ಮೊಟ್ಟಮೊದಲ ಬಾರಿಗೆ ಪತ್ನಿ ಜೊತೆ ತಿರುಗಾಡಲು ಪಕ್ಕದ ರಾಜ್ಯಕ್ಕೆ ಹೊರಟ ದರ್ಶನ್
Mar 24, 2025, 21:00 IST
|

ರೇಣುಕಾಸ್ವಾಮಿ ಪ್ರಕರಣದಲ್ಲಿ ಸ್ವಲ್ಪ ರಿಲೀಫ್ ಪಡೆದಿರುವ ನಟ ದರ್ಶನ್ ಕಮ್ ಬ್ಯಾಕ್ ಮಾಡೋ ತಯಾರಿಯಲ್ಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಸಿನಿಮಾದ ಶೂಟಿಂಗ್ ಮತ್ತೆ ಆರಂಭವಾಗಿದೆ. ಈ ಮಧ್ಯೆ ನಟ ದರ್ಶನ್ ಅವರು ಪತ್ನಿ, ಮಗನ ಜೊತೆ ಕೇರಳದ ಪ್ರಸಿದ್ಧ ದೇವಾಲಯದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.ಕೇರಳದ ಕಣ್ಣೂರಿನಲ್ಲಿ ಪುರಾಣ ಪ್ರಸಿದ್ಧ ಮಡಾಯಿ ಶ್ರೀ ತಿರುವರ್ಕ್ಕಾಟ್ಟು ಕಾವು ಭಗವತಿ ದೇವಸ್ಥಾನ ಇದೆ. ಇಲ್ಲಿಗೆ ಹಲವು ರಾಜಕಾರಣಿಗಳು ಶತ್ರು ಸಂಹಾರ ಪೂಜೆ ಮಾಡಿಸಲು ತೆರಳುತ್ತಾರೆ.
ಈ ದೇವಾಲಯಕ್ಕೆ ನಟ ದರ್ಶನ್ ಕುಟುಂಬ ಸಮೇತ ತೆರಳಿದ್ದು, ಶತ್ರು ಸಂಹಾರ ಪೂಜೆ ಮಾಡಿಸಿ ದೇವರ ದರ್ಶನ ಪಡೆದಿದ್ದಾರೆ.ಕೇರಳದ ಈ ಪ್ರಸಿದ್ಧ ದೇವಸ್ಥಾನದಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಕಾಣಿಸಿಕೊಂಡಿರೋದು ಅಚ್ಚರಿಗೆ ಕಾರಣವಾಗಿದೆ. ಶತ್ರು ಸಂಹಾರ ಪೂಜೆಗೆ ಪ್ರಸಿದ್ಧವಾದ ಈ ದೇವಸ್ಥಾನಲ್ಲಿ ದರ್ಶನ್ ಕುಟುಂಬ ಕಾಣಿಸಿಕೊಂಡಿದ್ದು ಈ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ಜೈಲಿನಲ್ಲಿದ್ದಾಗ, ಜಾಮೀನಿನ ಮೇಲೆ ಹೊರಗಡೆ ಬಂದ ಮೇಲೆ ಹಲವು ದೇವಾಲಯಕ್ಕೆ ಭೇಟಿ ನೀಡಿದ್ದರು. ಇದೀಗ ಕೇರಳದ ಕಣ್ಣೂರಿನ ಮಾಡಾಯಿಕಾವು ದೇವಸ್ಥಾನದಲ್ಲಿ ಪತ್ನಿ ವಿಜಯಲಕ್ಷ್ಮಿ, ಮಗ ಹಾಗೂ ನಟ ಧನ್ವೀರ್ ಜೊತೆ ವಿಜಯಲಕ್ಷ್ಮಿ ಅವರು ಆಗಮಿಸಿದ್ದಾರೆ. ಶತ್ರು ಸಂಹಾರ ಪೂಜೆಗೆ ಪ್ರಸಿದ್ಧವಾದ ಈ ದೇವಸ್ಥಾನಲ್ಲಿ ದರ್ಶನ್, ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್, ಆಪ್ತ ಧನ್ವೀರ್ ಜೊತೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಈ ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆ ಮಾಡಲು ನಕ್ಷತ್ರ, ಗಳಿಗೆ, ಸೂಕ್ತ ಸಮಯ ನೋಡಿಕೊಂಡು ಪೂಜೆ ಮಾಡಲಾಗುತ್ತೆ. ಇವತ್ತು ಶುಭವಾದ ಸಮಯವಾಗಿದ್ದು, ಪ್ರಾರ್ಥನೆ ಮಾಡಿದ್ರೆ ಫಲ ಸಿಗುತ್ತೆ ಅನ್ನೋ ನಂಬಿಕೆ ಇದೆ.ಹಿಂದೂ ಪಂಚಾಂಗದ ಪ್ರಕಾರ ಅಷ್ಟಮಿ ತಿಥಿಯಾದ ಇಂದು ಶತ್ರು ಸಂಹಾರ ಪೂಜೆ ಸಲ್ಲಿಸಿದ್ರೆ ವಿಶೇಷ ಫಲ, ಪರಿಹಾರ ಸಿಗುತ್ತೆ ಅನ್ನೋ ನಂಬಿಕೆ ಇದೆ. ಇವತ್ತು ಶನಿವಾರ ಮತ್ತು ಅಷ್ಟಮಿ ತಿಥಿ ಇರುವ ಹಿನ್ನೆಲೆಯಲ್ಲಿ ಜ್ಯೋತಿಷಿಗಳ ಸಲಹೆ ಮೇರೆಗೆ ಶತ್ರು ಸಂಹಾರ ಪೂಜೆ ನೆರವೇರಿದೆ ಎನ್ನಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.