FactCheck:ಮೆಟ್ರೋ ಟಿಕೆಟ್ ಗಾಗಿ ಕಾಯುತ್ತಿದ್ದ ಯುವತಿಯ ಬಟ್ಟೆ ಒ ಳಗೆ ಕೈಬಿಟ್ಟ ಯುವಕ

 | 
Bbgu
ಪ್ರೀತಿ ಪ್ರೇಮದಲ್ಲಿ ಬಿದ್ದವರ ರೀತಿ ಎಂದಿದ್ದರು ವಿಭಿನ್ನವೇ. ಅಕ್ಕಪಕ್ಕ ಜನರಿದ್ದರೂ ಕ್ಯಾರೇ ಎನ್ನದೆ ಜೋಡಿಯೊಂದು ಅಸಭ್ಯವಾಗಿ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಬೆಂಗಳೂರಿನ ಮೆಜೆಸ್ಟಿಕ್ ನಮ್ಮ ಮೆಟ್ರೋ ನಿಲ್ದಾಣದ ಪ್ಲಾಟ್​ಫಾರ್ಮ್​ 3 ರಲ್ಲಿ ನಡೆದ ಘಟನೆ ಇದು ಎನ್ನಲಾಗುತ್ತಿದೆ. ಮತ್ತೊಂದು ಮೂಲದ ಪ್ರಕಾರ, ಮಾದಾವರ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
 ಕರ್ನಾಟಕ ಪೋರ್ಟ್​​ಫೋಲಿಯೋ ಎಂಬ ಎಕ್ಸ್​​ ಹ್ಯಾಂಡಲ್​​ನಲ್ಲಿ, ಬೆಂಗಳೂರು ಮೆಟ್ರೋ ಕೂಡ ದೆಹಲಿ ಮೆಟ್ರೋ ಸಂಸ್ಕೃತಿಯತ್ತ ಸಾಗುತ್ತಿದೆಯೇ? ಎಂದು ಪ್ರಶ್ನಿಸಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋಗೆಈಗ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದೆ. ಜೋಡಿಯ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ಅಥವಾ ಬಿಎಂಆರ್​ಸಿಎಲ್ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ಯುವ ಜೋಡಿಯೊಂದು ಅಕ್ಕಪಕ್ಕ ಮಹಿಳೆಯರು, ಹಿರಿಯರಿದ್ದರೂ ಕ್ಯಾರೇ ಎನ್ನದೆ ಅಸಭ್ಯವಾಗಿ ವರ್ತಿಸಿರುವುದು ವಿಡಿಯೋದಲ್ಲಿದೆ. ಸುಮಾರು 1 ನಿಮಿಷ 30 ಸೆಕಂಡ್​ನ ವಿಡಿಯೋ ಈಗ ವೈರಲ್ ಆಗುತ್ತಿದೆ.ಈ ಘಟನೆಯು ಬೆಂಗಳೂರಿನಲ್ಲಿ ಸಭ್ಯತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಮಾಡುವುದನ್ನು ನೋಡುವುದು ಅತ್ಯಂತ ನಿರಾಶಾದಾಯಕ ಮತ್ತು ಕಳವಳಕಾರಿಯಾಗಿದೆ. ಮಾದಾವರ ಬಳಿಯ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಇತ್ತೀಚೆಗೆ ನಡೆದ ಘಟನೆಯು ಅನೇಕರನ್ನು ಆಘಾತಗೊಳಿಸಿದೆ ಮತ್ತು ಮುಜುಗರಕ್ಕೀಡು ಮಾಡಿದೆ. ಒಬ್ಬ ಯುವಕ ತನ್ನ ಗೆಳತಿಯೊಂದಿಗೆ ಅತ್ಯಂತ ಅನುಚಿತ ವರ್ತನೆಯಲ್ಲಿ ತೊಡಗಿದ್ದಾನೆ. 
ಅವಳೊಂದಿಗೆ ಮೆಟ್ರೋಗೆ ಕಾಯುತ್ತಿದ್ದಾಗ ಆಕೆಯ ದಿರಿಸಿನೊಳಗೆ ಕೈಹಾಕಿ ಅಸಭ್ಯ ರೀತಿಯಲ್ಲಿ ವರ್ತಿಸಿರುವುದು ಕಂಡುಬಂದಿದೆ. ಇದು ವೈಯಕ್ತಿಕ ವಿಷಯವೇ ಆಗಿದ್ದರೂ, ವಾತ್ಸಲ್ಯ ಮತ್ತು ಅಸಭ್ಯತೆಯ ನಡುವೆ ಸ್ಪಷ್ಟವಾದ ಗೆರೆ ಅಥವಾ ವ್ಯತ್ಯಾಸ ಇದೆ. ಸಾರ್ವಜನಿಕ ಸಾರಿಗೆಗಾಗಿ ಉದ್ದೇಶಿಸಲಾದ ಜಾಗದಲ್ಲಿ ಆ ಗೆರೆಯನ್ನು ಎಂದಿಗೂ ದಾಟಬಾರದು. ಇನ್ನೂ ಹೆಚ್ಚು ನಿರಾಶಾದಾಯಕ ವಿಷಯವೆಂದರೆ, ಕೆಲವು ಯುವತಿಯರು ತಮ್ಮ ಸಂಗಾತಿಗಳಿಂದ ಅಂತಹ ನಡವಳಿಕೆಯನ್ನು ಸಹಿಸಿಕೊಳ್ಳುವ ಅಥವಾ ಪ್ರೋತ್ಸಾಹಿಸುವ ಮನೋಭಾವ ಕಾಣಿಸುತ್ತಿದೆ. 
ಅದರಲ್ಲಿ ಯಾವುದೇ ತಪ್ಪಿಲ್ಲ ಎಂಬಂತೆ ವರ್ತಿಸುತ್ತಾರೆ. ಇದು ಧೈರ್ಯ ಅಥವಾ ಸ್ವಾತಂತ್ರ್ಯವಲ್ಲ – ಇದು ನಿರ್ಲಕ್ಷ್ಯ, ಅಗೌರವ ಮತ್ತು ಸಾಮಾಜಿಕ ಅರಿವಿನ ಕೊರತೆ ಎಂದು ಕರ್ನಾಟಕ ಪೋರ್ಟ್​​ಫೋಲಿಯೋ ಎಕ್ಸ್​ ಹ್ಯಾಂಡಲ್ ಸಂದೇಶದಲ್ಲಿ ಬರೆಯಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.