ಶ್ರುತಿ ಹಾಗೂ ಸುನೀಲ್ ಬಗ್ಗೆ ಗುರುಕಿರಣ್ ಖಡಕ್ ಮಾತು, ಇಬ್ಬರು ಸುಳ್ಳು ಹೇಳಿ ಬಂದರು

 | 
ರರಪ

ಇತ್ತೀಚಿಗೆ ಗಾಯಕ ಗುರುಕಿರಣ್ ಅವರು ಅವರ ಹೆಂಡತಿಯ ಸಹೋದರ ನಟ ಸುನಿಲ್ ಅವರ ಬಗ್ಗೆ ಒಂದಿಷ್ಟು ಮಾಹಿತಿ ಬಿಚ್ಚಿಟ್ಟಿದ್ದಾರೆ. ಹೌದು ಕನ್ನಡದ ಉತ್ತಮ ನಟ ಸುನಿಲ್ ಅವರು ಈಗಿಲ್ಲ. ದುರದೃಷ್ಟ ವಾಶಾತ್ ಅವರು ಕಾರ್ ಆಕ್ಸಿಡೆಂಟ್ ಅಲ್ಲಿ ನಿಧನ ಹೊಂದಿ 25 ವರ್ಷಗಳೇ ಕಳೆದರೂ ಕೂಡಾ ಹಲವರ ಮನದಲ್ಲಿ ಉಳಿದಿದ್ದಾರೆ. ಮಂಗಳೂರಿನ ಬಾರ್ಕೂರು‌ ಎಂಬ ಪುಟ್ಟ ಹಳ್ಳಿಯೊಂದರಲ್ಲಿ ಬಂಟ ಕುಟುಂಬದಲ್ಲಿ ಜಯಶೀಲ ಶೆಟ್ಟಿ ‌ಮತ್ತು ನಿರ್ಮಲಾ ದಂಪತಿಗಳ ಎರಡನೇ ಮಗನಾಗಿ “ರಾಮಕೃಷ್ಣ” ಜನಿಸುತ್ತಾರೆ. 

ಇವರ ಮೂಲ ಹೆಸರು ರಾಮಕೃಷ್ಣ. ಬಾರ್ಕೂರಿನ ಸಮೀಪದ ಪಿಯು ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿ, ಉನ್ನತ ಶಿಕ್ಷಣ ಪಡೆಯಲು ಬೆಂಗಳೂರಿನ ಆರ್.ವಿ. ಇಂಜಿನಿಯರಿಂಗ್ ಕಾಲೇಜಿಗೆ ಸೇರುತ್ತಾರೆ‌ ರಾಮಕೃಷ್ಣ. ನಟನೆಯಲ್ಲಿ ಅತೀವವಾಗಿ ಆಸಕ್ತಿಯನ್ನು ಹೊಂದಿದ್ದರು. ಆರಂಭದ ದಿನಗಳಲ್ಲಿ ಯಕ್ಷಗಾನ ಕಲಾವಿದರಾಗಿದ್ದ ರಾಮಕೃಷ್ಣ ಅವರಿಗೆ‌ ತಾನು ನಟ ಆಗಬೇಕು ಅನ್ನುವ ಆಸೆ ಇತ್ತು. ಅಂದಿನ ಜನಪ್ರಿಯ ಮ್ಯಾಗಜೀನ್ ಅಭಿಮಾನಿ ಗಾಗಿ ಪೋಟೋ ಕಾಮಿಕ್ಸ್ ಮಾಡುತ್ತಿದ್ದರು ಫೋಟೋಗ್ರಾಫರ್ ವಿಶ್ವನಾಥ್ ಸುವರ್ಣ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಮೊದಲು ಬಣ್ಣ ಹಚ್ಚಿದ್ದೆ ಸುನೀಲ್. ಆ ಪೋಟೋದಿಂದಲೇ ಬಿಸಿ ರಕ್ತ  ನಾದ ಸುರಭಿ ಚಿತ್ರಕ್ಕೆ ನಟಿಸುವ ಅವಕಾಶ ಒದಗಿ ಬಂತು. ಇನ್ನೊಂದಡೆ ಇಂಜಿನಿಯರಿಂಗ್ ಶಿಕ್ಷಣ ಮುಂದುವರೆಯುತ್ತಿತ್ತು.

