FactCheck:ಅಪ್ಪನ ಮೇಲೆಯೇ ತಿರುಗಿ ಬಿದ್ದ ಮಗಳು, ಗಂಡನ ಹಣೆಬರಹ ಬಿಚ್ಚಿಟ್ಟ ಪತ್ನಿ
Apr 23, 2025, 11:34 IST
|

ಓಂ ಪ್ರಕಾಶ್ ಅವರ ಕೇಸ್‌ಗೆ ಸಂಬಂಧಿಸಿದಂತೆ ಕೆಲವೊಂದು ವಾಟ್ಸಪ್ ಚಾಟ್‌ಗಳು ಇದೀಗ ಕರ್ನಾಟಕ ಪೊಲೀಸರಿಗೆ ಸಿಕ್ಕಿದೆ. ಈ ಕೊಲೆಯು ಕೌಟುಂಬಿಕ ಕಲಹದಿಂದ ಇಲ್ಲವೇ ಇನ್ನ್ಯಾವುದೋ ಕಾರಣಕ್ಕೆ ನಡೆದಿದೆಯೋ ಎನ್ನುವ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು. ಓಂ ಪ್ರಕಾಶ್ ಅವರನ್ನು ತೀರ ಬರ್ಬರವಾಗಿ ಕೊಲೆ ಮಾಡಲಾಗಿದೆ. ಇದರಲ್ಲಿ ಅವರ ಪತ್ನಿ ಹಾಗೂ ಕುಟುಂಬದವರ ಕೈವಾಡವೇ ಇದೆ ಎನ್ನುವುದು ಅನುಮಾನಗಳಿಗೆ ಕಾರಣವಾಗಿತ್ತು. ಇದೀಗ ಎಲ್ಲದ್ದಕ್ಕೂ ಕಾರಣ ಸಿಕ್ಕಿದೆ.
ಇನ್ನು ಓಂ ಪ್ರಕಾಶ್ ಅವರನ್ನು ಕೊಲೆ ಮಾಡಿದ್ದು ನಾನೇ ಎಂದು ಅವರ ಪತ್ನಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಅವರು ಊಟ ಮಾಡವಾಗಲೇ ಜಗಳ ತೆಗೆದು ಕಣ್ಣಿಗೆ ಏಕಾಏಕಿ ಕಾರದ ಪುಡಿ ಎರಚಲಾಗಿದೆ. ಕಾರದ ಪುಡಿಯ ಉರಿ ತಾಳಲಾಗದೆ ಕಿರುಚಾಡುವಾಗಲೇ ಪಲ್ಲವಿ ಅವರು ಪ್ರಕಾಶ್ ಮೇಲೆ ಕೊತ ಕೊತ ಕುದಿಯುವ ಅಡುಗೆ ಎಣ್ಣೆ ಎರಚಿದ್ದಾರೆ. ಇದಾದ ಮೇಲೆ ತಲೆಗೆ ಬಾಟಲಿಯಿಂದ ಹೊಡೆದಿದ್ದು, ಚಾಕುವಿನಿಂದ ಮನೋಇಚ್ಛೆ ಇರಿಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮನೆಯಲ್ಲಿ ಮೊದಲಿನಿಂದಲೂ ಜಗಳವಾಗುತ್ತಿತ್ತು. ಜಗಳವಾದಾಗೆಲ್ಲವೂ ಗನ್ ತೋರಿಸಿ ಕೊಲೆ ಮಾಡುವುದಾಗಿ ನನಗೆ ಮತ್ತು ಮಗಳಿಗೆ ಬೆದರಿಕೆ ಹಾಕುತ್ತಿದ್ದರು. ಶೂಟ್ ಮಾಡ್ತೀನಿ ಅಂತ ಹೇಳುತ್ತಿದ್ದರು. ಭಾನುವಾರವೂ ಯಾವುದೋ ಕಾರಣಕ್ಕೆ ಜಗಳವಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಯ್ತು ನಮ್ಮನ್ನು ಕೊಲೆ ಮಾಡುವುದಕ್ಕೆ ಪ್ರಯತ್ನಿಸಿದ್ದರು. ಹೀಗಾಗಿ, ಆತ್ಮ ರಕ್ಷಣೆಗಾಗಿ ಜೀವ ಉಳಿಸಿಕೊಳ್ಳಲು ಹೋರಾಟ ಮಾಡಿದೆವು. ಆಗ ಕೊಲೆ ಆಗಿದೆ ಎಂದು ಹೇಳಿಕೆ ಕೊಟ್ಟಿರುವುದು ವರದಿಯಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,1 May 2025