FactCheck; 9 ತಿಂಗಳ ಗರ್ಭಿಣಿಯಾದ ಯುವಕ, ಸ್ನೇಹಿತರಿಂದ ಸೀಮಂತ ಶಾಸ್ತ್ರ
Feb 15, 2025, 18:50 IST
|

ಒಂದು ಹೆಣ್ಣು ಸಿಹಿ ಸುದ್ದಿ ಕೊಟ್ಟರೆ ಖುಷಿಪಡಬಹುದು, ಆದರೆ ಪುರುಷ ಸಿಹಿಸುದ್ದಿ ಕೊಟ್ಟರೆ? ಹೌದು, ಇಲ್ಲೋರ್ವ ಗಂಡಸು ಗರ್ಭಿಣಿಯಾಗಿದ್ದಾನೆ. ಕರ್ನಾಟಕದಲ್ಲಿ ಗರ್ಭಿಣಿ ಗಂಡಸಿಗೆ ಸೀಮಂತ. ಹೌದು, ನೀವು ಓದುತ್ತಿರುವ ವಿಷಯವಂತೂ ಸತ್ಯ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ನಿಮಗೊಂದು ಸಿಹಿಸುದ್ದಿ ಎನ್ನುವ ಸಿನಿಮಾ ತಂಡವೊಂದು ಸುದ್ದಿಗೋಷ್ಠಿ ಕರೆದು, ಅಲ್ಲಿ ಸೀಮಂತ ಕಾರ್‍ಯಕ್ರಮ ಆಯೋಜಿಸಿತ್ತು.
ಸುದ್ದಿಗೋಷ್ಠಿಯಲ್ಲಿ ಪುರುಷನಿಗೆ ಸೀಮಂತ ಮಾಡೋದು ನೋಡಿ ಅಲ್ಲಿದ್ದವರಿಗೆಲ್ಲ ಅಚ್ಚರಿ ಆಗಿದ್ದಂತೂ ಸತ್ಯ. ಕಳೆದ ಸಂಕ್ರಾಂತಿ ಹಬ್ಬದ ಟೈಮ್‌ನಲ್ಲಿ ‘ನಿಮಗೊಂದು ಸಿಹಿಸುದ್ದಿ’ ಎನ್ನುವ ಸಿನಿಮಾದ ಮೋಶನ್ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಈಗ ಈ ಚಿತ್ರ ಟ್ರೇಲರ್ ರಿಲೀಸ್ ಮಾಡಿದೆ. ಟ್ರೇಲರ್ ರಿಲೀಸ್ ಸಮಾರಂಭದಲ್ಲಿ ಗರ್ಭಿಣಿ ಗಂಡಸಿಗೆ ಸೀಮಂತ ಮಾಡಲಾಗಿದೆ.
ಈ ಚಿತ್ರದ ಮೂಲಕ ರಘು ಭಟ್ ಅವರು ನಿರ್ದೇಶಕರಾಗಿದ್ದಾರೆ. ಅಶ್ವಿನ್ ಹೇಮಂತ್, ಕಾವ್ಯಾ ಶೆಟ್ಟಿ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶೆಫ್ ಆಗಿರೋ ಹೀರೋ ಅರ್ಜುನ್ ಮದುವೆ ಆಗೋಕೆ ಇಷ್ಟಪಡೋದಿಲ್ಲ. ಹೀರೋ, ಹೀರೋಯಿನ್ ಪ್ರೀತಿಸಿ ದೈಹಿಕ ಸಂಪರ್ಕಕ್ಕೆ ಒಳಗಾಗುತ್ತಾರೆ. ಇದರ ಪರಿಣಾಮ ಹೀರೋ ಗರ್ಭಿಣಿ ಆಗುತ್ತಾನೆ. ಗಂಡಸು ಗರ್ಭಿಣಿ ಆಗಿದ್ದು ಹೇಗೆ? ನಿಜಕ್ಕೂ ಏನಾಗಿತ್ತು ಎನ್ನುವ ಬಗ್ಗೆ ಈ ಸಿನಿಮಾವಿದೆ. ಒಟ್ಟಿನಲ್ಲಿ ವೈಜ್ಞಾನಿಕ ವಿಷಯಗಳನ್ನು ಹೇಳುವುದರ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಥರ ಕಥೆ ಸಾಗಿದೆ. ಒಟ್ಟಿನಲ್ಲಿ ಈ ಕಾನ್ಸೆಪ್ಟ್ ವಿಭಿನ್ನವಾಗಿದ್ದು, ಈ ಸಿನಿಮಾದಲ್ಲಿ ಏನು ಹೇಳಲಿದ್ದಾರೆ ಎಂಬ ಕುತೂಹಲವೇ ಜೋರಾಗಿದೆ.
ವಿಚಿತ್ರ ಪ್ರಯತ್ನ ಇದು. ಈ ಪ್ರಯತ್ನದ ಬಗ್ಗೆ ಇರುವ ಸಾಕಷ್ಟು ಪ್ರಶ್ನೆಗಳಿಗೆ ಫೆಬ್ರವರಿ 21ಕ್ಕೆ ಉತ್ತರ ಸಿಗಲಿದೆಯಂತೆ. ಈಗ ನಾನು ಈ ಬಗ್ಗೆ ಹೇಳಿದರೆ ಸಿನಿಮಾ ಬಿಟ್ಟುಕೊಟ್ಟ ಹಾಗೆ ಆಗುತ್ತದೆ. ಯಾವುದೇ ಸಿನಿಮಾದ ಕತೆಯನ್ನು ಟಚ್ ಮಾಡದೆ ನಾವು ಹೊಸದಾಗಿ ಕನ್ನಡದಲ್ಲಿ ಕಥೆಯನ್ನು ಹೇಳಿದ್ದೇವೆ. ಇದನ್ನು ಗಂಭೀರವಾಗಿ ಪರಿಗಣಿಸದೆ, ಹಾಸ್ಯಾತ್ಮಕವಾಗಿ ಹೇಳಲಾಗಿದೆ ಎಂದು ರಘು ಭಟ್ ಅವರು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ..