FactCheck:ಅಮಿರ್ ಖಾನ್ ಮನೆಯ ನಾಯಿಗೆ ಶಾರುಖ್ ಖಾನ್ ಎಂದು ನಾಮಕರಣ
Updated: Jul 7, 2025, 15:57 IST
|

ಸಿತಾರೆ ಜಮೀನ್ ಪರ್ ಸಿನಿಮಾದ ಗೆಲುವಿನ ಖುಷಿಯಲ್ಲಿ ಇರುವ ಆಮಿರ್ ಖಾನ್ ಅವರು ಶಾರುಖ್ ಖಾನ್ ಜೊತೆಗಿನ ವಿವಾದಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅಭಿಮಾನಿಗಳಿಗೆ ಒಂದು ಕಹಿ ಘಟನೆ ನೆನಪಾಗಿದೆ.ಬಹಳ ವರ್ಷಗಳ ಹಿಂದೆ ಆಮಿರ್ ಖಾನ್ ಅವರು ತಮ್ಮ ಮನೆಯ ನಾಯಿಗೆ ಶಾರುಖ್ ಖಾನ್ ಎಂದು ಹೆಸರು ಇಟ್ಟಿದ್ದರು! ಈ ವಿಷಯ ಸಿಕ್ಕಾಪಟ್ಟೆ ವಿವಾದಕ್ಕೆ ಕಾರಣ ಆಗಿತ್ತು.
ಆಮಿರ್ ಖಾನ್ ಅವರ ಈ ವರ್ತನೆಯಿಂದ ಶಾರುಖ್ ಖಾನ್ ಅವರ ಅಭಿಮಾನಿಗಳಿಗೆ ಮತ್ತು ಆಪ್ತರಿಗೆ ತುಂಬಾ ನೋವಾಗಿತ್ತು. ಆ ಸಮಯದಲ್ಲಿ ಆಮಿರ್ ಖಾನ್ ಮತ್ತು ಶಾರುಖ್ ಖಾನ್ ನಡುವೆ ಮುನಿಸು ಸೃಷ್ಟಿ ಆಗಿತ್ತು.2010ರ ಸಮಯದಲ್ಲಿ ಆಮಿರ್ ಖಾನ್ ಅವರು ಬ್ಲಾಗ್ ಬರೆಯುತ್ತಿದ್ದರು. ಶಾರುಖ್ ನನ್ನ ಕಾಲು ನೆಕ್ಕುತ್ತಿದ್ದಾನೆ. ನಾನು ಅವನಿಗೆ ಬಿಸ್ಕೆಟ್ ತಿನಿಸುತ್ತಿದ್ದೇನೆ. ಇದಕ್ಕಿಂತ ಇನ್ನೇನು ಬೇಕು ನನಗೆ ಎಂದು ಆಮಿರ್ ಖಾನ್ ಬರೆದಿದ್ದರು.
ಇದರಿಂದ ವಿವಾದ ಶುರುವಾಗಿತ್ತು. ಇಂಥ ವರ್ತನೆ ತೋರಿಸಿದಕ್ಕೆ ಅನೇಕರು ಅವರನ್ನು ಟೀಕೆ ಮಾಡಿದ್ದರು. ಬಳಿಕ ಆಮಿರ್ ಖಾನ್ಗೆ ತಮ್ಮ ತಪ್ಪಿನ ಅರಿವಾಯಿತು. ನಂತರ ಈ ಕುರಿತು ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಆಮಿರ್ ಖಾನ್ ಅವರು ಮಾತನಾಡಿದರು. ಆಮಿರ್ ಖಾನ್ ಅವರು ಆ ನಾಯಿಯನ್ನು ಬೇರೆಯವರಿಂದ ಖರೀದಿಸಿದ್ದರು. ಆ ಮಾಲಿಕರು ನಾಯಿಗೆ ಆ ರೀತಿ ಹೆಸರು ಇಟ್ಟಿದ್ದರು.
ಈ ಎಲ್ಲ ಘಟನೆಯನ್ನು ಅವರು ತಮಾಷೆಯಾಗಿ ವಿವರಿಸಿದ್ದರು ಕೂಡ ಅಭಿಮಾನಿಗಳು ಗರಂ ಆಗಿದ್ದರು. ಆದ್ದರಿಂದ ಆಮಿರ್ ಖಾನ್ ಅವರು ಶಾರುಖ್ ಖಾನ್ ಅವರನ್ನು ಭೇಟಿ ಮಾಡಿ ಕ್ಷಮೆ ಕೇಳಿದ್ದರು. ಅಲ್ಲದೇ ಶಾರುಖ್ ಮಕ್ಕಳಾದ ಆರ್ಯನ್ ಖಾನ್ ಹಾಗೂ ಸುಹಾನಾ ಖಾನ್ ಬಳಿಯೂ ಕ್ಷಮೆ ಕೇಳಿದ್ದರು.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023