ಆತ ನನ್ನ ಪ್ಯಾಂಟ್ ಒಳಗಡೆ ಕೈ ಹಾಕಿ ನೋವುಂಟು ಮಾಡಿದ್ದಾನೆ, ಹಳೆ ನೆನಪು ಹಂಚಿಕೊಂಡ ನ ಟಿ
May 8, 2025, 19:38 IST
|

ಭಾರತದ ಪ್ರಸಿದ್ಧ ಟಿವಿ ನಟಿ ಗೌತಮಿ ಕಪೂರ್ ಇತ್ತೀಚೆಗೆ ತಮ್ಮ ಬಾಲ್ಯದಲ್ಲಿ ನಡೆದ ಒಂದು ನೋವಿನ ಘಟನೆಯನ್ನು ಬಹಿರಂಗಪಡಿಸಿದ್ದಾರೆ. ಐದನೇ ತರಗತಿಯಲ್ಲಿ ಓದುತ್ತಿದ್ದಾಗ, ಅವರ ಕುಟುಂಬಕ್ಕೆ ಕಾರು ಇರಲಿಲ್ಲ, ಹಾಗಾಗಿ ಅವರು ಸಾರ್ವಜನಿಕ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಆ ಸಮಯದಲ್ಲಿ ಒಬ್ಬ ವ್ಯಕ್ತಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರಿಂದ ಅವರು ತುಂಬಾ ಭಯಭೀತರಾಗಿದ್ದರು ಎಂಬುದನ್ನು ಇದೀಗ ಬಹಿರಂಗಪಡಿಸಿದ್ದಾರೆ. ಇನ್ನು ಘಟನೆ ನಡೆದ ನಂತರ ಏನಾಗುತ್ತಿದೆ ಎಂಬ ಪರಿಜ್ಞಾನವೇ ಇಲ್ಲದೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸುಮಾರು ಅರ್ಧ ಗಂಟೆ ಸಮಯ ಬೇಕಾಯಿತು.
ಆಘಾತಗೊಂಡ ಪರಿಸ್ಥಿತಿಯಲ್ಲಿ ಆ ದುಷ್ಟ ವ್ಯಕ್ತಿ ಯಾರೆಂಬುದನ್ನು ನೋಡುವುದಕ್ಕೂ ಧೈರ್ಯ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.ಗೌತಮಿ ಮುಂದುವರಿದು, 'ನಾನು ಮನೆಗೆ ಬಂದು ನನ್ನ ತಾಯಿಗೆ ಧೈರ್ಯ ಮಾಡಿ ಈ ವಿಚಾರವನ್ನು ಹೇಳಿದಾಗ ಅವರು, ನೀನು ಹುಚ್ಚಳಾ? ನೀನು ತಿರುಗಿ ಆ ವ್ಯಕ್ತಿಗೆ ಚಪ್ಪಲಿ ಹೊಡೆಯಬೇಕಿತ್ತು ಅಥವಾ ಅವನ ಕಾಲರ್ ಹಿಡಿಯಬೇಕಿತ್ತು ಎಂದು ಹೇಳಿದರು. ಅವರು ನನಗೆ ಎಂದಿಗೂ ಹೆದರಬೇಡ ಎಂದು ಹೇಳಿದರು.
ಯಾರಾದರೂ ಎಂದಾದರೂ ಹಾಗೆ ಮಾಡಿದರೆ, ಅವರ ಕೈಯನ್ನು ಬಿಗಿಯಾಗಿ ಹಿಡಿದುಕೊಳ್ಳಿ. ಜೋರಾಗಿ ಕಿರುಚಿಕೊ, ಜನರ ನಡುವೆ ಇದ್ದಾಗ ನೀನು ಎಂದಿಗೂ ಹೆದರಬೇಡ. ನಿನಗೆ ಭಯವಾಗಿದ್ದರೆ, ನಿನ್ನೊಂದಿಗೆ ಮೆಣಸಿನ ಪುಡಿ ತೆಗೆದುಕೊಂಡು ಹೋಗಿ ಅವನ ಮುಖಕ್ಕೆ ಎಸೆಯಬೇಕು. ಘಟನೆ ನಡೆದ ಸ್ಥಳದಲ್ಲಿ ನಿಮ್ಮ ಚಪ್ಪಲಿಯನ್ನು ತೆಗೆದು ಅವನಿಗೆ ಹೊಡೆಯಬೇಕು. ನಿನಗೆ ಏನೂ ಆಗುವುದಿಲ್ಲ' ಎಂದು ಹೇಳಿದರು. ಈ ಮಾತನ್ನು ಹೇಳುವ ಮೂಲಕ ತಮ್ಮ ಹೆಣ್ಣು ಮಕ್ಕಳಿಗೆ ತಾಯಿ ಬೆಂಬಲಕ್ಕೆ ನಿಂತು ಯಾವ ರೀತಿ ಧೈರ್ಯ ತುಂಬಬೇಕು ಎಂದು ಹೇಳಿಕೊಡಬೇಕು ಎಂದು ತಿಳಿಸಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025