ಅತ್ಯಂತ ಕೆಲಮಟ್ಟದ ಕೆಲಸಕ್ಕೆ ಇಳಿದಿರುವ ಹಮಾಸ್ ಮು.ಸ್ಲಿಮರು, ಬೆಚ್ಚಿಬಿದ್ದ ವಿಶ್ವ

 | 
ರು ಿ

ಇಸ್ರೇಲ್‌ ಹಮಾಸ್‌ ಉಗ್ರರ ಯುದ್ಧದಲ್ಲಿ ಸಾವಿನ ಸಂಖ್ಯೆ 1300ಕ್ಕೆ ಹೆಚ್ಚಳವಾಗಿದೆ. ಇನ್ನು ಗಾಯಾಳುಗಳ ಸಂಖ್ಯೆಯು 3300ಕ್ಕೆ ತಲುಪಿದೆ. ಈ ನಡುವೆ ಇಸ್ರೇಲ್‌ ಸೇನೆಯು ಗಾಜಾ ಪಟ್ಟಿ ಸುತ್ತಲಿನ ಉಗ್ರರ ನೆಲೆ ವಶಪಡಿಸುವ ಕಾರ್ಯವನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಹಮಾನ ನೌಕಪಡೆಯ ಉಪ ಕಂಮಾಡರ್‌ ಸೇರಿ ಹಲವು ಉಗ್ರರನ್ನು ಜೀವಂತ ಸೆರೆ ಹಿಡಿದ್ದಿದ್ದಾರೆ.

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ಯುದ್ಧ ಮುಂದುವರೆದಿದೆ. ಈ ಕುರಿತು ಇಸ್ರೇಲ್‌ ಸೇನಾ ಪಡೆಯು ಟ್ವೀಟ್‌ ಮಾಡಿದೆ. ಇಸ್ರೇಲ್‌ ಸುಫಾ ಮಿಲಿಟರಿ ಪೋಸ್ಟ್‌ನ ನಿಯಂತ್ರಣವನ್ನು ಮರಳಿ ಪಡೆಯುವ ಜಂಟಿ ಪ್ರಯತ್ನದಲ್ಲಿ ತುಸು ಯಶಸ್ವಿಯಾಗಿದ್ದು. ಸೇನೆಯ 13 ಗಣ್ಯ ಘಟಕವನ್ನು ಗಾಜಾ ಭದ್ರತಾ ಬೇಲಿಯ ಸುತ್ತಲಿನ ಪ್ರದೇಶಕ್ಕೆ ನಿಯೋಜಿಸಲಾಗಿದೆ. ಸೈನಿಕರು ಸುಮಾರು 250 ಒತ್ತೆಯಾಳುಗಳನ್ನು ಜೀವಂತವಾಗಿ ರಕ್ಷಿಸಿದ್ದಾರೆ. 

ಮಾತ್ರವಲ್ಲದೇ 60 ಕ್ಕೂ ಹೆಚ್ಚು ಹಮಾಸ್ ಭಯೋತ್ಪಾದಕರನ್ನು ತಟಸ್ಥಗೊಳಿಸಲಾಗಿದೆ ಮತ್ತು 26 ಮಂದಿಯನ್ನು ಬಂಧಿಸಲಾಗಿದೆ ಎಂದು ಟ್ವೀಟ್‌ನಲ್ಲಿ ತಿಳಿಸಲಾಗದೆ. ಇಸ್ರೇಲ್‌ ಸೇನೆ ಬಂಧಿಸಿರುವ ಉಗ್ರರ ಪೈಕಿ ಹಮಾಸ್ ದಕ್ಷಿಣ ನೌಕಾ ವಿಭಾಗದ ಉಪ ಕಮಾಂಡರ್ ಮುಹಮ್ಮದ್ ಅಬು ಅಲಿ ಕೂಡಾ ಒಬ್ಬರಾಗಿದ್ದಾರೆ ಎಂದು ಇಸ್ರೇಲ್‌ ಸೇನಾಪಡೆ ಖಚಿತಪಡಿಸಿದೆ. ಈ ಕುರಿತ ವಿಡಿಯೋವನ್ನ ಹಂಚಿಕೊಂಡಿದೆ.

ಇಸ್ರೇಲ್–ಹಮಾಸ್ ಉಗ್ರರ ನಡುವಿನ ಯುದ್ಧವು ಉತ್ತರದ ಸಿರಿಯಾ ಭಾಗಕ್ಕೂ ವಿಸ್ತರಿಸಿದೆ. ಸಿರಿಯಾ ರಾಜಧಾನಿ ಡಮಾಸ್ಕಸ್‌ನ ಅಂರಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಸಿರಿಯಾದ ಉತ್ತರ ಭಾಗದಲ್ಲಿರುವ ಅಲೆಪ್ಪೊ ನಗರದ ವಿಮಾನ ನಿಲ್ದಾಣದ ಮೇಲೆ ಇಸ್ರೇಲ್ ಸೇನೆ ವಾಯುದಾಳಿ ನಡೆಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸಿರಿಯಾ ವಿಮಾನ ನಿಲ್ದಾಣದ ದಾಳಿಯಿಂದಾಗಿ ರನ್‌ವೇ ಹಾಳಾಗಿದೆ, ಅಲ್ಲಿ ಕಾರ್ಯಾಚರಣೆ ಸ್ಥಗಿತಗೊಂಡಿದೆ. 

ಇನ್ನು ಈ ದಾಳಿಯಿಂದ ಜನರಿಗೆ ಗಾಯಗಳಾಗಿಲ್ಲ. ಇನ್ನು ಸಿರಿಯಾ ಮೇಲಿನ ದಾಳಿಯ ಬಗ್ಗೆ ಪ್ರತಿಕ್ರಿಯೆಗೆ ಇಸ್ರೇಲ್ ಸೇನೆ ನಿರಾಕರಿಸಿದೆ. ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿ ಬಗ್ಗೆ ಚರ್ಚಿಸಲು ಇರಾನ್‌ನ ವಿದೇಶಾಂಗ ಸಚಿವರು ಶುಕ್ರವಾರ ಸಿರಿಯಾಕ್ಕೆ ಭೇಟಿ ನೀಡಲಿದ್ದಾರೆ. ಅದಕ್ಕೆ ಒಂದು ದಿನ ಮೊದಲು ಈ ವಾಯುದಾಳಿ ನಡೆದಿದೆ. ಇನ್ನು ಇರಾನ್‌ನ ಬೆಂಬಲ ಇರುವ ಉಗ್ರರ ಗುಂಪುಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಆಗದಂತೆ ನೋಡಿಕೊಳ್ಳಲು ಇಸ್ರೇಲ್‌, ಸಿರಿಯಾ ದೇಶದ ವಿಮಾನ ನಿಲ್ದಾಣಗಳು ಹಾಗೂ ಬಂದರುಗಳ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.