ಹರೀಶ್ ಪೂಂಜಾ ಒಬ್ಬ ಬಚ್ಚಾ, ಸೌಜನ್ಯ ಮರು ತನಿಖೆ ಬಗ್ಗೆ ಸಿದ್ದು ಸ್ಪಷ್ಟತೆ

 | 
Bcf

ಕೆಲ ದಿನಗಳ ಹಿಂದಷ್ಟೇ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಅವರು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಬೆಂಗಳೂರಿನ ಸಿಎಂ ನಿವಾಸದ ಫೋಟೋ ಶೇರ್‌ ಮಾಡಿ ಕಲೆಕ್ಷನ್‌ ಮಾಸ್ಟರ್‌ ಆಫ್‌ ಕರ್ನಾಟಕ ಎಂಬ ಟ್ಯಾಗ್‌ಲೈನ್‌ ಬರೆದುಕೊಂಡಿದ್ದರು.

ಇದೀಗ ಅ ವಿಷಯದ ಕುರಿತಂತೆ ಸಿದ್ದರಾಮಯ್ಯ ಅವರು 
ಹರೀಶ್ ಪೂಂಜಾ ಎಂಎಲ್ಎ ಆಗಿರೋದು ಮೊನ್ನೆ, ನಾನು 1983ರಲ್ಲಿ ಎಂಎಲ್ಎ ಆಗಿದ್ದೇನೆ. 85ರಲ್ಲೇ ಮಿನಿಸ್ಟರ್ ಆಗಿದ್ದೇನೆ. ಅಂದು ಯಾರೂ ನನ್ನನ್ನು ಹಾಗೆ ಕರೆದಿಲ್ಲ. ರಾಜಕೀಯದಲ್ಲಿ ಇನ್ನೂ ಅವರು ಬಚ್ಚಾ. ಬಿಜೆಪಿ ಸರ್ಕಾರ, ಮುಖ್ಯಮಂತ್ರಿಗಳಿಗೆ ಹಾಗೆ ಹೇಳಲಿ ಹರೀಶ್ ಪೂಂಜಾ. 

ನಮಗೆ ಹೇಳೋದು ಬೇಡ ಎಂದು ಕಲೆಕ್ಷನ್ ಮಾಸ್ಟರ್ ಸಿಎಂ ಆಫ್ ಕರ್ನಾಟಕ ಪೋಸ್ಟ್ ಮಾಡಿದ ಹರೀಶ್ ಪೂಂಜಾಗೆ ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದರು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ 60ಕೋಟಿ ರೂ. ಆಫರ್ ಬಂದಿದೆ.

ಎಷ್ಟು ಮಂದಿ ಕಾಂಗ್ರೆಸ್‌ನವರಿಗೆ ಈ ರೀತಿಯ ಆಫರ್ ಬಂದಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಇದನ್ನು ಸಿ.ಟಿ.ರವಿಯವರಿಗೆ ಕೇಳಿ. ನನಗೆ ಇದರ ಬಗ್ಗೆ ಗೊತ್ತಿಲ್ಲ. ಬಿಜೆಪಿಯವರು ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿಯಿದೆ. ಆದರೆ ಈ ರೀತಿಯ ಆಫರ್‌ಗಳ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳಿದರು.

ಕಾರ್ಕಳ ಪರಶುರಾಮ ಮೂರ್ತಿಯ ಬಗ್ಗೆ ಪ್ರಶ್ನೆಗೆ ಅದನ್ನು ನಕಲಿಯೋ ಅಸಲಿಯೋ ಎಂದು ತನಿಖೆ ಮಾಡಿಸುತ್ತೇವೆ. ಸೌಜನ್ಯಾ ಪ್ರಕರಣದ ಮರುತನಿಖೆ ಬಗ್ಗೆಗಿನ ಪ್ರಶ್ನೆಗೆ ಅದು ಸಿಬಿಐ ಮಾಡಿರೋದು, ಕೇಂದ್ರ ಸರಕಾರ ಮರುತನಿಖೆ ಮಾಡಿಸಬೇಕು. ನಾವೇನು ಮಾಡಲು ಆಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.