ಯಾರಿಗೂ ಹೇಳದೆ ಕೇಳದೆ ಮಂಜು ಪಾವಗಡ ನಿಶ್ಚಿತಾರ್ಥ ಮಾಡಿಕೊಂಡಿದ್ಯಾಕೆ, ಅಸಲಿ ಸತ್ಯ ಇಲ್ಲಿದೆ

 | 
Vj
 ಮಂಜು ಪಾವಗಡ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮಂಜು ಪಾವಗಡ ಚಿರಪರಿಚಿತ. ಮಜಾ ಭಾರತ, ಗಿಚ್ಚಿ ಗಿಲಿಗಿಲಿ, ಬಿಗ್​ಬಾಸ್​ ಮೂಲಕ ಎಲ್ಲರ ಮನೆಮಾತಾಗಿರೋ ನಟ ಮಂಜು ಪಾವಗಡ ಅವರು ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಬಿಗ್​ಬಾಸ್​ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡ ಹಾಸ್ಯ ನಟ ಮಂಜು ಪಾವಗಡ ಸದ್ಯ ಜಂಟಿಯಾಗಿದ್ದಾರೆ. ಸದ್ಯ ಪಾವಗಡದಲ್ಲಿ ಮಂಜು ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುಂದಿನ ನವೆಂಬರ್​ನಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಸದ್ಯ ಮಂಜು ಪಾವಗಡ ಅವರು ಕೈ ಹಿಡಿದ ಹುಡುಗಿ ಯಾರು ಅಂತ ಮಾಹಿತಿ ಸಿಕ್ಕಿಲ್ಲ. ಮಂಜು ಪಾವಗಡ ಅವರು ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೋಗಳು ನ್ಯೂಸ್​ ಫಸ್ಟ್​ಗೆ ಲಭ್ಯವಾಗಿವೆ.
ಮೊನ್ನೆಯಷ್ಟೇ ಮಂಜು ಪಾವಗಡ ಅವರು ಬೆಂಗಳೂರಿನಲ್ಲಿಯೇ ತಮ್ಮ ಹೊಸ ಮನೆಗೆ ಪ್ರವೇಶ ಮಾಡಿದ್ದರು. ಹೊಸ ಮನೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​​ ಆಗಿದ್ದವು. ಇನ್ನು ಮಂಜು ಪಾವಗಡ ಅವರ ಹೊಸ ಮನೆಗೆ ನಟ ರಾಜೀವ್, ಅಂಕಿತಾ ಜಯರಾಮ್ ಸೇರಿದಂತೆ ಮುಂತಾದವರು ಆಗಮಿಸಿ ಶುಭ ಹಾರೈಸಿದ್ದರು.
ನಂದಿನಿ ಎಂಬ ಹುಡುಗಿ ಜೊತೆಗೆ ಉಂಗುರ ಬದಲಾಯಿಸಿಕೊಂಡಿದ್ದು, ಇವರ ಎಂಗೇಜ್ಮೆಂಟ್‌ ಫೋಟೋಗಳು ವೈರಲ್‌ ಆಗಿವೆ. ನಂದಿನಿ ಅವರು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಇತರೆ ಮಾಹಿತಿ ಲಭ್ಯವಿಲ್ಲ. ಮನೆಯವರ ಸಮ್ಮುಖದಲ್ಲಿ ಮಂಜು ಪಾವಗಡ ಅವರು ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ನವೆಂಬರ್ 13 ಹಾಗೂ 14ರಂದು ಮದುವೆ ನಡೆಯಲಿದ್ದು, ಇವರದ್ದು ಅರೇಂಜ್‌ ಮ್ಯಾರೇಜ್‌ ಎಂದು ಹೇಳಲಾಗಿದೆ. 
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.