FactCheck:ಪಾಕ್ ಜೈಲಲ್ಲಿರುವ ಇಮ್ರಾನ್ ಖಾನ್ ಗೆ ಏಡ್ಸ್ ರೋಗ, ಅಸಲಿಯತ್ತು ಇ ಲ್ಲಿದೆ

 | 
Jd
ಕಷ್ಟಗಳು ಬಂದರೆ ಒಂದೊಂದೇ ಬರೋದಿಲ್ಲ, ಗುಂಪಾಗಿ ಬರುತ್ತವೆ ಅನ್ನೋ ಮಾತಿದೆ. ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಈ ಮಾತು ತುಂಬಾ ಚನ್ನಾಗಿ ಅನ್ವಯ ಆಗುತ್ತೆ. ಈಗಾಗಲೇ ಭ್ರಷ್ಟಾಚಾರ ಪ್ರಕರಣದ ಅಡಿ ಮೂರು ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿರುವ ಇಮ್ರಾನ್ ಖಾನ್, ಜೀವನ ಪರ್ಯಂತ ಜೈಲಿನಲ್ಲೇ ಕೊಳೆಯಬೇಕಾದಂಥಾ ಪರಿಸ್ಥಿತಿ ಎದುರಾಗಿದೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮೇಲೆ ಜೈಲಿನಲ್ಲಿ ಪಾಕ್ ಸೇನಾ ಮೇಜರ್ ಒಬ್ಬರು ಅತ್ಯಾಚಾರ ಎಸಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಆರೋಪವು ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದು, ಇಮ್ರಾನ್ ಖಾನ್ ಅವರಿಗೆ ಎಚ್‌ಐವಿ ಪಾಸಿಟಿವ್ ಬಂದಿದೆ ಎಂಬ ವರದಿಗಳು ಕೂಡ ಹರಿದಾಡುತ್ತಿವೆ. ಈ ಘಟನೆಯು ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ಸಾಮಾಜಿಕ ಮಾಧ್ಯಮ X ನಲ್ಲಿ @JIX5A ಖಾತೆಯಿಂದ ಹಂಚಿಕೊಳ್ಳಲಾದ ಪತ್ರವೊಂದು ಈ ಆರೋಪ ಬೆಳಕಿಗೆ ತಂದಿದೆ. ಇಮ್ರಾನ್ ಖಾನ್ ಅವರು ಅಡಿಯಾಲ ಜೈಲಿನಲ್ಲಿದ್ದಾಗ ಪಾಕಿಸ್ತಾನ ಸೇನೆಯ ಮೇಜರ್ ಒಬ್ಬರು ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಕೆಲವು ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ತನಿಖಾ ವರದಿಗಳು ಈ ಆರೋಪವನ್ನು ದೃಢಪಡಿಸುತ್ತಿವೆ ಎಂದು ಹೇಳಲಾಗಿದೆ. ಆದರೆ, ಈ ಆರೋಪಗಳಿಗೆ ಯಾವುದೇ ಅಧಿಕೃತ ದೃಢೀಕರಣ ದೊರೆತಿಲ್ಲ.
ಮಾರ್ಚ್ 2025 ರಲ್ಲಿ, ಇಮ್ರಾನ್ ಖಾನ್ ಅವರ ಆರೋಗ್ಯದ ಬಗ್ಗೆ ವರದಿಗಳು ಬಂದ ನಂತರ ಪಾಕಿಸ್ತಾನದ ವೈದ್ಯರ ತಂಡವು ಅಡಿಯಾಲ ಜೈಲಿಗೆ ತೆರಳಿ 30 ನಿಮಿಷಗಳ ಕಾಲ ವೈದ್ಯಕೀಯ ತಪಾಸಣೆ ನಡೆಸಿತ್ತು. ಆದರೆ, ಈ ತಪಾಸಣೆಯ ವರದಿಯನ್ನು ತಕ್ಷಣ ಬಿಡುಗಡೆ ಮಾಡಲಿಲ್ಲ. ಇಮ್ರಾನ್ ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ನಾಯಕರು, ಖಾನ್ ಅವರ ಸಹೋದರಿಯರು, ಮತ್ತು ಕುಟುಂಬದ ಇತರ ಸದಸ್ಯರಿಗೆ ಅವರನ್ನು ಭೇಟಿಯಾಗಲು ಅವಕಾಶ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಇದು ಖಾನ್ ಅವರ ಆರೋಗ್ಯದ ಬಗ್ಗೆ ಗಂಭೀರ ಕಳವಳವನ್ನು ಉಂಟುಮಾಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub