ಹೊಸ‌‌ ಜೀವನಕ್ಕೆ ಕಾಲಿಟ್ಟ ಚಂದನ್ ಶೆಟ್ಟಿ, ಬಿಳಿ‌ ಗೊಂಬೆಯ ಜೊತೆ ಫಾರಿನ್ ನಲ್ಲಿ‌ ಡೇಟಿಂಗ್

 | 
Na
ಬಿಗ್‌ಬಾಸ್‌ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ಕನ್ನಡದ ರ‍್ಯಾಪರ್ ಚಂದನ್‌ ಶೆಟ್ಟಿ ಅವರು ನಿವೇದಿತಾ ಗೌಡ ಜೊತೆ ಮದುವೆಯಾಗಿ ಸರ್‌ಪ್ರೈಸ್‌ ನೀಡಿದ್ದರು. ಕೆಲ ತಿಂಗಳ ಹಿಂದಷ್ಟೇ ಅವರು ಪರಸ್ಪರ ಡಿವೋರ್ಸ್‌ ಘೋಷಿಸಿ ಎಲ್ಲರಿಗೂ ಶಾಕ್‌ ಕೊಟ್ಟಿದ್ದರು. ಕಾರಣಾಂತರಗಳಿಂದ ಚಂದನ್‌ ನಿವೇದಿತಾ ಅವರ ಸಂಬಂಧ ಮುರಿದುಬಿದ್ದಿತ್ತು. ಬಳಿಕ ಇಬ್ಬರೂ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಡಿವೋರ್ಸ್‌ ವಿಚಾರವಾಗಿ ಹಲವು ವದಂತಿ ಕೂಡ ಹಬ್ಬಿತ್ತು. ಇದೀಗ ಚಂದನ್‌ ಶೆಟ್ಟಿ ಅವರು ಹೊಸ ಜೀವನ ಶುರು ಮಾಡಿದ್ದೇನೆ ಎನ್ನುವ ಮೂಲಕ ಮತ್ತೊಂದು ಮಹತ್ವದ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ನಿವೇದಿತಾ-ಚಂದನ್‌ ಶೆಟ್ಟಿ ಅವರು ಮುದ್ದಾದ ಜೋಡಿ ಎಂದು ಕರೆಸಿಕೊಂಡಿದ್ದರು. ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಕರ್ನಾಟಕದ ಮನೆಮಾತಾಗಿದ್ದರು. ಆದರೆ ದಿಢೀರ್‌ ಇಬ್ಬರೂ ಡಿವೋರ್ಸ್‌ ನಿರ್ಧಾರ ಮಾಡಿದ್ದು ಎಲ್ಲರಿಗೂ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಎಲ್ಲವೂ ಚೆನ್ನಾಗೇ ಇತ್ತು, ಡಿವೋರ್ಸ್‌ ಯಾಕೆ? ಎಂಬ ಪ್ರಶ್ನೆ ಮುಂದಿಟ್ಟಿದ್ದರು. ಆದರೆ ಹೊಂದಾಣಿಕೆ ಸಮಸ್ಯೆಯಿಂದ ಹಾಗೂ ಇಬ್ಬರ ಕೆರಿಯರ್‌ ದೃಷ್ಟಿಯಿಂದ ಪರಸ್ಪರ ಡಿವೋರ್ಸ್‌ ಪಡೆಯುತ್ತಿರುವುದಾಗಿ ಇಬ್ಬರೂ ಮಾಧ್ಯಮಗಳ ಮುಂದೆ ಬಂದು ಸ್ಪಷ್ಟನೆ ನೀಡಿದ್ದರು.
ಡಿವೋರ್ಸ್‌ ಬಗ್ಗೆ ಕ್ಲಾರಿಟಿ ಕೊಟ್ಟ ಬಳಿಕವೂ ಚಂದನ್-ನಿವೇದಿತಾ ಬಗ್ಗೆ ವದಂತಿ ಜೋರಾಗಿ ಹಬ್ಬಿತ್ತು. ಚಂದನ್‌ ಬೇರೆ ನಟಿಯೊಂದಿಗೆ ಆತ್ಮೀಯವಾಗಿದ್ದಾರೆ ಎಂಬ ಗಾಸಿಪ್‌ ಇತ್ತು. ನಿವೇದಿತಾ ಅವರ ಬಗ್ಗೆಯೂ ಕೆಲ ವದಂತಿಗಳು ಜೋರಾಗಿ ಸದ್ದು ಮಾಡಿದ್ದವು. ಈ ಬಗ್ಗೆಯೂ ಅವರು ಸ್ಪಷ್ಟನೆ ನೀಡಿದ್ದರು. ಆದರೂ ನಿವೇದಿತಾ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಕೆಟ್ಟ ಕಾಮೆಂಟ್‌ಗಳು ಹೆಚ್ಚಾಗಿದ್ದವು.
ಸೂತ್ರಧಾರಿ ಸಿನಿಮಾ ಮೂಲಕ ಚಂದನ್‌ ಶೆಟ್ಟಿ ಅವರು ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ನಾನು ನಟನಾಗಬೇಕು ಎನ್ನುವುದು ನಮ್ಮ ತಂದೆಯ ಕನಸು. ಚಿಕ್ಕಂದಿನಿಂದಲೂ ನೀನು ಸಿನಿಮಾ ಹೀರೋ ಆಗಬೇಕು ಅಂತಿದ್ರು. ಆದರೆ ನಾನು ಕನ್ನಡಿ ಮುಂದೆ ನಿಂತು ನೋಡಿದ್ರೆ ನಾನು ಯಾವಾಗ ಹೀರೋ ಆಗ್ತೀನಿ ಅಂತ ನಗು ಬರುತ್ತೆ. ಆದರೆ ನನ್ನ ತಂದೆ ಆವತ್ತು ಹೇಳಿದ್ದ ಒಂದು ಮಾತು ಇದೇ ಮೇ 9ರಂದು ನಿಜ ಆಗುತ್ತಿದೆ. ನನ್ನ ತಂದೆಯ ಕನಸು ಈಡೇರುತ್ತಿದೆ ಹೊಸಾ ಜೀವನ ಶುರು ಮಾಡ್ತಿದ್ದೇನೆ ಎಂದು ಚಂದನ್‌ ಸಂತಸ ಹಂಚಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.