FactCheck:ಮದುವೆಗೂ ಮುನ್ನವೇ ನಾನು ತಾಯಿತನ ಅನುಭವಿಸಿದ್ದೇನೆ; ಅನುಷ್ಕಾ ಶರ್ಮಾ

 | 
Jkk
ಅನುಷ್ಕಾ ಶರ್ಮಾ ಹಾಗೂ ರಣಬೀರ್ ಕಪೂರ್ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಅವರು ಈ ಮೊದಲು ‘ಏ ದಿಲ್ ಹೇ ಮುಷ್ಕಿಲ್’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾ ರಿಲೀಸ್ ಆಗಿದ್ದು 2016ರಲ್ಲಿ. ಅಂದರೆ ಚಿತ್ರ ಬಿಡುಗಡೆ ಆಗಿ 9 ವರ್ಷಗಳೇ ಕಳೆದು ಹೋಗಿವೆ. ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಇದೆ. ರಣಬೀರ್ ಕಪೂರ್ ಅವರು ಈ ಮೊದಲು ಅನುಷ್ಕಾಗೆ ಪ್ರಪೋಸ್ ಮಾಡಿದ್ದರಂತೆ.
ರಣಬೀರ್ ಕಪೂರ್ ಅವರು ಆಲಿಯಾ ಭಟ್ನ ವಿವಾಹ ಆಗಿದ್ದಾರೆ. ಅದೇ ರೀತಿ ಅನುಷ್ಕಾ ಶರ್ಮಾ ಕ್ರಿಕೆಟರ್ ವಿರಾಟ್ ಕೊಹ್ಲಿಯನ್ನು ಮದುವೆ ಆಗಿ ಸುಖವಾಗಿದ್ದಾರೆ. ರಣಬೀರ್ ಕಪೂರ್ ಅವರು ಈ ಮೊದಲು ಸಾಕಷ್ಟು ನಟಿಯರ ಜೊತೆ ಆಪ್ತತೆ ಹೊಂದಿದ್ದರು. ಅನೇಕರ ಜೊತೆ ಅವರು ಡೇಟಿಂಗ್ ಮಾಡಿದ ಉದಾಹರಣೆ ಇದೆ. ಈ ಮೊದಲು ಮಾತನಾಡಿದ್ದ ಅನುಷ್ಕಾ ಶರ್ಮಾ ಅವರು, ನನಗೆ ಬಾಯ್ಸ್ ಫ್ರೆಂಡ್ಸ್ ಜಾಸ್ತಿ ಎಂದು ಹೇಳಿದ್ದರು. ಇದಕ್ಕೆ ರಣಬೀರ್ ಉತ್ತರಿಸಿದ್ದರು. ಇನ್ನು ಕ್ರಿಕೆಟಿಗ ವಿರಾಟ್‌ ಕೊಹ್ಲಿ ಜೊತೆ ಅನುಷ್ಕಾ ಶರ್ಮಾ ಸುಮಾರು 7 ವರ್ಷಗಳ ಕಾಲ ಡೇಟಿಂಗ್‌ ಮಾಡಿ ಮದುವೆಯಾಗಿರುವುದು ಎಲ್ಲರಿಗೂ ತಿಳಿದ ಸಂಗತಿ. 
ಸುಖ ಸಂಸಾರ ನಡೆಸುತ್ತಿರುವ ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.ಅಂದಹಾಗೆ ಒಂದೊಮ್ಮೆ ಸಂದರ್ಶನದಲ್ಲಿ ಅನುಷ್ಕಾ ಶರ್ಮಾ ಮದುವೆಗೂ ಮುಂಚೆ ಅನುಭವಿಸಿದ್ದ ತಾಯ್ತನದ ಖುಷಿಯ ಬಗ್ಗೆ ಮಾತನಾಡಿದ್ದರು. ಅಂದು ಅವರು ಕೊಟ್ಟಿದ್ದ ಹೇಳಿಕೆ ಒಂದಷ್ಟು ಜನರ ಹುಬ್ಬೇರುವಂತೆ ಮಾಡಿತ್ತು.  ಮದುವೆಗೆ ಮುಂಚೆಯೇ ನಾನು ತಾಯ್ತನ ಅನುಭವಿಸಿದ್ದೆ. ಇದಕ್ಕೆಲ್ಲ ಕಾರಣ ರಣಬೀರ್ ಕಪೂರ್ ಜೊತೆಗಿನ ಒಡನಾಟ.‌ ಆತನನ್ನು ಮಗುವಂತೆ ನೋಡಿಕೊಂಡಿದ್ದೇ ಇದಕ್ಕೆ ಕಾರಣ. ನನ್ನಲ್ಲಿ ಒಬ್ಬ ಒಳ್ಳೆಯ ತಾಯಿ ಇದ್ದಾಳೆ ಎಂಬುದನ್ನು ಪರಿಗಣಿಸಿದ್ದೇ ಆತನ ಚೇಷ್ಟೆ ಸಹಿಸಿಕೊಂಡಾಗಿನಿಂದ ಎಂದು ಅನುಷ್ಕಾ ಹೇಳಿಕೆ ನೀಡಿದ್ದರು.
ಹೌದು ಅನುಷ್ಕಾ ಶರ್ಮಾ ಮತ್ತು ರಣಬೀರ್ ಕಪೂರ್ ಉತ್ತಮ ಸ್ನೇಹಿತರು. ಈ ಇಬ್ಬರೂ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. 2015 ರಲ್ಲಿ ಬಿಡುಗಡೆಯಾದ ಬಾಂಬೆ ವೆಲ್ವೆಟ್‌ನಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅದೇ ಚಿತ್ರದ ಪ್ರಚಾರದ ಸಂದರ್ಭದಲ್ಲಿ, ರಣಬೀರ್ ಕಪೂರ್ ಮಗುವಿನಂತೆ ಇದ್ದ, ನಾನು ಆತನಿಗೆ ತಾಯಿಯಂತೆ ಇದ್ದೆ ಎಂದು ಅನುಷ್ಕಾ ಹೇಳಿಕೆ ನೀಡಿದ್ದರು.  ಮೇಕಪ್ ರೂಂಗೆ ಬಂದು ಎಲ್ಲಾಕಡೆ ಓಡಾಡುತ್ತಾನೆ. 
ನನ್ನ ಬ್ಯಾಗ್‌ನಲ್ಲಿ ಏನಿದೆ ಅಂತಾ ನೋಡುತ್ತಾನೆ. ಫೋನ್‌ನಲ್ಲಿ ಏನಾದ್ರೂ ಮಾಡುತ್ತಿದ್ದರೆ ಅಲ್ಲಿಗೆ ಬಂದು ಚೇಷ್ಟೆ ಮಾಡುತ್ತಾನೆ. ಆತನ ಈ ತುಂಟಾಟ ಸಹಿಸಿಕೊಂಡೇ ನಾನೊಬ್ಬಳು ಉತ್ತಮ ತಾಯಿಯಾದೆ. ಮದುವೆಗೆ ಮುಂಚೆಯೇ ನನಗೆ ತಾಯ್ತನ ಅಂದರೆ ಏನೆಂಬುದನ್ನು ಅರ್ಥ ಮಾಡಿಸಿದ್ದ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
 
News Hub