ದ್ವಾರಕೀಶ್ ಪ್ರೊಡಕ್ಷನ್ಸ್‌ ಆರಂಭವಾಗಿ ಮೊನ್ನೆ ಮೊನ್ನೆಯಷ್ಟೇ ಐವತ್ತು ವರ್ಷಗಳು ಪೂರೈಸಿವೆ. ಯುವ ಪ್ರತಿಭಾವಂತ ಕಲಾವಿದರನ್ನು ಪರಿಚಯಿಸುವಲ್ಲಿ ಮೇಲುಗೈ ಸಾಧಿಸಿದೆ. ಈ ರೀತಿ ಶೃತಿ ಚಲನಚಿತ್ರಕ್ಕೆ ಮುಖ್ಯ ಪಾತ್ರಧಾರಿ ನಾಯಕ ನಟನ ಹುಡುಕಾಟದಲ್ಲಿರುತ್ತಾರೆ‌ ನಿರ್ದೇಶಕ ದ್ವಾರಕೀಶ್. ಆಗ ಇವರ ಕಣ್ಣಿಗೆ ಬಿದ್ದ ಹುಡುಗ ರಾಮಕೃಷ್ಣ. ಇದೇ ರಾಮಕೃಷ್ಣರನ್ನು ಸುನೀಲ್ ಆಗಿ ದ್ವಾರಕೀಶ್ ಚಿತ್ರರಂಗದಲ್ಲಿ ಪರಿಚಯಿಸಿದರು. ಆಗ ಚಿತ್ರದಲ್ಲಿ ಅಭಿನಯಿಸಿದವರೆಲ್ಲರೂ‌ ಹೊಸಬರೆ. ಅಂತೂ ಚಿತ್ರೀಕರಣ ಪೂರ್ಣಗೊಂಡಿತು. ಸಿನಿಮಾ‌ ರಿಲೀಸ್ ಆಗೇ‌ ಬಿಡ್ತು. ಮನೆಯಲ್ಲಿ ಸುಳ್ಳು ಹೇಳಿ ಚಾನ್ಸ್ ಗಿಟ್ಟಿಸಿಕೊಂಡಿದ್ರು ನಟಿ ಶ್ರುತಿ ಹಾಗೂ ಸುನಿಲ್ ಇಬ್ಬರು ಕೂಡ.

ಆರಂಭದ ದಿನಗಳಲ್ಲಿ ಕೊಂಚ ನಿರಾಸೆಯ ವಾತಾವರಣ. ಏಕೆಂದರೆ ಈ ಚಿತ್ರ ನೋಡುಗರ ಸಂಖ್ಯೆ ‌ವಿಪರೀತ ಕಡಿಮೆ ಪ್ರಮಾಣ, ಕಾರಣ ಎಲ್ಲರೂ ಹೊಸಬರು. ಈ ಸುದ್ದಿ ತಿಳಿದ ಸುನೀಲ್ ಸ್ನೇಹಿತರ ಜೊತೆಗೆ ಪ್ರಮೋದ್ ಚಿತ್ರ ಮಂದಿರಕ್ಕೆ ಹೊರಡುತ್ತಾರೆ. ಅಲ್ಲಿ ಯಾರೂ ಇಲ್ಲದಿರುವುದನ್ನು ನೋಡಿ ತುಂಬಾ ಅತ್ತಿದ್ದರಂತೆ ಸುನೀಲ್. ಆದರೆ ದೇವರು ಕೈ ಬಿಡಲಿಲ್ಲ. ದಿನ ಉರುಳಿದಂತೆ ಜನ ಬರಲು ಪ್ರಾರಂಭಿಸಿದರು, ಕೊನೆಗೂ ಸಿನಿಮಾ‌ ಶತದಿನೋತ್ಸವ ಆಚರಿಸೆ ಬಿಡ್ತು ನೋಡಿ. ಅಂದಿನಿಂದ ಇಂಜಿನಿಯರಿಂಗ್ ಶಿಕ್ಷಣವನ್ನು ಅರ್ಧದಲ್ಲಿಯೆ ತೊರೆದು ಸಂಪೂರ್ಣವಾಗಿ ತಮ್ಮನ್ನು ತಾವು ಚಿತ್ರರಂಗದಲ್ಲಿ ತೊಡಗಿಸಿಕೊಂಡವರು ಇನ್ನಿಲ್ಲವಾದ್ರು ಅನ್ನೋದು ಬೇಸರದ ಸಂಗತಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.