FactCheck:ಅಂಬಾನಿ ಪತ್ನಿಗೆ ಮೋದಿ ಬೇಕಾಂತೆ, ದಿನಲೂ‌ ಮೋದಿದ್ದೆ ಚಿಂತೆ

 | 
Hs
ರಿಲಯನ್ಸ್ ಫೌಂಡೇಷನ್ ಸ್ಥಾಪಕಿ ಹಾಗೂ ಅಧ್ಯಕ್ಷೆಯೂ ಆದ ನೀತಾ ಅಂಬಾನಿ ಅವರು, ಆಗಾಗ್ಗೆ ತಮ್ಮ ಭಾಷಣಗಳಿಂದ ಹೈಲೈಟ್​ ಆಗುತ್ತಲೇ ಇರುತ್ತಾರೆ. ನಿನ್ನೆಯಷ್ಟೇ ನೀತಾ ಅವರಿಗೆ,  ಮ್ಯಾಸಚೂಸೆಟ್ಸ್ ಗವರ್ನರ್ ಮೌರಾ ಹೀಲಿ ಅವರು ವಿಶಿಷ್ಟ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.  ಇಂಡಿಯಾ ಬಿಸಿನೆಸ್ ಲೀಡರ್ ಅವಾರ್ಡ್‌ನ 20 ನೇ ಆವೃತ್ತಿಯಲ್ಲಿ ಪ್ರತಿಷ್ಠಿತ ಬ್ರಾಂಡ್ ಇಂಡಿಯಾಕ್ಕೆ ಅತ್ಯುತ್ತಮ ಕೊಡುಗೆ ಪ್ರಶಸ್ತಿಯನ್ನು ನೀತಾ ಅಂಬಾನಿಯವರಿಗೆ ನೀಡಲಾಗಿದೆ. 
ಶಿಕ್ಷಣ, ಆರೋಗ್ಯ, ಕ್ರೀಡೆ, ಕಲೆ, ಸಂಸ್ಕೃತಿ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರಗಳಲ್ಲಿ ನೀತಾ ಅಂಬಾನಿ ಅವರ ಕಾರ್ಯ ಹಾಗೂ ಕೊಡುಗೆಗಳನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಯ ಗೌರವವನ್ನು ನೀಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ,  ಗವರ್ನರ್ ಮೌರಾ ಹೀಲಿ, ಅವರು, ನೀತಾ ಅಂಬಾನಿ ಅವರು ದಾರ್ಶನಿಕ ನಾಯಕಿ, ಸಹಾನುಭೂತಿಯ ಲೋಕೋಪಕಾರಿ ಮತ್ತು ನಿಜವಾದ ಜಾಗತಿಕ ಬದಲಾವಣೆಯ ಹರಿಕಾರಿಣಿ ಎಂದು ಬಣ್ಣಿಸಿದ್ದರು.  
https://www.youtube.com/live/yNd7KdhVLfw?si=Ve3fTY2a37rCWDah
ಇದರ ನಡುವೆಯೇ ನೀತಾ ಅಂಬಾನಿಯವರ ಸಂದರ್ಶನದ ವಿಡಿಯೋ ಒಂದು ವೈರಲ್​ ಆಗುತ್ತಿದೆ. ಅದರಲ್ಲಿ ಅವರಿಗೆ ಪ್ರಧಾನಿ ನರೇಂದ್ರ  ಮೋದಿ ಮತ್ತು ಮುಕೇಶ್​ ಅಂಬಾನಿ ಇಬ್ಬರ ನಡುವೆ ಒಬ್ಬರ ಹೆಸರನ್ನು ತೆಗೆದುಕೊಳ್ಳುವುದಾದರೆ ಯಾರ ಹೆಸರನ್ನು ತೆಗೆದುಕೊಳ್ಳುವಿರಿ ಎಂದು ಪ್ರಶ್ನಿಸಲಾಗಿದೆ. ಈ ಪ್ರಶ್ನೆಗೆ ಹಲವಾರು ಮಂದಿ ಟೀಕೆ ವ್ಯಕ್ತಪಡಿಸಿದ್ದಾರೆ. ಇಬ್ಬರಲ್ಲಿ ಒಬ್ಬರ ಆಯ್ಕೆ ಎಂದರೆ ಏನರ್ಥ? ಎಂಥ ಅಸಂಬಂಧ ಪ್ರಶ್ನೆ, ಪ್ರಶ್ನೆ ಕೇಳುವವರಿಗೆ ತಲೆ ಇಲ್ವಾ ಎಂದೆಲ್ಲಾ ಕಮೆಂಟ್​ಗಳ ಸುರಿಮಳೆಯಾಗಿದೆ. 
ಪ್ರಶ್ನೆ ಏನೇ ಇರಲಿ, ನೀತಾ ಅಂಬಾನಿ ಮಾತ್ರ ಸ್ವಲ್ಪವೂ ವಿಚಲಿತರಾಗದೇ ಕೊಟ್ಟ ಉತ್ತರ ಮಾತ್ರ ಎಲ್ಲರ ಹೃದಯ ಗೆದ್ದಿದೆ. ಅಷ್ಟಕ್ಕೂ ನೀತಾ ಅವರು ಹೇಳಿದ್ದೇನೆಂದರೆ, ಮೋದಿಜಿ ಅವರು ಇಡೀ ದೇಶಕ್ಕೆ ಉತ್ತಮರು, ನನ್ನ ಗಂಡ ಮುಕೇಶ್​ ನನ್ನ ಕುಟುಂಬಕ್ಕೆ ಉತ್ತಮರು ಎಂದು ಉತ್ತರಿಸಿದ್ದಾರೆ. ಇವರ ಈ ಉತ್ತರಕ್ಕೆ ಹಲವಾರು ಮಂದಿ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
 ಪ್ರಶ್ನೆಯೇ ಸರಿಯಿಲ್ಲ ಎಂದು ಹೇಳುವವರು ಒಂದೆಡೆಯಾದರೆ, ಇಂಥ ಪ್ರಶ್ನೆಗೂ ನೀತಾ ಅವರು ಕೊಟ್ಟ ಉತ್ತರ ಶ್ಲಾಘನಾರ್ಹ ಎಂದು ಹಾಡಿ ಹೊಗಳುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.