FactCheck:ಶಿವರಾತ್ರಿಯಂದು ಕಣ್ಣು ತೆರೆದ ಆದಿಯೋಗಿ, ಕೋಟ್ಯಾಂತರ ಭಕ್ತರಿಗೆ ಮಹಾಶಿವನ ದರ್ಶನ
Feb 27, 2025, 17:35 IST
|

ನಿಮಗೆಂದೇ ಪ್ರಮುಖ ಸುದ್ದಿಯೊಂದನ್ನು ಸದ್ಗುರು ಇಶಾ ಫೌಂಡೇಶನ್ ಹಂಚಿಕೊಂಡಿದೆ. ಹೌದು ಶಿವರಾತ್ರಿಗೆ ನೀವಿಲ್ಲಿ ದರ್ಶನ ಮಾಡಬಹುದು. ಕಣ್ ಬಿಟ್ಟಂತೆ ಕಾಣುವ ಶಿವನ ದರ್ಶನ ಮಾಡಬಹುದು ಬೆಂಗಳೂರಿನ ಪಕ್ಕದಲ್ಲೇ ಇರುವ ಚಿಕ್ಕಬಳ್ಳಾಪುರದಲ್ಲಿ ಹೊಸ ಆದಿಯೋಗಿ ಪ್ರತಿಮೆಯನ್ನು ಇಶಾ ಫೌಂಡೇಶನ್ ಸ್ಥಾಪಿಸಿದೆ.
ಚಿಕ್ಕಬಳ್ಳಾಪುರದ ಕೌರನಹಳ್ಳಿ ಲಿಂಗಶೆಟ್ಟಿಪುರ ಗ್ರಾಮಗಳ ಜಾಲಾರಿ ನರಸಿಂಹ ಸ್ವಾಮಿ ದೇವಾಲಯದ ನರಸಿಂಗದೇವರಬೆಟ್ಟದ ತಪ್ಪಲಿನಲ್ಲೇ ಇದೆ ಈ ಆದಿಯೋಗಿ ಮೂರ್ತಿ. ಈ ಸ್ಥಳಕ್ಕೆ ಸದ್ಗುರು ಸನ್ನಿಧಿ ಎಂದೇ ಹೆಸರಿಸಲಾಗಿದೆ. ಈ ಆದಿಯೋಗಿ ಮೂರ್ತಿ ಕೊಯಂಬತ್ತೂರಿನಲ್ಲಿರುವ ಆದಿಯೋಗಿ ಮೂರ್ತಿಯಷ್ಟೇ, ಅಂದರೆ ಬರೋಬ್ಬರಿ 112 ಅಡಿ ಎತ್ತರವಿದೆ. ಕೊಯಮತ್ತೂರಿನ ಆದಿಯೋಗಿ ಮೂರ್ತಿ ಸನ್ನಿಧಿಯಲ್ಲಿ ಶಿವರಾತ್ರಿ ಆಚರಣೆ ವಿಜೃಂಭಣೆಯಿಂದ ನಡೆದಿದೆ.
ಚಿಕ್ಕಬಳ್ಳಾಪುರದ ಆದಿಯೋಗಿ ಮೂರ್ತಿ ಆವರಣದಲ್ಲೇ ನವಗ್ರಹ ದೇಗುಲವಿದೆ. ಇಲ್ಲೇ ವಿಶೇಷ ಲಿಂಗ ಭೈರವಿ ದೇವಿಯ ದರ್ಶನ ಮಾಡಬಹುದಾಗಿದೆ. ಅಲ್ಲದೇ ಒಂದು ಪುಟ್ಟ ಜಲಪಾತವೂ ಸಹ ನಿಮ್ಮ ದಾರಿಯಲ್ಲಿ ಸಿಗಲಿದೆ!.112 ಅಡಿ ಎತ್ತರದ ಆದಿಯೋಗಿಯ ದರ್ಶನ ಪಡೆಯಲು ನೀವು ಬೆಂಗಳೂರಿನಿಂದ ಕೇವಲ 65 ಕಿಲೋ ಮೀಟರ್ ಪ್ರಯಾಣಿಸಿದರೆ ಸಾಕು! ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಸ್ಟ್ 45 ಕಿಲೋ ಮೀಟರ್, ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ 63 ಕಿಲೋ ಮೀಟರ್ ಪಯಣಿಸಿದರೆ ನೀವು ಆದಿಯೋಗಿ ದರ್ಶನ ಮಾಡಬಹುದು. ಸದ್ಯ ಈ ಆದಿಯೋಗಿ ಮೂರ್ತಿಯ ಹತ್ತಿರ ಇಶಾ ಫೌಂಡೇಶನ್ನ ಚಿಕ್ಕ ಕ್ಯಾಂಟೀನ್ ಇದೆ ಬಿಟ್ಟರೆ ಬೇರೆ ಯಾವ ಸೌಲಭ್ಯವೂ ಇಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025