ಕೋಳಿ ಪ್ರಿಯರಿಗೆ ಬಂಪರ್ ಗುಡ್ ನ್ಯೂಸ್, ಅದೇನು ಗೊತ್ತಾ

 | 
ರಪು

ಕೋಳಿ ಮಾಂಸ ಪ್ರಿಯರಿಗೆ ಇದು ಸಕಾಲ. ಪ್ರಸ್ತುತ ಕೋಳಿ ಮಾಂಸದ ಬೆಲೆ ಬರೋಬ್ಬರಿ ಶೇ. 30 ರಿಂದ 40ರಷ್ಟು ಕುಸಿದಿದ್ದು, ಚಿಕನ್ ಭೋಜನ ಪ್ರಿಯರು ಹರ್ಷಗೊಂಡಿದ್ದಾರೆ. ಕೋಳಿ ಫಾರ್ಮ್‌ನಲ್ಲಿ ದರ ಈಗ ಕೆ.ಜಿಗೆ ಸರಾಸರಿ 80 ರೂ.ಗೆ ಇಳಿಕೆಯಾಗಿದೆ. ಜೂನ್‌ನಲ್ಲಿ ಇದೇ ದರ ಕೆಜಿಗೆ 120 ರೂ.ಗೆ ಜಿಗಿದಿತ್ತು. ತರಕಾರಿಗಳು ಮತ್ತು ಬೇಳೆ ಕಾಳುಗಳ ಬೆಲೆಗಳು ಏರಿಕೆಯಾಗಿರುವ ಹೊತ್ತಲ್ಲೇ ಕೋಳಿ ಮಾಂಸದ ದರ ಇಳಿಕೆಯಾಗಿದೆ. 

ಬೆಲೆ ಏರಿಕೆಯ ದಿನಗಳಲ್ಲಿ ಋಣಾತ್ಮಕ ಹಣದುಬ್ಬರವನ್ನು ಕಂಡ ಏಕೈಕ ಪ್ರಮುಖ ಆಹಾರ ಸರಕು ಕೋಳಿಯಾಗಿದೆ. ಶ್ರಾವಣ ಮಾಸದ ಸಂದರ್ಭದಲ್ಲಿ ಕೋಳಿ ಮಾಂಸ ಸೇವನೆಯು ಪ್ರತಿ ವರ್ಷ ಕಡಿಮೆಯಾಗುತ್ತದೆ. ಹೀಗಾಗಿ, ಅಲ್ಪ ಮಟ್ಟದಲ್ಲಿ ದರ ಇಳಿಕೆ ಸಹಜ. ಆದರೆ, ಈ ವರ್ಷ ದರ ಇಳಿಕೆಯ ಪರಿಣಾಮವು ಹೆಚ್ಚು ತೀವ್ರವಾಗಿದೆ. ಮೊಟ್ಟೆ ದರ ಕಳೆದ 15 ದಿನಗಳಿಂದ ಈಚೆಗೆ ಇಳಿಕೆ ಕಂಡಿದೆ. 

ಚಿಲ್ಲರೆ ಮಾರಾಟದಲ್ಲಿ ಒಂದು ಮೊಟ್ಟೆಗೆ 6.50 ರೂಪಾಯಿ ಇದ್ದ ದರ ಈಗ 5.50 ರೂ.ಗೆ ಇಳಿಕೆಯಾಗಿದೆ. 
ನಾಟಿ ಕೋಳಿ ಹಾಗೂ ಫಾರಂ ಕೋಳಿ ಮೊಟ್ಟೆಗಳನ್ನು ಮನೆ ಬಾಗಿಲಿಗೇ ತಂದು ಮಾರಾಟ ಮಾಡಲಾಗುತ್ತಿದ್ದು, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಿಂದಲೂ ಕೋಳಿ ಮೊಟ್ಟೆಗಳನ್ನು ತಂದು ಮಾರಾಟ ಮಾಡಲಾಗುತ್ತಿದೆ. 
ಹೀಗಾಗಿ ದರಗಳು ಮತ್ತಷ್ಟು ಕುಗ್ಗಿವೆ ಎನ್ನುತ್ತಾರೆ ಮೊಟ್ಟೆ ವ್ಯಾಪಾರಿಗಳು.

ಈ ಬಾರಿ ಶ್ರಾವಣದಲ್ಲೂ ಕೋಳಿ ಮಾಂಸ ದರ ಹೆಚ್ಚೇನು ಬದಲಾವಣೆ ಆಗಿರಲಿಲ್ಲ. ಇದೀಗ ಕೊನೆಗೂ ದರ ಇಳಿದಿರುವುದರಿಂದ ಕೋಳಿ ಮಾಂಸ ಹಾಗೂ ಮೊಟ್ಟೆ ಪ್ರಿಯರು ಸಹಜವಾಗಿಯೇ ಖುಷಿಯಾಗಿದ್ದಾರೆ. ಸ್ವಲ್ಪ ದಿನಗಳವರೆಗೆ ಇದೇ ದರ ಮುಂದುವರಿಯುವ ಸಾಧ್ಯತೆ ಇದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.