FactCehck:ವಸಿಷ್ಠ ಸಿಂಹ ವಿರುದ್ಧ ದೂರು ದಾಖಲು, ರೊಚ್ಚಿಗೆದ್ದ ಪತ್ನಿ‌ ಹರಿಪ್ರಿಯಾ

 | 
ಗಗಗ
ಸ್ಯಾಂಡಲ್‌ವುಡ್‌ಗೆ ಖಳನಟನಾಗಿ ಎಂಟ್ರಿ ಕೊಟ್ಟು ನಾಯಕ ನಟನಾಗಿ ಹೊರಹೊಮ್ಮಿರುವ ವಸಿಷ್ಠ ಸಿಂಹ ಅವರಿಗೆ ದೊಡ್ಡ ಶಾಕ್‌ ಎದುರಾಗಿದೆ. ಕನ್ನಡದಲ್ಲಿ ಮಿಂಚಿರುವ ಅವರು ಕೆಜಿಎಫ್‌ ಸಿನಿಮಾ ಮೂಲಕ ಪ್ಯಾನ್‌ ಇಂಡಿಯಾ ನಟರಾಗಿ ಗುರುತಿಸಿಕೊಂಡಿದ್ದರು. ಹೀಗಾಗಿ ಕನ್ನಡ ಮಾತ್ರವಲ್ಲದೆ ಟಾಲಿವುಡ್‌ನಲ್ಲಿ ವಸಿಷ್ಠ ಮಿಂಚುತ್ತಿದ್ದಾರೆ. ಓದೆಲ ರೈಲ್ವೆ ಸ್ಟೇಷನ್‌ ಸಿನಿಮಾ ತೆಲುಗಿನಲ್ಲಿ ತೆರೆ ಕಂಡು ಹಿಟ್‌ ಕಂಡಿತ್ತು. ಇದರ ಮುಂದುವರಿದ ಭಾಗವಾಗಿ ಓದೆಲ-2 ಸಿನಿಮಾ ಕೂಡ ಇತ್ತೀಚೆಗೆ ರಿಲೀಸ್‌ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೇ ಹೊತ್ತಲ್ಲಿ ವಸಿಷ್ಠ ಅವರಿಗೆ ಪೊಲೀಸರು ದೊಡ್ಡ ಶಾಕ್‌ ನೀಡಿದ್ದಾರೆ.
ಅಷ್ಟಕ್ಕೂ ಓದೆಲ-2 ಸಿನಿಮಾ ವಿರುದ್ಧ ತೆಲಂಗಾಣ ಹಿಂದುಳಿದ ವರ್ಗಗಳ ಆಯೋಗವು ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಈ ಸಿನಿಮಾದಲ್ಲಿ ಜಾತಿಯೊಂದರ ಬಗ್ಗೆ ಕೆಟ್ಟದಾಗಿ ತೋರಿಸಲಾಗಿದ್ದು, ಈ ದೃಶ್ಯಗಳನ್ನು ಕೂಡಲೇ ತೆಗೆದುಹಾಕುವಂತೆ ಒತ್ತಾಯಿಸಿದೆ. ಪಿಚಿಗುಂಟ್ಲಾ ಜಾತಿಯ ಬಗ್ಗೆ ಅವಹೇಳನಕಾರಿ ಉಲ್ಲೇಖದ ಕುರಿತು ದೂರು ಬಂದ ನಂತರ, ಓದೆಲಾ-2 ಚಿತ್ರದಲ್ಲಿನ ವಿವಾದಾತ್ಮಕ ದೃಶ್ಯದ ಕುರಿತು ತೆಲಂಗಾಣ ಹಿಂದುಳಿದ ವರ್ಗಗಳ ಆಯೋಗ ಮಧ್ಯಪ್ರವೇಶಿಸಿದೆ.
ಮಲ್ಲೇಶ್ ಎಂಬುವವರು ತೆಲಂಗಾಣದ ಅತ್ತಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಆಯೋಗವು ಸೈಬರಾಬಾದ್ ಪೊಲೀಸ್ ಆಯುಕ್ತರು, ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧಿಕಾರಿ ಮತ್ತು ತೆಲಂಗಾಣ ಡಿಜಿಪಿಗೆ ಪತ್ರ ಬರೆದು ಆಕ್ಷೇಪಾರ್ಹ ಸಂಭಾಷಣೆಯನ್ನು ತೆಗೆದುಹಾಕುವಂತೆ ಹಾಗೂ ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದೆ. ಸೆನ್ಸಾರ್ ಮಂಡಳಿ ಅಧಿಕಾರಿ ರಾಹುಲ್ ಗೌಲಿಕರ್ ಅವರು ಈ ದೃಶ್ಯಗಳನ್ನು ತೆಗೆದು ಹಾಕುವುದಾಗಿ ಭರವಸೆ ನೀಡಿದ್ದಾರೆ. ಆದರೆ ಈ ಸಮಸ್ಯೆಯನ್ನು ಬಗೆಹರಿಸದೆ ಇರುವುದಕ್ಕೆ ಆಯೋಗವು ಸೆನ್ಸಾರ್ ಮಂಡಳಿಯನ್ನು ಟೀಕಿಸಿದೆ. ಅಶೋಕ್ ತೇಜ ನಿರ್ದೇಶನದ ಓದೆಲಾ-2 ಚಿತ್ರವು ಮಿಶ್ರ ವಿಮರ್ಶೆಗಳನ್ನು ಪಡೆದಿದ್ದು, ಜಾತಿ ಸಂಬಂಧಿತ ವಿವಾದಕ್ಕೆ ಸಿಲುಕಿದೆ.
ಈ ಸಂಬಂಧ ಹೈದರಾಬಾದ್ ಮತ್ತು ಅತ್ತಾಪುರ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ದೂರು ದಾಖಲಾಗಿದ್ದರೂ, ಇದುವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ. ಬಿಸಿ ಆಯೋಗದ ಅಧ್ಯಕ್ಷ ನಿರಂಜನ್ ಅವರ ಗಮನಕ್ಕೂ ಈ ದೂರನ್ನು ತರಲಾಗದೆ. ನಿರಂಜನ್ ಅವರು ಶುಕ್ರವಾರ ಸೈಬರಾಬಾದ್ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು, ತಕ್ಷಣ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಸಿನಿಮಾದಲ್ಲಿರುವ ಆಕ್ಷೇಪಾರ್ಹ ಪದಗಳನ್ನು ಬಳಸಿದ ಚಿತ್ರದ ನಿರ್ಮಾಪಕ, ನಿರ್ದೇಶಕ, ಬರಹಗಾರ ಮತ್ತು ನಟರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.