FactCheck:ಎರಡನೇ ಮದುವೆ ಸಿಹಿಸುದ್ದಿಯಲ್ಲಿ ಮೇಘನಾ ರಾಜ್, ಏಕಾಏಕಿ ಬದಲಾವಣೆಗೆ ಕಾರಣ ಯಾರು

 | 
N
ಬದುಕಿ ಬಾಳಬೇಕಿದ್ದ ಚಿರಂಜೀವಿ ಸರ್ಜಾ ಅವರನ್ನ ಕಳೆದು ಕೊಂಡ ನೋವು ಅವರ ಕುಟುಂಬಕ್ಕೆ ಹಾಗೂ ಅವರ ಪತ್ನಿ ಮೇಘನಾ ರಾಜ್‌ ಅವರುಗೆ ಇನ್ನೂ ಇನ್ನೂ ಕಡಿಮೆಯಾಗಿರಲಿಲ್ಲ. ಇತ್ತ ನಟಿ ಮೇಘನಾ ರಾಜ್‌ ಅವರು ಇನ್ನೊಂದು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಪದೇ ಪದೇ ಕೇಳಿ ಬರುತ್ತಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಕೂಡ ಶುರುವಾಯಿತು. 
ಕೆಲವರು ಮೇಘನಾ ರಾಜ್ ಮತ್ತೊಂದು ಮದುವೆಯಾಗಬೇಕು ಅಂದರು. ಅಲ್ಲದೇ ಇನ್ನು ಕೆಲವರು ಮೇಘನಾ ರಾಜ್ ಚಿರು ಅವರನ್ನ ಬಹುಬೇಗ ಮರೆತರು ಅಂದರು. ಈ ಎಲ್ಲ ವಿಚಾರಗಳಿಗೆ ನಟಿ ಮೇಘನಾ ರಾಜ್ ಮೌನ ಮುರಿದು ಮುಕ್ತವಾಗಿ ಮಾತನಾಡಿದ್ದಾರೆ.ಖಾಸಗಿ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮತ್ತೊಂದು ಮದುವೆ ಕುರಿತು ಮಾತನಾಡಿದ್ದಾರೆ. 
ನಮಗೆ ಸಮಾಧಾನವಾಗುತ್ತೆ ಎಂದು ಅಂದುಕೊಂಡು ಅವರು ಹೀಗೆ ಮಾತನಾಡುತ್ತಾರಾ ಅಥವಾ ನೋವಲ್ಲಿರುವ ನಮಗೆ ಇನ್ನೂ ನೋವು ಕೋಡಬೇಕು ಎಂಬ ಉದ್ದೇಶದಲ್ಲಿ ಮಾತನಾಡುತ್ತಾರಾ, ಟ್ರೋಲ್ ಮಾಡುತ್ತಾರಾ ಗೊತ್ತಿಲ್ಲ, ಆದರೆ ಅದೆಲ್ಲ ನೋಡಿದಾಗ ನನಗೆ ಸ್ವಲ್ಪ ಮನರಂಜನೆ ಸಿಗುತ್ತೆ ಎಂದು ಮೇಘನಾ ಹೇಳಿದ್ದಾರೆ. ಜನ ಹೀಗೆ ಮಾತನಾಡುವುದು ಅಂತ ನಾವು ಒಪ್ಪಿಕೊಳ್ಳಬೇಕು ಯಾಕೆಂದರೆ ನನ್ನ ಬಗ್ಗೆ ಮಾತ್ರವಲ್ಲ ವಿಜಯ್ ರಾಘವೇಂದ್ರ ವಿಚಾರದಲ್ಲಿ ಕೂಡ ಜನ ಹೀಗೆ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ರಾಯನ್ ಕಣ್ಣೇದುರು ದೈಹಿಕವಾಗಿ ತಂದೆಯ ಸ್ಥಾನದಲ್ಲಿ ಒಬ್ಬರು ಇರಬೇಕಿತ್ತು ಎಂಬ ಆಲೋಚನೆ ನನಗೆ ಬಂದಿಲ್ಲ ಎಂದು ಹೇಳಿದರೆ ಅದು ಸುಳ್ಳಾಗುತ್ತೆ ಯಾಕೆಂದರೆ ನನ್ನ ಮಗ ಚಿರು ಬಗ್ಗೆ ಮಾತನಾಡದ ದಿನ ಇಲ್ಲ ಎಂದು ಹೇಳಿರುವ ಮೇಘನಾ, ಚಿರು ಹಾಡುಗಳನ್ನು ರಾಯನ್ ನೋಡುತ್ತಾನೆ, ಸಿನಿಮಾಗಳನ್ನು ನೋಡುತ್ತಾನೆ, ಅಪ್ಪ ಅಂದರೆ ಅದು ಚಿರು ಎಂದು ಅವನಿಗೆ ಗೊತ್ತು ಎಂದು ಮಗನ ಕುರಿತು ಮೇಘನಾ ಅವರು ಮಾತನಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.