ದ ರ್ಶನ್ ಕೋಪಕ್ಕೆ ಆಪ್ತ ಸ್ನೇಹಿತರು ಹಾಗೂ ಸ್ವಂತ ತಾಯಿ ಕೂಡ ದೂರವಾಗಿದ್ದಾರೆ;

 | 
Ue

ಕನ್ನಡ ಚಿತ್ರರಂಗದಲ್ಲೇ ಸಂಚಲನ ಮೂಡಿಸಿರುವ ಪ್ರಕರಣ ಎಂದರೆ ಅದು ಚಿತ್ರದುರ್ಗದ ಮೂಲದ ರೇಣುಕ ಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಹೆಸರು ಕೇಳಿ ಬಂದಿದ್ದು.ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಪವಿತ್ರಾ ಗೌಡ ಜೊತೆ ತನಿಖೆ ಎದುರಿಸುತ್ತಿದ್ದಾರೆ. ಇತ್ತ ಮೈಸೂರಲ್ಲಿ ಆಡಿ ಬೆಳೆದ ನಟ ದರ್ಶನ್ ಮನೆಯಲ್ಲಿ ಮೌನ ಆವರಿಸಿದೆ.

ತಾಯಿ ಮೀನಾ ತೂಗುದೀಪ ಮೈಸೂರಿನ  ಮನೆಯಲ್ಲೇ ಇದ್ದಾರೆ. ಈ ಕುರಿತು ಮಾಧ್ಯಮಗಳ ಜೊತೆ ಮಾತಾಡಲು ನಿರಾಕರಿಸಿದ್ದಾರೆ. ಮೈಸೂರಿನ ಸಿದ್ದಾರ್ಥ ನಗರ ತೂಗುದೀಪ ಶ್ರೀನಿವಾಸ್ ಅವರ ಮನೆಯಿದೆ.30 ವರ್ಷಗಳ ಹಿಂದೆ ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಸಹಾಯ ಮಾಡಿದ ಪರಿಣಾಮ ನಟ ತೂಗುದೀಪ ಶ್ರೀನಿವಾಸ್ ಮನೆ ನಿರ್ಮಿಸಿದ್ರು.

ಇದಕ್ಕೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಮನೆಗೆ ಮುಪ ನಿಲಯ ಅಂತ ಹೆಸರಿಟ್ಟಿದ್ರು. ಸದ್ಯ ದರ್ಶನ್ ರಿಂದ ಅಂತರ ಕಾಯ್ದುಕೊಂಡಿರುವ ತಾಯಿ ಮೀನಾ ತೂಗುದೀಪ ಇದೇ ಮನೆಯಲ್ಲೇ ವಾಸವಾಗಿದ್ದಾರೆ.ಪವಿತ್ರಾಗೆ ರೇಣುಕಾ ಸ್ವಾಮಿ ಅಸಭ್ಯವಾಗಿ ಮೆಸೇಜ್ ಮಾಡಿದ್ದ ಎನ್ನುವ ವಿಚಾರಕ್ಕೆ ದರ್ಶನ್ ಹಾಗೂ ಗ್ಯಾಂಗ್ ರೇಣುಕಾ ಸ್ವಾಮಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ ಎನ್ನುವ ಸುದ್ದಿ ತಿಳಿದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಶಾಕ್ ಆಗಿದ್ದಾರೆ. ಮನೆಯಲ್ಲಿ ಆಪ್ತರ ಜೊತೆ ತಮ್ಮ ದುಃಖ ತೋಡಿಕೊಂಡಿದ್ದಾರಂತೆ.

ಅತ್ತೆಗೆ ಫೋನ್ ಅಲ್ಲಿ ಮಾತನಾಡಿದ ವಿಜಯಲಕ್ಷ್ಮಿ ಅವರು ಅಳುತ್ತಾ ಕುಳಿತಿರುವ ವಿಜಯಲಕ್ಷ್ಮಿ, ಇನ್ಮುಂದೆ ನಾನು ನನ್ನ ಮಗನಿಗಾಗಿ ಮಾತ್ರ ಬದುಕುತ್ತೇನೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರಂತೆ. ಈ ಎಲ್ಲಾ ವಿಚಾರಗಳು ಮಗನಿಗೆ ತಿಳಿಯಬಾರದು ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ ಎಂದು ವರದಿ ಆಗಿದೆ. 

ಪತಿ ದರ್ಶನ್ ಮಾಡಿದ ಕೆಲಸದಿಂದ ಕುಟುಂಬವೇ ತಲೆ ತಗ್ಗಿಸುವಂತೆ ಆಗಿದೆ ಎಂದು ವಿಜಯಲಕ್ಷ್ಮಿ ಕಣ್ಣೀರು ಹಾಕುತ್ತಿದ್ದಾರಂತೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.