ಬಿಚ್ಚಿಕೊಳ್ಳುತ್ತಿದೆ.

ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.